ಕಾರವಾರ :- ತಂಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಪ್ರಶ್ನೆ ಮಾಡಿ ಗದರಿಸಿದ್ದಕ್ಕೆ ಅಕ್ಕನನ್ನೆ ಚಾಕು ಇರಿದು ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತಡುಗುಣಿಯಲ್ಲಿ ನಡೆದಿದೆ.
ತಡುಗುಣಿಯ ಸರೋಜಿನಿ ನಾಯರ್ ತಂಗಿಯ ಪ್ರಿಯಕರನಿಂದ ಕೊಲೆಯಾದ ಮಹಿಳೆ.
ಶಿರಸಿ ತಾಲೂಕು ಕೆರೆಕೊಪ್ಪ ನಿವಾಸಿ ಕೃಷ್ಣ ನಾಯ್ಕ ಎಂಬಾತನೇ ಕೊಲೆ ಮಾಡಿದ ವ್ಯಕ್ತಿ.
ನಿನ್ನೆ ರಾತ್ರಿ ಸರೋಜಿನಿಯ ತಂಗಿಯನ್ನು ಹುಡಕಿಕೊಂಡು ಮನೆಗೆ ಬಂದಿದ್ದಾನೆ. ಈ ವೇಳೆ ಮನೆಯಲ್ಲಿ ಇಲ್ಲದ ಆಕೆಯನ್ನು ಈಕೆಯ ಬಳಿ ವಿಚಾರಿಸಿದ್ದಾನೆ. ಆದರೇ ಅಕ್ರಮ ಸಂಬಂಧ ವಿಷಯ ತಿಳಿದಿದ್ದ ಸರೋಜಿನಿ ಈತನಿಗೆ ಗದರಿಸಿದ್ದಾಳೆ. ಈ ವೇಳೆ ಇಬ್ಬರಲ್ಲೂ ಮಾತಿಗೆ ಮಾತು ಬೆಳದಿದ್ದು ,ತನ್ನ ಬಳಿ ಇದ್ದ ಚಾಕುವನ್ನು ತೆಗೆದು ಸರೋಜಿನಿ ಹೊಟ್ಟೆಗೆ ಚುಚ್ಚಿದ್ದು ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ರಕ್ತಸ್ರಾವವಾಗಿ ಸರೋಜಿನಿ ಮೃತಪಟ್ಟಿದ್ದಾಳೆ.
ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು 24 ಘಂಟೆ ಯೊಳಗೆ ಆರೋಪಿ ಶಿರಸಿ ತಾಲೂಕಿನ ಕೆರೆಕೊಪ್ಪ ನಿವಾಸಿ ಕೃಷ್ಣ ನಾಯ್ಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.