BREAKING NEWS
Search
Astrology

ಗುರುವಾರದ ದಿನ ಭವಿಷ್ಯ.

873

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ಸಪ್ತಮಿ,
ವಾರ- ಗುರುವಾರ, ಸ್ವಾತಿ ನಕ್ಷತ್ರ,

ರಾಹುಕಾಲ: 02:04-03:31
ಗುಳಿಕಕಾಲ: 09:43-11:10
ಯಮಗಂಡಕಾಲ: 06:48-08:16

ಮೇಷರಾಶಿ
ಆರೋಗ್ಯದಲ್ಲಿ ಸುಧಾರಣೆ, ವ್ಯವಹಾರಗಳಲ್ಲಿ ಶ್ರಮಕ್ಕೆ ತಕ್ಕ ಫಲ, ಮಾತಿನಿಂದ ಕಲಹ ಸ್ಥಿರಾಸ್ತಿ ಖರೀದಿ, ಉದ್ಯೋಗಿಗಳಿಗೆ ಉತ್ತಮ,ಸ್ತ್ರೀಯರಿಂದ ಅನುಕೂಲ, ಮನಸ್ಸಿನಲ್ಲಿ ಗೊಂದಲದ ಗೂಡಾಗಲಿದೆ, ಹಣಕಾಸಿನ ಸ್ಥಿತಿಯಲ್ಲಿ ಅಭಿವೃದ್ದಿ.

ವೃಷಭರಾಶಿ
ಹಿತ ಶತ್ರುಗಳ ಕಾಟ,ಕಠಿಣ ಪರಿಶ್ರಮದಿಂದ ಯಶಸ್ಸು, ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ, ದೂರ ಪ್ರಯಾಣ, ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ,ಮಾನಸಿಕ ಕಿರಿ ಕಿರಿ.

ಮಿಥುನರಾಶಿ
ಶಿಸ್ತಿನ ಜೀವನ ಶೈಲಿಯಿಂದ ಅನುಕೂಲ, ಇತರರ ಬಗ್ಗೆ ಎಚ್ಚರಿಕೆ ವಹಿಸಿ, ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ, ಅಧಿಕ ತಿರುಗಾಟ, ನಂಬಿದ ಜನರಲ್ಲಿಯೇ ಕಲಹ, ವ್ಯಾಪಾರದಲ್ಲಿ ಲಾಭ, ಖರ್ಚುಗಳ ಮೇಲೆ ಹಿಡಿತವಿರಲಿ,

ಕಟಕರಾಶಿ
ಯಾರನ್ನೂ ಹೆಚ್ಚಾಗಿ ನಂಬಬೇಡಿ, ಅನಾರೋಗ್ಯ ನಿಮ್ಮನ್ನು ಕಾಡಲಿದೆ, ನಿಸರ್ಗ ಸೌಂದರ್ಯವನ್ನು ಆರಾಧಿಸುವ ದೃಷ್ಟಿಯು ನಿಮ್ಮದಾಗುತ್ತದೆ, ಆದಾಯಕ್ಕಿಂತ ಖರ್ಚು ಅಧಿಕವೆನಿಸಲಿದೆ. ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ಸಿಂಹರಾಶಿ
ಅಧಿಕಾರ ವ್ಯಾಮೋಹದಿಂದ ದೂರವಿರಿ, ಆತ್ಮಾಭಿವಾನದಿಂದ ಯಶಸ್ಸು, ವ್ಯವಹಾರದಲ್ಲಿ ಏರುಪೇರು, ವಾಹನ ರಿಪೇರಿ, ಅಧಿಕ ಖರ್ಚು. ದೂರ ಪ್ರಯಾಣ, ಧಾರ್ಮಿಕ ಕ್ಷೇತ್ರಗಳ ಭೇಟಿ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ಕನ್ಯಾರಾಶಿ
ವಿದ್ಯಾಭ್ಯಾಸದಲ್ಲಿ ಮಕ್ಕಳಿಗೆ ಪ್ರಗತಿ, ಕಾರ್ಯರಂಗದಲ್ಲಿ ಯೋಚಿಸಿ ಹೆಜ್ಜೆಯನ್ನಿಡಿ, ಯೋಚಿಸಿ ಹಣಕಾಸಿನ ಹೂಡಿಕೆ ಮಾಡಿ, ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ, ಎಚ್ಚರವಾಗಿರಿ, ವಸ್ತ್ರಾಭರಣ ಪ್ರಾಪ್ತಿ.

ತುಲಾರಾಶಿ
ಯತ್ನ ಕಾರ್ಯಗಳಲ್ಲಿ ವಿಘ್ನ, ಅನಾರೋಗ್ಯ ಸಮಸ್ಯೆ, ಸಾಲಬಾಧೆಯಿಂದ ಮನಸಿಗೆ ಕ್ಷೇಷ, ಕೃಷಿಯಲ್ಲಿ ತೊಡಗಿಸಿಕೊಂಡವರಿಗೆ ಹೆಚ್ಚು ಲಾಭವನ್ನು ತರಲಿದೆ, ಸ್ನೇಹಿತರ ಭೇಟಿಯಿಂದ ಚಿಂತೆ ದೂರವಾಗಲಿದೆ, ಸಂಚಾರ ಶುಭವನ್ನು ತರಲಿದೆ.

ವೃಶ್ಚಿಕರಾಶಿ
ಸರಕಾರಿ ವೃತ್ತಿಯವರಿಗೆ ಲಾಭ, ಆರೋಗ್ಯದ ಬಗ್ಗೆ ಎಚ್ಚರವಿರಲಿ, ಉದ್ಯೋಗದಲ್ಲಿ ಅಭಿವೃದ್ದಿ ಗೋಚರಕ್ಕೆ ಬರಲಿದೆ, ಅಧಿಕಾರಿಗಳಲ್ಲಿ ಕಲಹ, ಅನಗತ್ಯ ತಿರುಗಾಟ, ಋಣಬಾಧೆ ನಿಮ್ಮನ್ನು ಕಾಡಲಿದೆ.

ಧನಸ್ಸುರಾಶಿ
ಹೊಸ ಹೂಡಿಕೆಗಳಿಗೆ ಸಕಾಲ, ಬುದ್ದಿವಂತಿಕೆಯಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ನಿಮ್ಮದಾಗಲಿದೆ, ದೂರ ಪ್ರಯಾಣ, ಮಿತ್ರರಿಂದ ಸಹಾಯ ಲಭಿಸಲಿದೆ, ಅತೀಯಾದ ಸಂಚಾರ ಬೇಡ, ಸುಖಭೋಜನ.

ಮಕರರಾಶಿ
ಭಾಗ್ಯ ವೃದ್ದಿ, ಉದ್ಯೋಗಿಗಳಿಗೆ ಅಭಿವೃದ್ದಿ, ಪ್ರಯತ್ನ ಬಲದಿಂದ ಯಶಸ್ಸು, ಭಯಭೀತಿ ನಿವಾರಣೆ, ಧಾರ್ಮಿಕ ಕ್ಷೇತ್ರಗಳ ದರ್ಶನ,ಆತ್ಮವಿಶ್ವಾಸ, ದೃಢ ನಿರ್ಧಾರದಿಂದ ಗೌರವ. ನಿಮ್ಮನ್ನು ಕಾಡುತ್ತಿದ್ದ ಭಯ ನಿವಾರಣೆಯಾಗಲಿದೆ.

ಕುಂಭರಾಶಿ
ಆದಾಯಕ್ಕಿಂತ ಅಧಿಕ ಖರ್ಚು, ಕುಟುಂಬದಲ್ಲಿ ಕಲಹ, ನಿಂದನೆ ಅಪವಾಧ, ನಿರೀಕ್ಷಿತ ಫಲ ದೊರೆಯದು, ಉದ್ಯೋಗಿಗಳಿಗೆ ಜಾಗೃತೆಯಿರಲಿ, ವಿದೇಶದಲ್ಲಿದ್ದವರಿಗೆ ಉದ್ಯೋಗದಲ್ಲಿ ಭಡ್ತಿ ಸಾಧ್ಯತೆ, ಉದ್ದಿಮೆದಾರರಿಗೆ ಯಶಸ್ಸು.

ಮೀನರಾಶಿ
ರಾಜಕೀಯ ವ್ಯಕ್ತಿಗಳಿಗೆ ಅನುಕೂಲ,ಆತ್ಮೀಯರೊಂದಿಗೆ ಮನಸ್ತಾಪ, ಶತ್ರು ಭಯ, ಶುಭಮಂಗಲ ಕಾರ್ಯಗಳಿಗೆ ಅನುಕೂಲ, ಅನಗತ್ಯ ತಕರಾರು, ಪ್ರಯತ್ನ ಬಲದಿಂದ ಯಶಸ್ಸು, ಗೃಹ ನಿರ್ಮಾಣ ಕಾರ್ಯಗಳಲ್ಲಿ ಜಯ, ಪ್ರಾಮಾಣಿಕತೆ ದುಡಿಮೆಯಿಂದ ಹೆಚ್ಚು ಲಾಭ,ನೆರೆಹೊತೆಯವರ ಸಹಕಾರ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!