ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಂಚಿಕೇರಿ ಬಳಿ ಬೀಡು ಬಿಟ್ಟಿರುವ ಆನೆಗಳ ಹಿಂಡಿನಲ್ಲಿ ಹೆಣ್ಣಾನೆಯೊಂದು ಅವಧಿ ಪೂರ್ವದಲ್ಲಿ ಮರಿ ಹಾಕಿದ್ದು ಮರಿ ಸಾವುಕಂಡಿದೆ.


ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿತ್ತು.ಈ ವೇಳೆ ಹೆಣ್ಣಾನೆ ನಿನ್ನೆ ದಿನ ಅವಧಿ ಪೂರ್ವದಲ್ಲಿ ಮರಿಹಾಕಿದ್ದು ಸಾವನ್ನಪ್ಪಿದೆ. ಸ್ಥಳಕ್ಕೆ ಮಂಚಿಕೇರಿ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಮರಿ ಆನೆಯನ್ನು ಅಂತ್ಯಸಂಸ್ಕಾರ ಮಾಡಲಾಯಿತು.