Karwar | ವಿದೇಶಕ್ಕೆ ಅರಿಶಿನ ರಫ್ತು ಹೆಸರಿನಲ್ಲಿ ಉದ್ಯಮಿಗೆ ₹4.29 ಲಕ್ಷ ವಂಚನೆ; ಸೈಬರ್ ಠಾಣೆಯಲ್ಲಿ ಪ್ರಕರಣ
ಗ್ರೀಸ್ ದೇಶದ ಕಂಪನಿಗೆ 25 ಮೆಟ್ರಿಕ್ ಟನ್ ಅರಿಶಿನ ಮಾರಾಟದ ಆಮಿಷ; ವಿವಿಧ ಪ್ರಮಾಣಪತ್ರಗಳ ನೆಪದಲ್ಲಿ ಹಣ ವಸೂಲಿ
ಕಾರವಾರ: ವಿದೇಶಗಳಿಗೆ ಸಾಂಬಾರು ಪದಾರ್ಥಗಳನ್ನು ರಫ್ತು ಮಾಡಲು ಉದ್ಯಮಿಗೆ ವಿದೇಶಿ ಖರೀದಿದಾರರನ್ನು ಪರಿಚಯಿಸುವುದಾಗಿ ನಂಬಿಸಿ, ವಿವಿಧ ಪ್ರಮಾಣಪತ್ರಗಳನ್ನು ಪಡೆಯುವ ನೆಪದಲ್ಲಿ ಬರೋಬ್ಬರಿ ₹4.29 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಕಾರವಾರ(karwar) ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Karwar | ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಬಾಲಕಿ ಮೇಲಿನ ದೌರ್ಜನ್ಯ ಪ್ರಕರಣದ ಆರೋಪಿ ಬಂಧನ
ಕುಮಟಾ ತಾಲೂಕಿನ ವನ್ನಳ್ಳಿಯ ನಿವಾಸಿ ನಿತ್ಯಾನಂದ ಗೋಳಿ ನಾಯ್ಕ (53) ವಂಚನೆಗೊಳಗಾದ ಉದ್ಯಮಿ. ಇವರು ಸಾಂಬಾರು ಪದಾರ್ಥಗಳನ್ನು ವಿದೇಶಗಳಿಗೆ ರಫ್ತು ಮಾಡುವ ಉದ್ದೇಶದಿಂದ ಸೆಪ್ಟೆಂಬರ್ 28ರಂದು ಗೂಗಲ್‌ನಲ್ಲಿ ಖರೀದಿದಾರರನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ‘Web Solutions Export’ ಎಂಬ ಕಂಪನಿಯ ವೆಬ್‌ಸೈಟ್ ಗಮನಕ್ಕೆ ಬಂದಿದೆ.Karnataka | ಮತದಾರರ ಪಟ್ಟಿಯಿಂದ ಹೆಸರು ಬಿಟ್ಟವರಿಗೆ ಮತ್ತೊಂದು ಅವಕಾಶ; ಡಿ.1ರಿಂದ SSR ಅಭಿಯಾನ ಆರಂಭ
ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಭುವನ ಚಂದ್ರ ಎಂದು ಪರಿಚಯಿಸಿಕೊಂಡಿದ್ದಾನೆ. ತಾನು ‘Web Solutions Export’ ಕಂಪನಿಯ ಮಾಲೀಕನೆಂದು ಹೇಳಿಕೊಂಡು, ವಿದೇಶಿ ಖರೀದಿದಾರರನ್ನು ಹುಡುಕಿ ರಫ್ತು ಉದ್ಯಮಿಗಳಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದಾನೆ.
ಬಳಿಕ ಗ್ರೀಸ್ ದೇಶದ ‘Magna Graecia Trade LLC’ ಎಂಬ ಕಂಪನಿಯ ಮಾಲೀಕನೆಂದು ಹೇಳಿಕೊಂಡಿದ್ದ ವಾಸಿಲಿಸ್ ಕಾನ್ಸ್ಟಾಂಟಿನೋ ಎಂಬಾತನನ್ನು ವಾಟ್ಸಾಪ್ ಮೂಲಕ ಪರಿಚಯಿಸಿದ್ದಾನೆ. ಈತ ನಿತ್ಯಾನಂದ ನಾಯ್ಕ ಅವರಿಂದ 25 ಮೆಟ್ರಿಕ್ ಟನ್ ಅರಿಶಿನದ ಕೊಂಬನ್ನು ಅಂದಾಜು ₹98 ಲಕ್ಷ ಮೊತ್ತಕ್ಕೆ ಖರೀದಿಸುವುದಾಗಿ ಒಪ್ಪಂದದ ಮಾತುಕತೆ ನಡೆಸಿದ್ದಾನೆ.
ಪ್ರಮಾಣಪತ್ರಗಳ ಹೆಸರಿನಲ್ಲಿ ಹಣ ವಸೂಲಿ
ಅರಿಶಿನ ರಫ್ತು ಮಾಡಲು BRC Compliance, Kosher Compliance, ECO Cert ಹಾಗೂ ISO Certificate ಸೇರಿದಂತೆ ವಿವಿಧ ಪ್ರಮಾಣಪತ್ರಗಳು ಅಗತ್ಯವಿದ್ದು, ಅವುಗಳನ್ನು ಪಡೆಯಲು ಮುಂಗಡ ಹಣ ಪಾವತಿಸಬೇಕೆಂದು ತಿಳಿಸಲಾಗಿದೆ.
ಇದನ್ನು ನಂಬಿದ ಉದ್ಯಮಿ ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಅಕ್ಟೋಬರ್ 6ರಿಂದ 21ರವರೆಗೆ ಹಂತ ಹಂತವಾಗಿ ಒಟ್ಟು ₹4,29,000 ಹಣವನ್ನು ಜಮಾ ಮಾಡಿದ್ದಾರೆ. ಆದರೆ, ಪ್ರಮಾಣಪತ್ರಗಳ ಹೆಸರಿನಲ್ಲಿ ಹಣ ಪಾವತಿಸುವ ಮೂಲಕ ಉದ್ಯಮಿ ವಂಚನೆಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸಿಇನ್ ನಂ. 25/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 319(2), 318(4) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಕಲಂ 66(D) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.







