ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರವಣ ಮಾಸ, ಕೃಷ್ಣ ಪಕ್ಷ,
ವಾರ:ಬುಧವಾರ, ತಿಥಿ:ತೃತಿಯ, ನಕ್ಷತ್ರ: ಉತ್ತರಾಭಾದ್ರ,
ರಾಹುಕಾಲ : 12.25 ರಿಂದ 1.58
ಗುಳಿಕಕಾಲ : 10.52 ರಿಂದ 12.25
ಯಮಗಂಡಕಾಲ : 7.46 ರಿಂದ 9.19
ಹವಾಮಾನ ಫಲ.
ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ, ಮುಂಜಾನೆ ಜಿಟಿ-ಜಿಟಿ ಮಳೆ ಸುರಿಯಲಿದೆ, ರಾತ್ರಿ ತಂಪಿನ ವಾತಾವರಣ ಇರಲಿದೆ.ಬಯಲು ಸೀಮೆಯಲ್ಲಿ ಶುಷ್ಕ ವಾತಾವರಣ ಇರಲಿದೆ.
ಉದ್ಯೋಗ ಫಲ.
ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಇರದು,ಮೀನುಗಾರರಿಗೆ ದುಡಿಮೆಗೆ ತಕ್ಕ ಬೆಲೆ ಇರದು,ಸರ್ಕಾರಿ ನೌಕರರಿಗೆ ಕೌಟುಂಬಿಕ ಸಮಸ್ಯೆ ಎದುರಾಗುವುದು, ಖಾಸಗಿ ಉದ್ಯೋಗಿಗಳಿಗೆ ಹಣದ ಅಡಚಣೆ ಇರಲಿದೆ.
ಮೇಷ: ಆರೋಗ್ಯ ಸುಧಾರಣೆ, ಹಿಡಿದ ಕೆಲಸ ತಕ್ಷಣದಲ್ಲಿ ಕೈಗೂಡದು,ಸ್ನೇಹಿತರಿಂದ ಸಹಾಯ, ಉದ್ಯೋಗದಲ್ಲಿ ತೊಂದರೆ, ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ ಗೌರವ.
ವೃಷಭ: ಈ ದಿನ ಅಷ್ಟೊಂದು ಉತ್ತಮ ಇರದು, ಹಣದ ಕರ್ಚು, ಖಾಸಗಿ ಉದ್ಯೋಗಿಗಳಿಗೆ ತೊಂದತೆ,ಅಲ್ಪ ಆದಾಯ, ಕುಟುಂಬದಲ್ಲಿ ಕಲಹ, ಮನಸ್ಸಿಗೆ ಚಿಂತೆ, ಋಣಭಾದೆ ಹೆಚ್ಚಾಗುತ್ತೆ.
ಮಿಥುನ: ಆರೋಗ್ಯ ಸುಧಾರಣೆ,ವ್ಯಾಪಾರಿಗಳಿಗೆ ಅಲ್ಪ ಚೇತರಿಕೆ,ಸುಖ ಭೋಜನ ಪ್ರಾಪ್ತಿ, ಪುಷ್ಪ ಹಾರದಿಗಳಿಂದ ಸನ್ಮಾನ, ವಸ್ತ್ರ ಖರೀದಿ.
ಕಟಕ: ಸ್ತ್ರೀ ಲಾಭ, ಬಂಧು ಮಿತ್ರರ ಸಮಾಗಮ, ಸತ್ಕಾರ್ಯಾಸಕ್ತಿ, ಕೀರ್ತಿ ಲಾಭ.
ಸಿಂಹ: ಅನಾರೋಗ್ಯ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಹಿತಶತ್ರುಗಳಿಂದ ತೊಂದರೆ.
ಕನ್ಯಾ: ವಸ್ತ್ರಭರಣ ಪ್ರಾಪ್ತಿ, ಧರ್ಮಕಾರ್ಯಾಸಕ್ತಿ, ಬಂಧು ಮಿತ್ರರ ಸಹಾಯ, ಆರೋಗ್ಯದಲ್ಲಿ ಚೇತರಿಕೆ.
ತುಲಾ: ವ್ಯಾಪಾರದಲ್ಲಿ ಸಾಧಾರಣ ಲಾಭ, ಉದ್ಯೋಗದಲ್ಲಿ ಕಿರಿ-ಕಿರಿ, ವಿರೋಧಿಗಳಿಂದ ಕಿರುಕುಳ.
ವೃಶ್ಚಿಕ: ದುಷ್ಟ ಜನರ ಸಹವಾಸ, ಯತ್ನ ಕಾರ್ಯದಲ್ಲಿ ವಿಘ್ನ, ಚೋರಾಗ್ನಿ ಭೀತಿ, ಬಂಧು ಮಿತ್ರರಲ್ಲಿ ವಿರಸ.
ಧನಸ್ಸು: ಸಾಧಾರಣ ಪ್ರಗತಿ, ಕಾರ್ಯಸಾಧನೆಗಾಗಿ ತಿರುಗಾಟ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಉತ್ತಮ ಫಲ.
ಮಕರ: ಕುಟುಂಬ ಸೌಖ್ಯ, ಶುಭಕಾರ್ಯದ ಮಾತುಕತೆ, ಸಜ್ಜನರ ಸಹವಾಸದಿಂದ ಕೀರ್ತಿ.
ಕುಂಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಋಣಭಾದೆ, ಯತ್ನ ಕಾರ್ಯದಲ್ಲಿ ವಿಘ್ನ, ಅಧಿಕ ಖರ್ಚು.
ಮೀನ: ಸರ್ಕಾರಿ ಕೆಲಸಗಳಲ್ಲಿ ಅಪಜಯ, ಮನಸ್ಸಿಗೆ ಬೇಸರ, ಧನವ್ಯಯ, ಆರೋಗ್ಯದಲ್ಲಿ ಏರುಪೇರು.