BREAKING NEWS
Search

ಅಧಿಕಾರಿಗೆ ಲಂಚ ದಾಹಕ್ಕೆ ಬೇಸತ್ತು ಭಿಕ್ಷೆ ಬೇಡಿ ಸಂಗ್ರಹಿಸಿದ ಹಣದ ಚಕ್ ಮರಳಿಸಿದ ತಹಶೀಲ್ದಾರ್ !

2737

ಯಲ್ಲಾಪುರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿ ಎಂದರೇ ಅಲ್ಲಿ ಜನ ಕಾಣಿಕೆ ನೀಡದೇ ಕೆಲಸಗಳು ನಡೆಯುವುದು ಕಡಿಮೆ. ಜನ ಪ್ರತಿ ದಿನ ಚಿಕ್ಕ ಪುಟ್ಟ ಕೆಲಸದಿಂದ ಹಿಡಿದು ಯಾವುದೇ ಕೆಲಸ ಆಗಬೇಕು ಎಂದರೆ ಅಲ್ಲಿ ಹಣ ನೀಡಬೇಕು.

ಇಲ್ಲದಿದ್ದರೇ ಕಚೇರಿಗೆ ಅಲೆಯಿಸುವ ಕೆಲಸ ನಿರಂತರವಾಗಿ ನಡೆಯುತ್ತದೆ. ಆದರೇ ಈ ಹಿಂದೆ ಯಲ್ಲಾಪುರದ ಕಂದಾಯ ಇಲಾಖೆಯಲ್ಲಿ ಸ್ಥಳೀಯ ನಿವಾಸಿ ಅಚ್ಯುತ್ ಕುಮಾರ್ ಎಂಬುವವರು ಪಾಣಿ ಯಲ್ಲಿ ಹೆಸರು ಬದಲಾವಣೆ ಕುರಿತು ಕಚೇರಿಗೆ ಅಲೆದಿದ್ದಾರೆ. ಅಧಿಕಾರಿ ಕೇಳಿದ ದಾಖಲೆ ನೀಡಿದರೂ ಲಂಚ ನೀಡಲಿಲ್ಲ ಎನ್ನುವ ಕಾರಣಕ್ಕೆ ಕೆಲಸವನ್ನು ವಿಳಂಬ ಮಾಡಿದ್ದರು.

ಅಧಿಕಾರಿಗಳ ಎಂಜಲು ಆಸೆಗೆ ಬೇಸತ್ತ ಅವರು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಯ ಹೆಸರಿನಲ್ಲಿ ಬಿಕ್ಷೆ ಬೇಡಿ ಹಣ ಹೊಂದಿಸಿ ಯಲ್ಲಾಪುರ ತಹಶೀಲ್ದಾರ್ ಗೆ ಚಕ್ ಮೂಲಕ ನೀಡಿದ್ದರು.
ನಂತರ ತಹಶೀಲ್ದಾರ್ ರವರು ಈ ಹಣ ಸ್ವೀಕರಿಸಲು ನಿರಾಕರಿಸಿದ್ದರು.ಆದರೇ ಅಧಿಕಾರಿಗೆ ಲಂಚ ನೀಡುವುದಕ್ಕಾಗಿ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ತಹಶಿಲ್ದಾರ್ ಮೂಲಕ ರೆಡ್ ಕ್ರಾಸ್ ಸಂಸ್ಥೆಗೆ ಕೊಟ್ಟಿದ್ದರು.

ಆದರೇ ಇದೀಗ ಈ ಹಣವನ್ನು ರೆಡ್ ಕ್ರಾಸ್ ಸಂಸ್ಥೆ ಗೆ ಅಧಿಕಾರಿಗೆ ಲಂಚದ ಸಲವಾಗಿ ಸಂಗ್ರಹಿಸಿದ್ದು ಆಗಿದ್ದು ಈ ಕಾರಣದಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಪಡೆಯಲು ಅವಕಾಶ ಇರುವುದಿಲ್ಲ.

ಹೀಗಾಗಿ ತಾವು ಯಾರಬಳಿ ಹಣ ಸಂಗ್ರಹಿಸಿದ್ದಿರೋ ಅವರಿಗೆ ಮರಳಿಸುವಂತೆ ತಿಳಿಸಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!