ಜಿಲ್ಲಾ ಮಟ್ಟದ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್:ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಗೆ 94 ಪದಕ,26 ಮಂದಿ ರಾಜ್ಯಮಟ್ಟಕ್ಕೆ ಆಯ್ಕೆ

659

ಮಂಗಳೂರು:ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಹಾಗೂ ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆ ಮಂಗಳೂರಿನ ಅಶೋಕ್ ನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಫೆ.6 ರಂದು ನಡೆಯಿತು.


ಮಂಗಳೂರಿನ ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ 39 ಸ್ಕೇಟರ್‌ಗಳು ಭಾಗವಹಿಸಿದ್ದು,44 ಚಿನ್ನ, 31 ಬೆಳ್ಳಿ ಮತ್ತು 19 ಕಂಚು ಸೇರಿ ಒಟ್ಟು 94 ಪದಕಗಳನ್ನು ಗೆದ್ದಿದ್ದಾರೆ.ಇದೇ ವೇಳೆ ಹೈಫ್ಲೈಯರ್ಸ್ ಕ್ಲಬ್ ನ 26 ಮಂದಿ ಮಾರ್ಚ್ ಮೊದಲ‌ ವಾರದಲ್ಲಿ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟಕ್ಕೆ ಸ್ಕೇಟಿಂಗ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದಿದ್ದಾರೆ.

https://kannadavani.news/daily-horoscope-13-02-2021today-astrology-karnataka-kannada-horoscope/
ಪದಕ ವಿಜೇತರ ಹೈಫ್ಲೈಯರ್ಸ್ ಕ್ಲಬ್ ಸ್ಕೇಟರ್ಸ್

ಡೇನಿಯಲ್ ಸಾಲ್ವಡೋರ್ ಕಾನ್ಸೆಸಾವೊ (4 ಗೋಲ್ಡ್),
ರುಷಭ್ ಮಂಜೇಶ್ವರ್ (4 ಚಿನ್ನ), ಡ್ಯಾಶೆಲ್ ಅಮಂಡಾ ಕಾನ್ಸೆಸಾವೊ (3 ಚಿನ್ನ,1 ಬೆಳ್ಳಿ )ಅರ್ಪಿತಾ ನಿಶಾಂತ್ ಶೇಟ್ (3 ಚಿನ್ನ,1 ಬೆಳ್ಳಿ), ಮೊಹಮ್ಮದ್ ಶಾಮಿಲ್ ಅರ್ಷದ್ (3 ಚಿನ್ನ), ಕೃತಿ ಕಯ್ಯ (3 ಚಿನ್ನ ) ಅನಘಾ ರಾಜೇಶ್ (3 ಚಿನ್ನ ) ವಿವೇಕ ಯೋಗರಾಜ್(3 ಚಿನ್ನ ) ನಿರ್ಮಯ್ ವೈ ಎನ್ (3 ಚಿನ್ನ), ಮೊಹಮ್ಮದ್ ಫರಾಜ್ ಅಲಿ (3 ಚಿನ್ನ, ),ತನ್ಮಯ್ ಎಂ.ಕೊಟ್ಟಾರಿ (2 ಚಿನ್ನ,1 ಬೆಳ್ಳಿ),ರಕ್ಷಿತ್ ಜೋಶಿ (4 ಬೆಳ್ಳಿ),ಮಹೇಶ್ ಕೃಷ್ಣ (1 ಚಿನ್ನ,2 ಬೆಳ್ಳಿ) ಶಮಿತ್.ಯು ಶೆಟ್ಟಿ (1 ಚಿನ್ನ, 2 ಬೆಳ್ಳಿ),ಶಾನನ್ ಜೋಯಲ್ ಪ್ರಸಾದ್ (1 ಚಿನ್ನ,2 ಬೆಳ್ಳಿ),ರಿಯನ್ನ್ ಜೆನ್ ಡಿಸಿಲ್ವ (1 ಚಿನ್ನ,2 ಬೆಳ್ಳಿ ),ಜಿಶಾನ್ ಗ್ಲಾವಿನ್ ಡಿಸೋಜಾ (2ಚಿನ್ನ), ಹಿಮಾನಿ ಕೆ.ವಿ (2 ಚಿನ್ನ ),ವೇದಾಂತ್ ಉಪಾಧ್ಯಾಯ(1 ಚಿನ್ನ,1 ಬೆಳ್ಳಿ ) ರೆಹನ್ ಪ್ರೀಯಾನ್ ಡಿಸೋಜಾ (1 ಚಿನ್ನ,2 ಕಂಚು),ಏಂಜಲಿನ ಸಾರ ರಂಜಿತ್ (2 ಬೆಳ್ಳಿ,1 ಕಂಚು),ಗ್ರೀಷ್ಮಾ ಶೆಟ್ಟಿ (2 ಬೆಳ್ಳಿ,1 ಕಂಚು)ಇಶಾನಿ ಕೆ.ವಿ (2 ಬೆಳ್ಳಿ 1 ಕಂಚು ),ರೇಹನಾ ಪ್ರಿಯಲ್ ಡಿಸೋಜಾ (2 ಬೆಳ್ಳಿ 1 ಕಂಚು ),ಚಿನ್ಮಯ್ ಆರ್.ಪೂಜಾರಿ (1 ಬೆಳ್ಳಿ 2 ಕಂಚು ),ವರ್ದನ್ ಯಾದವ್ (1 ಬೆಳ್ಳಿ 1 ಕಂಚು ), ತಕ್ಷಕ್ ಶೆಟ್ಟಿ (1 ಬೆಳ್ಳಿ 1 ಕಂಚು) , ಮೌರ್ಯ ಕಿರಣ್ ಬಂಜನ್ (1 ಬೆಳ್ಳಿ, 1 ಕಂಚು ),ಅನಶ್ ಕಿರಣ್ ಪಕ್ಕಳ(1 ಬೆಳ್ಳಿ,1 ಕಂಚು)ಆರ್ನ ರಾಜೇಶ್ (1 ಬೆಳ್ಳಿ ,1 ಕಂಚು),ಯೋಹನ್ ಮ್ಯಾಥ್ಯೂ (1 ಬೆಳ್ಳಿ ),ಪ್ರಜ್ವಲ್ ಸಿ ಪೂಜಾರಿ (2 ಕಂಚು )ಗ್ರೀಷ್ಮಾ ಬಿ.ಮ್ (2 ಕಂಚು )ಲಕ್ಷನ್ ಆರ್ ಅಡ್ಯಂತಾಯ (1 ಕಂಚು ),ಭದ್ರ ಶರ್ಮ (1 ಕಂಚು )

ಪದಕ ವಿಜೇತ ಎಲ್ಲಾ ಸ್ಕೇಟರ್‌ಗಳಿಗೆ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಕೋಚ್ ಮೋಹನ್‌ದಾಸ್ ಕೆ, ಜಯರಾಜ್ ಹಾಗೂ ರಮಾನಂದ್ ಅವರು  ತರಬೇತಿ  ನೀಡುತ್ತಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!