ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಬದಲಿಸಬೇಕು-ಸಚಿವ ಶಿವರಾಮ್ ಹೆಬ್ಬಾರ್.

398

ಕಾರವಾರ :- ಜಾರಕಿ ಹೊಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಬದಲಾಯಿಸಬೇಕು,ನಾವೆಲ್ಲ ಜಾರಕಿಹೊಳೆ ಸ್ನೇಹಿತರು.ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಕೈ ಬಿಡುವಂತೆ ಅವರಲ್ಲಿ ನಾನು ಮನವಿ ಮಾಡುತ್ತೇನೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ಇಂದು ಯಲ್ಲಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಾರಕಿ ಹೊಳಿ ಅವರಿಗೆ ಪುನಹಾ ಸಚಿವ ಸ್ಥಾನ ಕೊಡಬೇಕೊ ಬಿಡಬೇಕೊ ಎನ್ನುವುದು ಮುಖ್ಯ ಮಂತ್ರಿ ನಿರ್ಧಾರ,ಈ ಬಗ್ಗೆ
ಪಕ್ಷದ ಹೈ ಕಮಾಂಡ್ ನಿರ್ಧಾರ ತೆಗದುಕೊಳ್ಳುತ್ತದೆ.
ಅವರು ರಾಜೀನಾಮೆ ವಿಚಾರವಾಗಿ ಉದ್ವೇಗವಾಗಿ ಮಾತನಾಡಿದ್ದಾರೆ ಎಂದರು.ಇನ್ನು ನಟ ಚೇತನ್ ರಿಂದ ಹೆಬ್ಬಾರ್ ವಿರುದ್ಧ ಮಾನ ನಷ್ಟ ಮೊಕದಮ್ಮೆ ದಾಖಲಿಸಿರುವ ಕುರಿತು ಮಾತನಾಡಿದ ಅವರು
ನಟ ಚೇತನ್ ನನ್ನ ವಿರುದ್ಧ 1₹ ಮಾನ ನಷ್ಟ ಮೊಕದ್ದಮೆ ಹಾಕಿದ್ದಾರೆ,ನನ್ನ ಜಾತಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಜಾತಿ ಬಗ್ಗೆ ಸಂಘರ್ಷ ಹುಟ್ಟುಹಾಕಬಾರದು,
ಸಮಾಜದ ಮುಖಂಡನಾಗಿ ಉತ್ತರ ಕೊಟ್ಟಿದ್ದೇನೆ ಅದಕ್ಕೆ ಬದ್ಧನಾಗಿದ್ದೇನೆ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!