BREAKING NEWS
Search

Bhatkal:ಭೀಕರ ಅಪಘಾತ :ಬೈಕ್ ನಲ್ಲಿ ನಾಲ್ಕುಜನರ ರೈಡಿಂಗ್ ತಂತು ಸಾವು!

199

ಕಾರವಾರ :-ಬೈಕ್ ನಲ್ಲಿ ( bike) ನಾಲ್ಕುಜನ ರೈಡಿಂಗ್ ಮಾಡಿ ಓವರ್ ಟೇಕ್ ಮಾಡಲು ಹೋದ ಬೈಕ್ ಸವಾರನಿಗೆ ಲಾರಿಯೊಂದು ಗುದ್ದಿದ ಪರಿಣಾಮ ಇಬ್ಬರಿಗೆ ಗಂಭೀರ ಗಾಯಗಳಾಗಿ ಓರ್ವ ಯುವತಿ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ (uttarakannada ) ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66 ರ ಶಿರಾಲಿಯಲ್ಲಿ ಭಾನುವಾರ ನಡೆದಿದೆ.( Bhatkal National Highway NH 66)

ಭಟ್ಕಳದ ಕಾರ್ಗಲ್ ಮೂಲದ
ನಿಕಿತಾ ಮಹಾಬಲೇಶ್ವರ ಗೊಂಡ (23) ಸ್ಥಳದಲ್ಲೇ ಸಾವಿಗೀಡಾದ ಯುವತಿಯಾಗಿದ್ದು ,ಬೈಕ್ ನ ಮಧ್ಯದ ಸೀಟ್‌ನಲ್ಲಿ ಕುಳಿತ್ತಿದ್ದ ಯುವತಿ ನಿಕಿತಾ ಹಾಗೂ ಗುಲ್ಮಿ ನಿವಾಸಿ ಗಿರಿಜಾ ಗೊಂಡ (45), ಗಂಭೀರ ಗಾಯಗೊಂಡವರಾಗಿದ್ದು ಬೈಕ್‌ ಚಲಾಯಿಸುತ್ತಿದ್ದ ಭಟ್ಕಳ ಗುಲ್ಮಿ ನಿವಾಸಿ ಗಣೇಶ್ ಗೊಂಡ (35)ಗೆ ಸಣ್ಣಪುಟ್ಟ ಗಾಯಗಳಾಗಿದೆ.

ಅಪಘಾತ ವಾದ ಲಾರಿ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಗಾಯ ಗೊಂಡವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆ ಹಾಗೂ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!