Kannadavani

ಹಪ್ತ ವಸೂಲಿ ಆರೋಪ:ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಜಯಂತ್ ನಾಯ್ಕ ಬಂಧನ.

1021

ಕಾರವಾರ:-ಉದ್ಯಮಿಗಳಿಂದ ಹಪ್ತ ವಸೂಲಿ ಹಾಗೂ ಜೀವ ಬೆದರಿಕೆ ಆರೋಪದಡಿ ಮುರಡೇಶ್ವರ ಮೂಲದ ಶ್ರಿರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಜಯಂತ್ವನಾಯ್ಕ ನನ್ನು ಮುರಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಜನವರಿ 2 ರಂದು ಮುರಡೇಶ್ವರದ ಉದ್ಯಮಿ ಹಾಗೂ ನೇತ್ರಾಣಿ ಸ್ಕೂಬಾ ಡ್ರೈವಿಂಗ್ ಮಾಲೀಕ ಗಣೇಶ್ ಹರಿಕಾಂತ ಎಂಬುವವರಿಂದ ಅವರು ನೆಡೆಸುತ್ತಿರುವ ಉದ್ಯಮಗಳಿಗೆ ಹಪ್ತ ನೀಡುವಂತೆ ಪೀಡಿಸುತಿದ್ದ. ಹಣ ನೀಡದಿದ್ದಾಗ ಮರಡೇಶ್ವರದ ಅವರ ಕಚೇರಿಗೆ ಬಂದು ಜೀವ ಬೆದರಿಕೆ ಹಾಕಿದ್ದನು.

ಇಂದಿನ ಉತ್ತರ ಕನ್ನಡ ಜಿಲ್ಲೆಯ ತಾಲೂಕುವಾರು ಕರೋನಾ ಪಾಸಿಟಿವ್ ವಿವರ ನೀಡಲು ಮೇಲಿನ ಲಿಂಕ್ ಗೆ ಕ್ಲಿಕ್ ಮಾಡಿ.

ಈ ಹಿನ್ನಲೆಯಲ್ಲಿ ಈತನ ವಿರುದ್ಧ ಮುರಡೇಶ್ವರ ಠಾಣೆಯಲ್ಲಿ ಪ್ರಕರಣವನ್ನು ಉದ್ಯಮಿ ಗಣೇಶ್ ಹರಿಕಾಂತ್ ನೀಡಿದ್ದರು.

ಮುರಡೇಶ್ವರ ಪೊಲೀಸರು ಸಿ.ಸಿ‌ಟಿವಿ ಕ್ಯಾಮರಾ ಹಾಗೂ ಪ್ರತ್ಯಕ್ಷ ಸಾಕ್ಷಿ ಆಧಾರದಲ್ಲಿ ಈತನ ಮೇಲೆ ಪ್ರಕರಣ ದಾಖಲಿಸಿದ್ದರು.

https://kannadavani.news/ankola-road-accident-panther-death-uttara-kannada-wildlife/

ಆದರೇ ಈತ ತಲೆಮರಸಿಕೊಂಡಿದ್ದು ಕೊನೆಯಲ್ಲಿ ಪೊಲೀಸರ ಅಥಿತಿಯಾಗಿದ್ದು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.

ಈ ಹಿಂದೆ ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಜಯಂತ್ ನಾಯ್ಕ ಮುರಡೇಶ್ವರದ ಕೆಲವು ವರ್ತಕರು,ಅಂಗಡಿ ಮಾಲೀಕರ ಬಳಿ ಹಪ್ತ ವಸೂಲಿ ಮಾಡುತಿದ್ದ ಎಂದು ಆರೋಪ ಕೇಳಿಬಂದಿದೆ.

ಜೊತೆಗೆ ಕೋಮು ಪ್ರಚೊದನೆ ,ಗೂಂಡಾಗಿರಿ ಮಾಡಿರುವ ಬಗ್ಗೆ ಸಹ ಠಾಣೆಯಲ್ಲಿ ದೂರುಗಳಿದ್ದವು. ಸದ್ಯ ಈತ ಪೊಲೀಸರ ಅಥಿತಿಯಾಗಿದ್ದಾನೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!