ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿ ಮೇಲೆ ಉರುಳಿಬಿದ್ದ ಪರಿಣಾಮ ಮನೆ, ಅಂಗಡಿಗಳ ಜೊತೆ ಹೆಚ್. ಪಿ ಕಂಪನಿಯ ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿ ನೀರಿನಲ್ಲಿ ತೇಲಿಹೋಗಿ ಸಗಡಗೇರಿಯ ತೀರ ಭಾಗದಲ್ಲಿ ಸೇರಿತ್ತು.
ಇನ್ನು ಗ್ಯಾಸ್ ಟ್ಯಾಂಕರ್ ನಲ್ಲಿದ್ದ ಅನಿಲ ಸೋರಿಕೆಯಾಗಿ ಜನರಲ್ಲಿ ಭಯ ಹುಟ್ಟಿಸಿತ್ತು. 18 ಟನ್ ಸಾಮರ್ಥ್ಯದ ಈ ಗ್ಯಾಸ್ ಟ್ಯಾಂಕರ್ ರಕ್ಷಣೆಗಾಗಿ ಎರಡು ದಿನ ಅಗ್ನಿಶಾಮಕ ದಳ,ವೈದ್ಯಕೀಯ ಸಿಬ್ಬಂದಿ, ಪೊಲೀಸರು ಜೀವ ಪಣಕ್ಕಿಟ್ಟು ಅವಿರತ ಶ್ರಮ ಹಾಕಿದ್ದರು.
ಇದನ್ನೂ ಓದಿ:-UttaraKannada| ಶಿರೂರು ರಸ್ತೆ ಸಂಚಾರಕ್ಕೆ ಮುಕ್ತ ಆದರೇ..!
ಸಗಡೇರಿ ಗ್ರಾಮದ ಬಳಿ ಗಂಗಾವಳಿ ನದಿಯಲ್ಲಿದ್ದ ಗ್ಯಾಸ್ ಟ್ಯಾಂಕರ್ ನಲ್ಲಿನದ್ದ ಸುಮಾರು 15 ಟನ್ ಗ್ಯಾಸ್ ನ್ನು ಹೆಚ್,ಪಿ.ಸಿ.ಎಲ್, ಬಿ.ಪಿ.ಸಿಎಲ್, ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ತಂಡಗಳ ನೆರವಿನಿಂದ ಗಂಗಾವಳಿ ನದಿ ನೀರಿಗೆ ಬಿಡಲಾಗಿದೆ.
ಸದ್ಯ ಇಡೀ ಗ್ರಾಮವನ್ನು ಸ್ಥಳಾಂತರ ಮಾಡಿದ್ದು ಇದೀಗ ಗ್ಯಾಸ್ ಟ್ಯಾಂಕರ್ ನ ಅಡಿಗೆ ಅನಿಲ ಕಾಲಿಯಾದ ಹಿನ್ನಲೆಯಲ್ಲಿ ಈ ಪ್ರದೇಶವನ್ನು ವಾಸಯೋಗ್ಯಕ್ಕೆ ಮುಕ್ತಗೊಳಿಸಲಾಗಿದ್ದು, ಗ್ರಾಮಸ್ಥರು ತಮ್ಮ ಮನೆಗಳಿಗೆ ವಾಪಸ್ ಬರಬಹುದಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷಿಪ್ರಿಯ ತಿಳಿಸಿದ್ದಾರೆ.






