River rafting |ರಿವರ್ ರಾಪ್ಟಿಂಗ್ ಏಕಾ ಏಕಿ ದರ ಹೆಚ್ಚಳ -ದಲ್ಲಾಳಿಗಳ ನಡುವೆ ಮಾರಾಮಾರಿ!

River rafting:Clash Between Agents and Operators Over Sudden Kali River Rafting Price Hike in Dandeli
Clash between rafting operators and agents over sudden Kali River rafting price hike at Ganeshgudi in Dandeli, Uttara Kannada district. Clash between rafting operators and agents over sudden Kali River rafting price hike at Ganeshgudi in Dandeli, Uttara Kannada district.
Clash between rafting operators and agents over sudden Kali River rafting price hike at Ganeshgudi in Dandeli, Uttara Kannada district.

River rafting |ರಿವರ್ ರಾಪ್ಟಿಂಗ್ ಏಕಾ ಏಕಿ ದರ ಹೆಚ್ಚಳ -ದಲ್ಲಾಳಿಗಳ ನಡುವೆ ಮಾರಾಮಾರಿ!

 

Dandeli :- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ(joida) ತಾಲೂಕಿನ ಗಣೇಶಗುಡಿಯಲ್ಲಿ ನಡೆಯುತ್ತಿರುವ ಕಾಳಿನದಿ ರಿವರ್ ರಾಪ್ಟಿಂಗ್ ದರ ವಿಷಯದಲ್ಲಿ ಜಟ್ಟಿದಾರರು ಮತ್ತು ಏಜಂಟರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.

Advertisement

Dandeli:ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ-ಜಿಗುರಿದ ಪ್ರವಾಸೋಧ್ಯಮ

ಗಣೇಶಗುಡಿಯಲ್ಲಿ ಒಟ್ಟು 9 ರ್ಯಾಪ್ಟಿಂಗ್ ಜಟ್ಟಿಗಳಿವೆ.ಈ ಹಿಂದೆ ರಿವರ್ ರಾಫ್ಟಿಂಗ್ ಗೆ 250 ರೂ ದರವಿತ್ತು.ಆದರೇ ಏಕಾಏಕಿ 700 ರಿಂದ 1000 ರೂ ಗಳ ವರೆಗೆ ದರ ಏರಿಸಲಾಗಿದೆ.ಇದಲ್ಲದೇ ಅನಧಿಕೃತ ಜಟ್ಟಿಗಳು ಸಹ ಕಾರ್ಯನಿರ್ವಹಿಸುತಿದ್ದು ಹೆಚ್ಚಿನ ದರ ತೆಗೆದುಕೊಳ್ಳುತ್ತಿರುವುದರಿಂದ ಪ್ರವಾಸಿಗರೂ ಸಮಸ್ಯೆಯಾಗುತಿತ್ತು.

Ramnagar police station
Ramnagar police station image

ಈಹಿನ್ನಲೆಯಲ್ಲಿ ರೆಸಾರ್ಟ ಹಾಗೂ ಹೋಮ್ ಸ್ಟೇ ಮಾಲೀಕರು ತಹಶಿಲ್ದಾರ್ ಗೆ ದೂರು ನೀಡಿದ್ದು ಸೂಕ್ತ ದರ ನಿಗದಿ ಮಾಡುವಂತೆ ಮನವಿ ಮಾಡಿದ್ದರು.ದೂರು ನೀಡಿದ್ದರೂ ,ಕ್ರಮ ಜರುಗದೇ ಏಕಾ ಏಕಿ ದರ ಏರಿಕೆ ಮಾಡಿದ್ದರಿಂದ ಜಟ್ಟಿದಾರರಿಗೆ ಪ್ರಶ್ನೆ ಮಾಡಿದ್ದ ದಲ್ಲಾಳಿಗಳು ಹಾಗೂ ರೆಸಾರ್ಟ ಮಾಲೀಕರು ದರ ಕಡಿಮೆ ಗೊಳಿಸುವಂತೆ ಕೇಳಿದ್ದರು.ಆದರೇ ದರ ಕಡಿಮೆ ಮಾಡಲು ಒಪ್ಪದ ಜಟ್ಟಿದಾರರು ಜಿದ್ದು ಹಿಡಿದಿದ್ದು ಮಾತಿಗೆ ಮಾತು ಬೆಳೆದ ಮಾರಾಮಾರಿ ನಡೆದಿದೆ.

ಸ್ಥಳಕ್ಕೆ ರಾಮನಗರ ಪೊಲೀಸರ ಆಗಮಿಸಿ ಗಲಾಟೆ ತಹಬದಿಗೆ ತಂದಿದ್ದು  ಪ್ರಕರಣ ರಾಮನಗರ ಠಾಣೆಯ ಮೆಟ್ಟಿಲೇರಿದೆ.

ಸಧ್ಯ ಏಕಾ ಏಕಿ ದರ ಹೆಚ್ಚಳ ಮಾಡಲಾಗಿದ್ದು ಇದರದ ಪ್ರವಾಸೋಧ್ಯಮಕ್ಕೂ ಹೊಡೆತ ಬೀಳುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಜಿಲ್ಲಾ ಪ್ರವಾಸೋಧ್ಯಮ ಸಮಿತಿ ದರ ನಿಗದಿ ಮಾಡುವಂತೆ ಆಗ್ರಹಿಸಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement