Karwar | ಸಿದ್ದರಾಮಯ್ಯನವರಿಗೆ ಅವಮಾನದಿಂದ ಹಿಡಿದು ಎಥನಾಲ್ ಮಿಶ್ರಣ ವಿವಾದ ಕುರಿತು ಸಚಿವ ಲಕ್ಷ್ಮಣ ಸವದಿ ಹೇಳಿದ್ದೇನು ? 

Ministr laksman savadiಕಾರವಾರದಲ್ಲಿ ಸಿದ್ದರಾಮಯ್ಯ, ಎಥನಾಲ್ ಮಿಶ್ರಣ ವಿವಾದ ಮತ್ತು ಪಂಚಮಸಾಲಿ ಮೀಸಲಾತಿ ಕುರಿತು ಮಾತನಾಡಿದ ಸಚಿವ ಲಕ್ಷ್ಮಣ ಸವದಿ. Ministr laksman savadiಕಾರವಾರದಲ್ಲಿ ಸಿದ್ದರಾಮಯ್ಯ, ಎಥನಾಲ್ ಮಿಶ್ರಣ ವಿವಾದ ಮತ್ತು ಪಂಚಮಸಾಲಿ ಮೀಸಲಾತಿ ಕುರಿತು ಮಾತನಾಡಿದ ಸಚಿವ ಲಕ್ಷ್ಮಣ ಸವದಿ.
ಕಾರವಾರದಲ್ಲಿ ಸಿದ್ದರಾಮಯ್ಯ, ಎಥನಾಲ್ ಮಿಶ್ರಣ ವಿವಾದ ಮತ್ತು ಪಂಚಮಸಾಲಿ ಮೀಸಲಾತಿ ಕುರಿತು ಮಾತನಾಡಿದ ಸಚಿವ ಲಕ್ಷ್ಮಣ ಸವದಿ.

Karwar | ಸಿದ್ದರಾಮಯ್ಯನವರಿಗೆ ಅವಮಾನದಿಂದ ಹಿಡಿದು ಎಥನಾಲ್ ಮಿಶ್ರಣ ವಿವಾದ ಕುರಿತು ಸಚಿವ ಲಕ್ಷ್ಮಣ ಸವದಿ ಹೇಳಿದ್ದೇನು ?

ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ನಿರ್ಲಕ್ಷ್ಯ ಮಾಡಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಟೀಕೆ ಮಾಡುವ ನೈತಿಕ ಹಕ್ಕಿಲ್ಲ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.

ಕಾರವಾರದಲ್ಲಿ(karwar) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಭಾಗವಹಿಸಿದ್ದ ಕಾರ್ಯಕ್ರಮ ಖಾಸಗಿ ಹಾಗೂ ಕುಟುಂಬದ ಕಾರ್ಯಕ್ರಮವಾಗಿತ್ತು. ಅಂತಹ ಕಾರ್ಯಕ್ರಮಗಳಲ್ಲಿ ಪ್ರೋಟೋಕಾಲ್ ಪ್ರಕಾರ ಆಸನ ವ್ಯವಸ್ಥೆ ಇರುವುದಿಲ್ಲ. ಎಲ್ಲೆಲ್ಲಿ ಸ್ಥಳಾವಕಾಶ ಇರುತ್ತದೆಯೋ ಅಲ್ಲಿಯೇ ಕುಳಿತುಕೊಳ್ಳಬೇಕಾಗುತ್ತದೆ. ಸಿದ್ದರಾಮಯ್ಯನವರು ಕೂಡ ಹಾಗೆಯೇ ಕುಳಿತಿರಬಹುದು. ಈ ವಿಚಾರ ಅವರಿಗೆ ತಿಳಿದಿರಲೂಬಹುದು ಎಂದರು.Karwar | ವಿದೇಶಕ್ಕೆ ಅರಿಶಿನ ರಫ್ತು ಹೆಸರಿನಲ್ಲಿ ಉದ್ಯಮಿಗೆ ₹4.29 ಲಕ್ಷ ವಂಚನೆ; ಸೈಬರ್ ಠಾಣೆಯಲ್ಲಿ ಪ್ರಕರಣ

ಬಿಜೆಪಿಯವರು ಈ ವಿಚಾರವನ್ನು ರಾಜಕೀಯವಾಗಿ ಟೀಕಿಸುವ ನೈತಿಕ ಹಕ್ಕು ಇಲ್ಲ, ಹಿಂದೆ ಬಿಜೆಪಿಯವರು ತಮ್ಮ ನಾಯಕರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಎಲ್.ಕೆ. ಅಡ್ವಾಣಿ ಅವರನ್ನು ಪ್ರಧಾನಿ ಮಾಡುವ ವಿಚಾರದಲ್ಲಿ ಬಿಜೆಪಿ ನಡೆದುಕೊಂಡ ರೀತಿ ಎಲ್ಲರಿಗೂ ತಿಳಿದಿದೆ ಎಲ್.ಕೆ ಅಡ್ವಾನಿಯವರನ್ನ ಯಾವರೀತಿ ನಡೆಸಿಕೊಂಡರು ಎಂದು ಅವರು ಚಿಂತನೆ ಮಾಡಲಿ ಎಂದು ಸವದಿ ತಿರುಗೇಟು ನೀಡಿದರು.

Advertisement

ಎಥನಾಲ್ ಮಿಶ್ರಣ ವಿವಾದ: ಕೇಂದ್ರಕ್ಕೆ ವರದಿ ಸಲ್ಲಿಕೆ

ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣದ ವಿಚಾರವಾಗಿ ಮಾತನಾಡಿದ ಸಚಿವರು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಹಲವು ಪೆಟ್ರೋಲ್ ಬಂಕ್‌ಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಯ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ. ಪೆಟ್ರೋಲ್ ಬಂಕ್‌ಗಳ ಮಾಲೀಕರು ಸ್ವತಃ ಎಥನಾಲ್ ಮಿಶ್ರಣ ಮಾಡಲು ಸಾಧ್ಯವಿಲ್ಲ. ಇದು ಡಿಸ್ಟಿಲರಿಗಳಿಂದಲೇ ಬರಬೇಕು. ಈ ಪ್ರಕ್ರಿಯೆಯಲ್ಲಿ ಹಲವು ನಿಯಮಗಳು ಮತ್ತು ನಿಯಂತ್ರಣಗಳಿವೆ ಎಂದು ತಿಳಿಸಿದರು.

ಸಂಗ್ರಹಿಸಿದ ಮಾದರಿಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.ಅದನ್ನು ಕೇಂದ್ರಸರ್ಕಾರ ತಳ್ಳಿಹಾಕಿದೆ.ರಾಜ್ಯದಿಂದ ನಾವು ರುಜುವಾತು ಮಾಡಿದೆ.ಆಯಿಲ್ ಕಂಪನಿ ಮೇಲೆ ಸಚಿವ ರಿಜ್ವಾನ್ ಅರ್ಷದ್ ಗೆ ಯಾವುದೇ ದ್ವೇಶವಿಲ್ಲ.ಇದನ್ನು ಡೈವರ್ಟ ಮಾಡುವ ವಿಚಾರಕ್ಕೆ ಬೆಲೆ ಏರಿಕೆ ವಿಷಯವನ್ನು ಬಳಸಿಕೊಳ್ಳುವ ಅವಷ್ಯಕತೆ ಇಲ್ಲ.ಅಗತ್ಯ ಬಿದ್ದಲ್ಲಿ ಜಂಟಿ ಆಯ್ಕೆ ಸಮಿತಿ ರಚಿಸಿ ಪರೀಕ್ಷೆ ನಡೆಸಬಹುದು. ಬೆಲೆ ಏರಿಕೆಯನ್ನು ನಿಯಂತ್ರಿಸುವ,ಏರಿಕೆ ಇಳಿಕೆ ಮಾಡುವ ಅಧಿಕಾರ ಒಕ್ಕೂಟ ವ್ಯವಸ್ಥೆಯಲ್ಲಿ  ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು. ರಾಜ್ಯ ಸರ್ಕಾರಕ್ಕೆ ಬೆಲೆ ನಿಯಂತ್ರಣದ ಅಧಿಕಾರ ಇಲ್ಲದಿರುವುದರಿಂದ ವಾಸ್ತವಾಂಶವನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದರು.

ಪಂಚಮಸಾಲಿ ಮೀಸಲಾತಿ ವಿಚಾರ: ಕಾನೂನು ಪ್ರಕಾರ ನಿರ್ಧಾರ

ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂಬ ಆಗ್ರಹದೊಂದಿಗೆ ಬೆಳಗಾವಿ ಚಲೋ ಹೋರಾಟ ನಡೆಸುವ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ, ಜಯಮೃತ್ಯುಂಜಯ ಸ್ವಾಮೀಜಿಯವರ ಹೇಳಿಕೆಯನ್ನು ತಾವು ಗಮನಿಸಿಲ್ಲ ಎಂದರು.

ಪಂಚಮಸಾಲಿ ಸಮುದಾಯದ ಪ್ರತ್ಯೇಕ ಮೀಸಲಾತಿ ಬೇಡಿಕೆ ಹಿಂದಿನಿಂದಲೂ ಇದೆ. ಆದರೆ ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ವ್ಯಾಜ್ಯ ದಾಖಲಾಗಿದೆ. ಕೆಲವು ಕಾನೂನಾತ್ಮಕ ನಿರ್ಬಂಧಗಳಿರುವುದರಿಂದ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.Karwar | ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಬಾಲಕಿ ಮೇಲಿನ ದೌರ್ಜನ್ಯ ಪ್ರಕರಣದ ಆರೋಪಿ ಬಂಧನ

ಕಾರವಾರದಲ್ಲಿ (karwar)ನಡೆದ ಮಾಧ್ಯಮ ಸಂವಾದದಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಸಿದ್ದರಾಮಯ್ಯನವರ ವಿಚಾರ, ಎಥನಾಲ್ ಮಿಶ್ರಣ ವಿವಾದ ಹಾಗೂ ಪಂಚಮಸಾಲಿ ಮೀಸಲಾತಿ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement