ಯಲ್ಲಾಪುರ: ಖಾಸಗಿ ಬಸ್ ನಲ್ಲಿ ಸಾಗಿಸುತ್ತಿದ್ದ ಹವಾಲಾ ಹಣ ವಶಕ್ಕೆ.

688

ಕಾರವಾರ :- ಬೆಳಗಾವಿ ಯಿಂದ ಮಂಗಳೂರಿಗೆ ಕೊಂಡೊಯ್ಯುತಿದ್ದ ಹವಾಲ ಹಣವನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದ ಘಟನೆ ನಡೆದಿದೆ.

ಗುಜರಾತ್ ಮೂಲದ ಐವರು ಕೆಎ 51 ಎಎಫ್ 9490 ನೊಂದಣಿ ಹೊಂದಿದ ಗಣೇಶ ಟ್ರಾವೆಲ್ಸ್ ನಲ್ಲಿ ಸಾಗಿಸುತ್ತಿದ್ದ 50 ಲಕ್ಷ ರೂ ಹಣ ವಶಕ್ಕೆ ಪಡೆಯಲಾಗಿದೆ.

ದಿನೇಶ ಠಾಕೂರ (34), ಪಂಕಜಕುಮಾರ ಪಟೇಲ್ (40), ಗೋವಿಂದ ಪಟೇಲ್ (50), ಮುಖೇಶ ಪಟೇಲ್ (55), ಉಪೇಂದ್ರ ಪಟೇಲ್ (47) ಬಂಧಿತರಾಗಿದ್ದು ಯಲ್ಲಾಪುರದ ಜೋಡುಕೆರೆ ಬಳಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ವಿವರ ತನಿಖೆ ಯಿಂದ ಹೊರಬರಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!