Uttara Kannada |  ಲೋನ್ ಆ್ಯಪ್ ವಂಚನೆ; ಮೂರು ಸಾವಿರ ಸಾಲ ಪಡೆಯಲು ಹೋಗಿ ₹6.28 ಲಕ್ಷ ಕಳೆದುಕೊಂಡ ಸಿದ್ದಾಪುರದ ಮಹಿಳೆ

Nithin gavkar karwar

Uttara Kannada |  ಲೋನ್ ಆ್ಯಪ್ ವಂಚನೆ; ಮೂರು ಸಾವಿರ ಸಾಲ ಪಡೆಯಲು ಹೋಗಿ ₹6.28 ಲಕ್ಷ ಕಳೆದುಕೊಂಡ ಸಿದ್ದಾಪುರದ ಮಹಿಳೆ.

ಕಾರವಾರ: ನಕಲಿ ಲೋನ್ ಆ್ಯಪ್ ಮೂಲಕ ಸಾಲ ಪಡೆದಿರುವುದಾಗಿ ಸುಳ್ಳು ಆರೋಪ ಮಾಡಿ, ಮೊಬೈಲ್‌ನಲ್ಲಿರುವ ಸಂಪರ್ಕ ಸಂಖ್ಯೆಗಳಿಗೆ ಸಂದೇಶ ಕಳುಹಿಸಿ ಮಾನಹಾನಿ ಮಾಡುವುದಾಗಿ ಬೆದರಿಸಿ ಸಿದ್ದಾಪುರದ(siddapur) ಮಹಿಳೆಯೊಬ್ಬರಿಂದ ಬರೋಬ್ಬರಿ ₹6,28,898 ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸಿದ್ದಾಪುರದ ಮಹಿಳೆಯೊಬ್ಬರು 2026ರ ಜೂನ್ 1ರಂದು ಗೂಗಲ್‌ನಲ್ಲಿ ಹುಡುಕಾಟ ನಡೆಸುವಾಗ ‘Instant Rupee App’ ಎಂಬ ಲೋನ್ ಆ್ಯಪ್ ಗಮನಕ್ಕೆ ಬಂದಿದೆ. ಅದರ ನೋಟಿಫಿಕೇಶನ್‌ಗಳಿಗೆ ಅನುಮತಿ ನೀಡಿದ ಬಳಿಕ ಮೊಬೈಲ್‌ನಲ್ಲಿ ಲೋನ್ ಆ್ಯಪ್ ವ್ಯಾಲೆಟ್ ಡೌನ್‌ಲೋಡ್ ಆಗಿದ್ದು, ಅದರಲ್ಲಿ ₹3,000 ಸಾಲ ಮಂಜೂರಾದಂತೆ ತೋರಿಸಲಾಗಿದೆ.

ಬಳಿಕ ಜೂನ್ 3ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಸಾಲದ ಮೊತ್ತಕ್ಕೆ ಬಡ್ಡಿ ಸೇರಿಸಿ ₹32,000 ಪಾವತಿಸುವಂತೆ ಒತ್ತಾಯಿಸಿದ್ದಾನೆ. ಆದರೆ ತಾವು ಯಾವುದೇ ಸಾಲ ಪಡೆದಿಲ್ಲ ಎಂದು ಮಹಿಳೆ ಸ್ಪಷ್ಟಪಡಿಸಿದರೂ, ವಿವಿಧ ವಿದೇಶಿ ಹಾಗೂ ಇತರ ಮೊಬೈಲ್ ಸಂಖ್ಯೆಗಳಿಂದ ನಿರಂತರ ಕರೆಗಳು ಬಂದಿವೆ ಎನ್ನಲಾಗಿದೆ.

Advertisement

ಇಷ್ಟಕ್ಕೇ ನಿಲ್ಲದ ವಂಚಕರು, ಮಹಿಳೆಯ ಮೊಬೈಲ್‌ನಲ್ಲಿರುವ ಸಂಪರ್ಕ ಸಂಖ್ಯೆಗಳಿಗೆ ಸಾಲ ಬಾಕಿ ಇರುವುದಾಗಿ ಸಂದೇಶ ಕಳುಹಿಸಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.Siddapur| ₹2 ಸಾವಿರ ಕಳ್ಳತನಕ್ಕೆ ಎರಡು ಲಕ್ಷದ ಕಾರಿನಲ್ಲಿ ಬಂದ ಅಂತರ ಜಿಲ್ಲಾ ಕಳ್ಳರು ಲಾಕ್ !

ಸಂಬಂಧಿಕರು ಹಾಗೂ ಸ್ನೇಹಿತರ ಮುಂದೆ ಮರ್ಯಾದೆ ಹೋಗಬಹುದು ಎಂಬ ಆತಂಕದಿಂದ ಮಹಿಳೆ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳು ಮತ್ತು ಯುಪಿಐ ಐಡಿಗಳಿಗೆ ಹಣ ವರ್ಗಾಯಿಸಿದ್ದಾರೆ. 2026ರ ಜೂನ್ 3ರಿಂದ ಅಕ್ಟೋಬರ್ 21ರವರೆಗೆ ಹಂತ ಹಂತವಾಗಿ ಒಟ್ಟು ₹6,28,898 ಪಾವತಿಸಿದ್ದಾರೆ.

ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ: ಅಪರಿಚಿತ ಲೋನ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವಾಗ ಎಚ್ಚರಿಕೆ ವಹಿಸಿ. ಅನಧಿಕೃತ ಸಾಲದ ಬೇಡಿಕೆ, ಬೆದರಿಕೆ ಅಥವಾ ಹಣ ವರ್ಗಾವಣೆಯ ಒತ್ತಾಯಕ್ಕೆ ಮಣಿಯಬೇಡಿ. ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930 ಸಹಾಯವಾಣಿ ಅಥವಾ cybercrime.gov.in ಮೂಲಕ ದೂರು ನೀಡಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement