Uttara kannada ಜಿಲ್ಲೆಯ ಜನರಿಗೆ ಶಾಕ್ ಕೊಟ್ಟ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ! ಹೇಳಿದ್ದೇನು?

Dk shivakumar Karnataka Dk shivakumar Karnataka
DK Shivakumar Karnataka politician

Nithin gavkar karwar

Uttara kannada ಜಿಲ್ಲೆಯ ಜನರಿಗೆ ಶಾಕ್ ಕೊಟ್ಟ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ! ಹೇಳಿದ್ದೇನು?

ಹಾವೇರಿ :- ಉತ್ತರ ಕನ್ನಡ (uttara kannada)ಜಿಲ್ಲೆಯಲ್ಲಿ ನದಿ ಜೋಡಣೆ ವಿರೋಧಿಸಿ ದೊಡ್ಡ ಮಟ್ಟದ ಹೋರಾಟ ನಡೆಯುತ್ತಲೇ ಇದೆ. ಮಠಾದೀಶರಿಂದ ಹಿಡಿದು ಸಾಮಾನ್ಯ ವ್ಯಕ್ತಿಯೂ ನದಿ ಜೋಡಣೆ ವಿರೋಧ ಮಾಡುತ್ತಾ ಬಂದಿದ್ದಾರೆ.

Advertisement

ಈ ಹಿಂದೆ ಕಾರವಾರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಬೇಡ್ತಿ-ಅಘನಾಶಿನಿ ನದಿ ಜೋಡಣೆ ಡಿಪಿಆರ್ (DPR ) ಮಾಡುವುದಾಗಿ ಹೇಳಿದ್ದರು. ಹಾವೇರಿ ಜಿಲ್ಲೆಗೆ ಇಂದು ಕಾಗಿನೆಲೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮ ಗೋಷ್ಠಿ ನಡೆಸಿದ್ದು ಈ ವೇಳೆ ಬೇಡ್ತಿ-ವರದಾ ನದಿ ಜೋಡಣಿ ಕುರಿತು ಡಿ.ಪಿ.ಆರ್ ನಡೆಸಲು ಸಹಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. Bedti-Varada | ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಡಿಪಿಆರ್ ಕಾರ್ಯ ಸ್ಥಗಿತಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಮಾತ್ರ !

ನದಿ ಜೋಡಣೆಗೆ ಸರ್ಕಾರ ಆಸಕ್ತಿವಹಿಸಿರುವುದನ್ನು ಮತ್ತೊಮ್ಮೆ ಒತ್ತಿ ಹೇಳಿರುವ ಅವರು. ಬೇಡ್ತಿ ನದಿ ತಿರುವು ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ವಿರೋಧ ವ್ಯಕ್ತವಾಗುತ್ತಲೇ ಇದೆ. ಪರಿಸರವಾದಿಗಳು, ಮಠಾಧೀಶರು, ರೈತರು ಹಾಗೂ ವಿವಿಧ ಸಂಘಟನೆಗಳು ಯೋಜನೆಯನ್ನು ವಿರೋಧಿಸಿದರೂ ಆ ವಿರೋಧಕ್ಕೆ ಸರ್ಕಾರ ಬಗ್ಗಿಲ್ಲ. ಈ ಎಲ್ಲ ವಿರೋಧ ಮತ್ತು ಮನವಿಗಳ ನಡುವೆಯೂ ಡಿಪಿಆ‌ರ್ ಸಿದ್ಧತೆಗೆ ಸರ್ಕಾರ ಸಹಮತಿ ನೀಡಿದೆ ಎಂಬುದಾಗಿ ಅವರು ಹೇಳಿದ್ದಾರೆ.River rafting |ರಿವರ್ ರಾಪ್ಟಿಂಗ್ ಏಕಾ ಏಕಿ ದರ ಹೆಚ್ಚಳ -ದಲ್ಲಾಳಿಗಳ ನಡುವೆ ಮಾರಾಮಾರಿ!

ಇನ್ನು ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಸಹ ಇದೀಗ ಕೆಲವು ತಾಂತ್ರಿಕ ಕಾರಣದಿಂದ ಮುಂದುವರೆದಿಲ್ಲ, ಇದಲ್ಲದೇ ಖೇಣಿಯಲ್ಲಿ ಖಾಸಗಿ ಬಂದರು ಸಹ ಕೆಲವು ಸಮಸ್ಯೆಗಳಿಂದ ಚಾಲನೆ ಆಗಿಲ್ಲ. ಹೀಗಾಗಿ ಶೀಘ್ರದಲ್ಲಿ ಈ ಯೋಜನೆ ಸಹ ಪ್ರಾರಂಭವಾಗುವ ಸಾಧ್ಯತೆಗಳಿದ್ದು ಮುಖ್ಯಮಂತ್ರಿಗಳು ಈ ಯೋಜನೆಗು ಸಹ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಶೀಘ್ರದಲ್ಲಿ ಈ ಮೂರು ಯೋಜನೆಗಳು ಪ್ರಾರಂಭವಾಗುವ ಸಾಧ್ಯತೆಗಳಿದ್ದು ಜಿಲ್ಲೆಯ ಜನರಿಗೆ ಡಿಕೆ ಶಿವಕುಮಾರ್  ಹೇಳಿಕೆ ಇದೀಗ ಪಶ್ಚಿಮ ಘಟ್ಟದ ಜನರ ಬದುಕನ್ನ ಹೈರಾಣ ಮಾಡುವ ಸಾಧ್ಯತೆಗಳಿವೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement