ಕಾರವಾರ:- ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಭಾಗಕ್ಕೆ ಬರುತಿದ್ದ ಲಾರಿಯೊಂದು ಹೈವೇ ಪೆಟ್ರೋಲಿಂಗ್ ಪೊಲೀಸ್ ವಾಹನಕ್ಕೆ ಗುದ್ದಿ ಇಬ್ಬರು ಹೆಡ್ ಕಾನ್ ಸ್ಟೇಬಲ್ ಗಂಭೀರ ಗಾಯಗೊಂಡ ಘಟನೆ ಯಲ್ಲಾಪುರು ಹುಬ್ಬಳ್ಳಿ ಮಾರ್ಗದ ಹೆದ್ದಾರಿಯಲ್ಲಿ ನಡೆದಿದೆ.


ಮಾರುತಿ ಎಂ ಹೆಡ್ ಕಾನ್ ಸ್ಟೇಬಲ್ , ಕಾರವಾರ ಮೂಲದ ವೆಂಕಣ್ಣ ರೆಡ್ಡಿ ಹೆಡ್ ಕಾನ್ ಸ್ಟೇಬಲ್ ಗಂಭೀರ ಗಾಯಗೊಂಡವರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.