ಸಚಿವ ಹೆಬ್ಬಾರ್ ಕ್ಷೇತ್ರದಲ್ಲಿ ಸಾರ್ವಜನಿಕರೇ ದುಡ್ಡು ಹಾಕಿ ರಸ್ತೆ ಸರಿಪಡಿಸಿದರು!

646

ಯಲ್ಲಾಪುರ:- ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಿದ್ದೇನೆ ಎಂದು ಯಲ್ಲಾಪುರದ ಶಾಸಕರಾಗಿ ಆಯ್ಕೆಯಾಗಿದ್ದ ಶಿವರಾಮ್ ಹೆಬ್ಬಾರ್ ತಮ್ಮ ಸ್ವಂತ ಹಣದಲ್ಲಿ ಯಲ್ಲಾಪುರ ನಗರಕ್ಕೆ ಹೊಂದಿಕೊಂಡ ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಟ್ಟಿದ್ದರು.ಆದ್ರೆ ಈಗ ಹೆಬ್ಬಾರ್ ಸಚಿವರಾಗಿದ್ದಾರೆ.ಹೊತೆಗೆ ಕೈತುಂಬಾ ಕೆಲಸದಲ್ಲಿ ತಮ್ಮ ಕ್ಷೇತ್ರವನ್ನು ಮರೆತಂತಿದೆ .ಹೌದು ಯಲ್ಲಾಪುರ ತಾಲೂಕಿನ ಅನಗೋಡ ಗ್ರಾಮಪಂಚಾಯ್ತಿ ವ್ಯಾಪ್ತಿಯ ತಟಗಾರ್ ಗ್ರಾಮದ ಜೋಡಳ್ಳ ,ಕಾರೇಮನೆ ರಸ್ತೆಯನ್ನು ಇಂದು ಗ್ರಾಮದ ಜನರೇ ಅವರಿವರ ಸಹಾಯದಲ್ಲಿ ಹಲವು ವರ್ಷದಿಂದ ಹಾಳಾಗಿದ್ದ ರಸ್ತೆಯನ್ನು ಸಚಿವರ ಅನುದಾನಕ್ಕೆ ಕಾಯದೇ ರಸ್ತೆ ಸರಿಪಡಿಸಿಕೊಳ್ಳುವ ಮೂಲಕ ಕ್ಷೇತ್ರವನ್ನು ಮರೆತ ಸಚಿವರಿಗೆ ಮಾದರಿಯಾಗಿ ತೋರಿಸಿಕೊಟ್ಟಿದ್ದಾರೆ.
ಇನ್ನು ಸರ್ಕಾರದ ಹಾಗೂ ಓಟು ನೀಡಿದ ಶಾಸಕರ ಅನುದಾನಕ್ಕೆ ಕಾಯದೇ ಸಾವಿರಾರು ರುಪಾಯಿ ವ್ಯಯಿಸಿರುವ ಗ್ರಾಮಸ್ತರಿಗೆ ಸ್ಥಳೀಯರೇ ಆದ ಸಿ.ಜಿ ಭಟ್,ರಫೀಕ್ ,ಎಸ್.ಎನ್ ಭಟ್,ಜಾಫರ್ ಮುಂತಾದವರು ಕೈಜೋಡಿಸಿ ಮಾದರಿಯಾದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!