ಯಲ್ಲಾಪುರ :- ಮಾಲೀಕತ್ವ ವಿಚಾರವಾಗಿ
ಅಂಗಡಿಗೆ ಲಾರಿ ನುಗ್ಗಿಸಿ ಹಗ್ಗ ಕಟ್ಟಿ ಮಳಿಗೆ ದ್ವಂಸ ಗೊಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ನಗರದ ಗಾಂಧಿ ಚೌಕ್ ನಲ್ಲಿ ಇಂದು ಸಂಜೆ ನಡೆದಿದೆ.

ಯಲ್ಲಾಪುರದ ಚಂದ್ರಶೇಖರ್ ಬಾಬು ನಾಯ್ಕ ಹಾಗೂ ನಾಗರಾಜ್ ನಾಯ್ಕ ಎಂಬುವವರಿಗೆ ಸೇರಿದ ಜನತಾ ಕೂಲ್ಡ್ರಿಂಗ್ಸ್ ಹಾಗೂ ನಕ್ಷತ್ರ ಮೊಬೈಲ್ಸ್ ಎಂಬ ಹೆಸರಿನ ಮಳಿಗೆಯಾಗಿದ್ದು ಈ ಮಳಿಗೆಯ ಹಕ್ಕಿನ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತಿದ್ದರೂ ಯಲ್ಲಾಪುರದ ಉದಯ್ ,ಗಣೇಶ್ ಹಾಗೂ ಭರತ್ ಎಂಬುವವರು ಗುಂಪುಕಟ್ಟಿಕೊಂಡು ಸ್ಥಳಕ್ಕೆ ಬಂದಿದ್ದು ಗಲಾಟೆ ಮಾಡಿದ್ದಲ್ಲದೇ ಸಿನಿಮೀಯ ರೀತಿಯಲ್ಲಿ ಲಾರಿಯನ್ನು ತಂದು ಮಳಿಗೆಯ ಅಂತಸ್ತಿತ ಕೋಳಿಗೆ ಹಗ್ಗವನ್ನು ಕಟ್ಟಿ ಮಳಿಗೆಯನ್ನು ಕೆಡಗುವ ಪ್ರಯತ್ನ ಮಾಡಿದ್ದಾರೆ.


ಈ ವೇಳೆ ಎರಡೂ ಮಳಿಗೆಗೆ ಸಾಕಷ್ಟು ಹಾನಿಯಾಗಿದ್ದು ಎಂಟು ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಮಳಿಗೆ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.