BREAKING NEWS
Search

yallapura:ಅಧ್ಯಯನಕ್ಕಾಗಿ ಅಘೋರೇಶ್ವರ ದೇವಸ್ಥಾನದ ಪ್ರವಾಸ ಮಾಡಿದ ವೇದ ವಿದ್ಯಾರ್ಥಿಗಳು

52

ಸಾಗರ:- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ (yallapura) ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಮಹಾ ಪಾಠಶಾಲೆಯ ಶ್ರೀ ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನ ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇಕ್ಕೇರಿ ಅಘೋರೇಶ್ವರ ದೇವಸ್ಥಾನಕ್ಕೆ ಆಲಯ ವಾಸ್ತು ಶಿಲ್ಪ ಮತ್ತು ಆಗಮ ವಿದ್ಯಾ ಪ್ರಾಯೋಗಿಕ ಅಧ್ಯಯನಕ್ಕಾಗಿ ಪ್ರವಾಸ ಕೈಗೊಂಡಿದ್ದರು.

ಸಂಸ್ಥೆಯ ಜ್ಯೋತಿಷ್ಯ ಪ್ರಾಧ್ಯಾಪಕ ಡಾ. ನಾಗೇಶ್ ಭಟ್ ಮತ್ತು ಇತರ ಶಿಕ್ಷಕರು ಶಾಸ್ತ್ರಿಗಳು ಆಗಮಿಸಿದ್ದರು.

ಸಾಗರದ ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಬಾ ನ ಜಗದೀಶ್ ಭಟ್ ರವರು ಜನರಲ್ ವಿದ್ಯಾರ್ಥಿಗಳಿಗೆ ದೇವಸ್ಥಾನದ ವಾಸ್ತುಶಿಲ್ಪದ ಬಗ್ಗೆ ಮಾಹಿತಿ ಮತ್ತು ಜ್ಞಾನವನ್ನು ನೀಡಿದರು.

ಇದನ್ನೂ ಓದಿ:-ಗೋಕರ್ಣ ಕಡಲಲ್ಲಿ ಈಜಲು ಹೋಗಿ ಇಬ್ಬರು ನೀರುಪಾಲು.

ಸಾಗರ ತಾಲೂಕಿನ ಇಕ್ಕೇರಿಯ ಅಘೋರೇಶ್ವರ ದೇವಸ್ಥಾ‌ನ ಐತಿಹಾಸಿಕವಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಗರದಿಂದ ಕೇವಲ 6 ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಶಿವನಿಗೆ ಅರ್ಪಿತವಾಗಿರುವ ಅಘೋರೇಶ್ವರ ಎಂಬ ಪ್ರಸಿದ್ಧವಾದ ದೇವಸ್ಥಾನವಿದೆ.

ಇದು ಕೆಳದಿ ನಾಯಕರ ಹಿಂದಿನ ರಾಜಧಾನಿ ಆಗಿತ್ತು, ಕನ್ನಡ ಭಾಷೆಯಲ್ಲಿ ಇಕ್ಕೇರಿ ಪದ ಎಂದರೆ ‘ಎರಡು ಬೀದಿಗಳು’ ಎಂದರ್ಥ. ಇಕ್ಕೇರಿಯು 16-17ನೇ ಶತಮಾನದಲ್ಲಿ ಆಗಿನ ಅರಸರಾದ ಕೆಳದಿ ನಾಯಕ ರಾಜವಂಶದ ರಾಜಧಾನಿಯಾಗಿತ್ತು.

ಅಘೋರೇಶ್ವರ ಎಂದು ಕರೆಯಲ್ಪಡುವ ಈ ಪುರಾತನ ಪರಂಪರೆಯ ದೇವಾಲಯವು ನಿರ್ಮಾಣಗೊಂಡ ಹಲವು ವರ್ಷಗಳ ನಂತರವೂ ಅದರ ವೈಭವದ ಗತಕಾಲದ ಬಗ್ಗೆ ಸಾಕಷ್ಟು ಹೇಳುತ್ತದೆ.ಹೇರಳವಾಗಿ ಲಭ್ಯವಿರುವ ಜನಪ್ರಿಯ ಕಲ್ಲಿನ ಗ್ರಾನೈಟ್‌ನಿಂದ ನಿರ್ಮಿಸಲಾದ ಈ 16 ನೇ ಶತಮಾನದ ದೇವಾಲಯವು ವಿಜಯನಗರ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ವಿಶಿಷ್ಟ ಮಿಶ್ರಣವಾಗಿದೆ. ಇಲ್ಲಿ ಪಾರ್ವತಿ, ಅಘೋರೇಶ್ವರ, ನಂದಿ ಮೂರು ದೇವಾಲಯಗಳಿವೆ. ಭಗವಾನ್ ಶಿವನನ್ನು ಮುಖ್ಯ ದ್ವಾರದಲ್ಲಿ ಎರಡು ಆನೆಗಳೊಂದಿಗೆ ಮುಖ್ಯ ಸಭಾಂಗಣ ಅಥವಾ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಈ ದೇವಾಲಯವು ಶಕ್ತಿ ಪೀಠಗಳು ಎಂದೂ ಕರೆಯಲ್ಪಡುವ 32 ಸ್ತ್ರೀ ದೇವತೆಗಳಿಂದ ಸುತ್ತುವರಿದಿದೆ. ಈ ಶಕ್ತಿ ಪೀಠಗಳು ದುರ್ಗಾ ದೇವಿಯ ರೂಪಗಳಾಗಿವೆ. ಇತರ ಅನೇಕ ದೇವಾಲಯಗಳಂತೆ ಇಲ್ಲಿಯೂ ಸಹ ನೀವು ಗಣೇಶನ ಪ್ರತಿಮೆಯನ್ನು ಕಾಣಬಹುದುದಾಗಿದ್ದು ಇಂದಿನ ದಿನದಲ್ಲಿ ವೈದಿಕ ವೃತ್ತಿಯಿಂದ ವಿಮುಖವಾಗುತ್ತಿರು ಕಾಲಮಾನದಲ್ಲಿ ವೇದ ಅಧ್ಯಯನಕ್ಕೆ ಒತ್ತು ಕೊಟ್ಟು ವೇದ ಶಾಲೆಯನ್ನು ನಡೆಸುವ ಜೊತೆ ಇಲ್ಲಿನ ಮಕ್ಕಳಿಗೆ ಧಾರ್ಮಿಕ ಮಹತ್ವವನ್ನು ತಿಳಿಸಿಕೊಡುತ್ತಿರುವ ಯಲ್ಲಾಪುರದ ವೇದ ಶಾಲೆಯ ಕಾರ್ಯ ಶ್ಲಾಘನೀಯ ವಾಗಿದೆ.

ಬೆಂಗಳೂರಿನ ರಸ್ತೆಯಲ್ಲಿ ಭವಾನಿ ರೇವಣ್ಣ ಆವಾಜ್ ಹಾಕಿದ್ದು ಹೇಗೆ ವಿಡಿಯೋ ನೋಡಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!