ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅನಂತಮೂರ್ತಿ ಹೆಗಡೆ ಜೊತೆ ಹೆಜ್ಜೆ ಹಾಕಲಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮಗೌಡ

98

ಕಾರವಾರ :- ನವಂಬರ್ 2 ರಿಂದ 9 ನೇ ತಾರೀಕಿನ ವರೆಗೆ ಶಿರಸಿಯಿಂದ ಕಾರವಾರದ ವರೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Multi Specialty Hospital) ಶೀಘ್ರ ಅನುಷ್ಟಾನಕ್ಕಾಗಿ ನಡೆಯುತ್ತಿರುವ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆಯವರ ಪಾದಯಾತ್ರೆಗೆ ಪದ್ಮಶ್ರೀ ಪಶಸ್ತಿ ಪುರಸ್ಕೃತ, ಜಾನಪದ ಕೋಗಿಲೆ , ನಾಡೋಜ
ಸುಕ್ರಿ ಬೊಮ್ಮ ಗೌಡ (sukribommagawda)ರವರು ಬೆಂಬಲ ನೀಡಿದ್ದಾರೆ.

ಇದು ಒಳ್ಳೆಯ ಕಾರ್ಯ,ಮಾರ್ಗ ಮಧ್ಯೆ ಅಂಕೋಲಾ ದಲ್ಲಿ ತಾವೂ ಕೂಡ ಭಾಗ ವಹಿಸುವುದಾಗಿ ಪಾದಯಾತ್ರೆ ನಿಮಿತ್ತ ಭೇಟಿಯಾಗಿದ್ದ ಅನಂತಮೂರ್ತಿ ಹೆಗಡೆಯವರಿಗೆ ಹುರಿದುಂಬಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ತನಗೆ ಆರೋಗ್ಯ ಸರಿಯಿಲ್ಲ, ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚಿಕಿತ್ಸೆ ಗಾಗಿ ಮಂಗಳೂರಿಗೆ ತೆರಳುವ ಅನಿವಾರ್ಯತೆ ಉಂಟಾಯಿತು ಎಂಬುದನ್ನ ಹೇಳಿದ ಅವರು ,ನಮ್ಮ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಲೇ ಬೇಕು ಇದರಿಂದ ಅದೆಷ್ಟೋ ಜೀವಗಳು ಉಳಿಯುತ್ತವೆ ,ತಾವು ಕೂಡ ಸಹಕಾರ ನೀಡುವುದಾಗಿ ಹೇಳಿದರು.

ಇನ್ನು ನವಂಬರ್ 2 ರಂದು ಶಿರಸಿಯಿಂದ ಪಾದಯಾತ್ರೆ ಪ್ರಾರಂಭವಾಗಿ ಶಿರಸಿ ಮೂಲಕ ದೇವಿಮನೆ ಘಟ್ಟ -ಕುಮಟಾ- ಅಂಕೋಲ- ಕಾರವಾರಕ್ಕೆ ಆಗಮಿಸಲಿದೆ.
ಈ ಪಾದಯಾತ್ರೆಯಲ್ಲಿ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ,ಚಿಂತಕ ,ಸಾಹಿತಿ ,ಪರಿಸರವಾದಿ ಶಿವಾನಂದ ಕಳವೆ , ಪತ್ರಕರ್ತ ವಿನಾಯಕ ಭಟ್ ಮೂರೂರು , ಖ್ಯಾತ ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ,ರಾಜಕಾರಣಿಗಳಾದ ಸಿದ್ದಾಪುರದ k.j ನಾಯ್ಕ, ಶಶಿಭೂಷಣ್ ಹೆಗಡೆ, ಶಿವಾನಂದ ಹೆಗಡೆ ಕಡತೋಕ, ಯಲ್ಲಾಪುರದ ಪ್ರಮೋದ್ ಹೆಗಡೆ,ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ವಿವರ ಈ ಕೆಳಗಿನಂತಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!