ಲೋಕಸಭಾ ಚುನಾವಣೆ ಬರುತ್ತಿದೆ,ಬಿಜೆಪಿಯವರು ಯಾರನ್ನೂ ಕೊಲೆ ಮಾಡದಿದ್ರೆ ಸಾಕು,ಅದೊಂದೇ ಹೆದರಿಕೆ-ಸಚಿವ ಮಂಕಾಳು ವೈದ್ಯ ಹೇಳಿದ್ದೇನು?

156

ಕಾರವಾರ :-ಲೋಕಸಭಾ ಚುನಾವಣೆ( Loksabha election 2024) ಬರುತ್ತಿದೆ ಬಿಜೆಪಿಯವರು ಯಾರನ್ನೂ ಕೊಲೆ ಮಾಡದಿದ್ದರೇ ಸಾಕು ಅದೊಂದೆ ಹೆದರಿಕೆ ಇದೆ ಎಂದು ಮೀನುಗಾರಿಕಾ ಹಾಗೂ ಬಂದರು ಸಚಿವ ಮಂಕಾಳು ವೈದ್ಯ( Minister Mankalu Vaidya) ಆರೋಪ ಮಾಡಿದ್ದಾರೆ.

ಇಂದು ಕಾರವಾರದಲ್ಲಿ (ksrwar)ಮಾತನಾಡಿದ ಅವರು ಬಿಜೆಪಿಯವರು(bjp) ಮುಖ್ಯಮಂತ್ರಿ ಯಿಂದ ಹಿಡಿದು ಕೊನೆಯ ಕಾರ್ಯಕರ್ತರ ವರೆಗೆ ನಿಜ ಹೇಳಿದ್ದು ತೋರಿಸಲಿ.ಅವರು ಸುಳ್ಳೇ ಹೇಳುತ್ತಾರೆ ಎಂದುರು‌.ಇನ್ನು
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರಬಾರದು ಎಂದು ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು
ಈಶ್ವರಪ್ಪನವರು ಮೊದಲು ಪಕ್ಷದ ನಾಯಕರನ್ನು ಆಯ್ಕೆ ಮಾಡಲಿ,ಅವರ ಯೋಗ್ಯತೆಗೆ ವಿರೋಧ ಪಕ್ಷದ ನಾಯಕರನ್ನು ಮಾಡಿಕೊಳ್ಳಲು ಆಗಿಲ್ಲ ಅವರೇನು ನಮಗೆ ಬುದ್ದಿ ಹೇಳುವುದು?,ಈಶ್ವರಪ್ಪನವರಿಗೆ ನೈತಿಕತೆ ಇಲ್ಲ,ಈಶ್ವರಪ್ಪ ಎಷ್ಟು ಹೊತ್ತಲ್ಲಿ ಏನು ಮಾತನಾಡುತ್ತಾರೆ ಎಂಬುದೇ ಗೊತ್ತಿಲ್ಲ,ಐದು ವರ್ಷ ಈಶ್ವರಪ್ಪನವರು ಅವರ ಪಕ್ಷದ ವಿರುದ್ಧವೇ ಮಾತನಾಡಿದ್ರು ಎಂದರು.

ಇನ್ನು ಮುಖ್ಯಮಂತ್ರಿಗಳು ಸಚಿವರಿಗೆ ಔತಣ ಕೂಟ ಕ್ಕೆ ಆಹ್ವಾನಿಸಿರುವ ಕುರಿತು ಸ್ಪಷ್ಟನೆ ನೀಡಿದ ಸಚಿವರು ,ನಮ್ಮ ಸಮಸ್ಯೆ ಹೇಳಿಕೊಳ್ಳಲು ಮುಖ್ಯಮಂತ್ರಿಗಳು ಕರೆದಿದ್ದಾರೆ, ಕ್ಷೇತ್ರದ ಸಮಸ್ಯೆಗಳ ಚರ್ಚೆ ಮಾಡುತ್ತಾರೆ

.ಮುಖ್ಯಮಂತ್ರಿ( chief minister) ಬದಲಾವಣೆಗೂ ಅಲ್ಲ ,ಸಚಿವ ಸಂಪುಟ ಬದಲಾವಣೆಗೂ (cabinet extension )ಅಲ್ಲ‌,ಮುಖ್ಯಮಂತ್ರಿಗಳು ಎಲ್ಲರಿಗೂ ಕರೆದಿದ್ದಾರೆ.ಸಮಯದ ಅವಕಾಶ ಇಲ್ಲದ ಕಾರಣ ನಾನು ಹೋಗಿಲ್ಲ,ಮುಖ್ಯಮಂತ್ರಿ ಯಾರಾಗುತ್ತಾರೆ, ಮಂತ್ರಿ ಯಾರಾಗಬೇಕು ಎನ್ನುವುದು ಹೈಕಮಾಂಡ್ ನಿರ್ಧರಿಸಲಿದೆ ಯಾರೇ ಮುಖ್ಯಮಂತ್ರಿಯಾದರೂ ಅವರು ನಮ್ಮ ನಾಯಕರು ಎಂದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!