Terrorist ಸಂಘಟನೆಗಳ ಜೊತೆಗೆ ಕೆಲಸ – ನಾಲ್ವರು ಸರ್ಕಾರಿ ಅಧಿಕಾರಿಗಳು ಸೇವೆಯಿಂದ ವಜಾ

88

ಶ್ರೀನಗರ : ಭಯೋತ್ಪಾದಕ ಸಂಘಟನೆಗಳ ( terrorist) ಜೊತೆಗೆ ಕೆಲಸ ಮಾಡಿದ ಆರೋಪದ ಮೇಲೆ ನಾಲ್ವರು ಸರ್ಕಾರಿ ಅಧಿಕಾರಿಗಳನ್ನು ( government officers )ಸೇವೆಯಿಂದ ವಜಾ ಮಾಡಿ ಜಮ್ಮು ಮತ್ತು ಕಾಶ್ಮೀರ( Jammu and Kashmir) ಆಡಳಿತ ಆದೇಶ ಹೊರಡಿಸಿದೆ. ಇಂತಹದೇ ಆರೋಪದಲ್ಲಿ ಕಳೆದ ಮೂರು ವರ್ಷದಲ್ಲಿ 50 ಕ್ಕೂ ಅಧಿಕ ಅಧಿಕಾರಿಗಳನ್ನು ವಜಾ ಮಾಡಲಾಗಿದೆ.

ಶ್ರೀನಗರದ SMHS ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ನಿಸ್ಸಾರ್-ಉಲ್-ಹಸನ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನಲ್ಲಿ ಕಾನ್‌ಸ್ಟೆಬಲ್ ಅಬ್ದುಲ್ ಮಜೀದ್ ಭಟ್, ಉನ್ನತ ಶಿಕ್ಷಣ ಇಲಾಖೆಯ ಶಿಕ್ಷಕ ಫಾರೂಕ್ ಅಹ್ಮದ್ ಮಿರ್, ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಯೋಗಾಲಯ ಬೇರರ್ ಅಬ್ದುಲ್ ಸಲಾಂ ರಾಥರ್ ವಜಾಗೊಂಡ ನಾಲ್ವರು ಸರ್ಕಾರಿ ಅಧಿಕಾರಿಗಳಾಗಿದ್ದಾರೆ.

ನಾಲ್ಕು ಸರ್ಕಾರಿ ನೌಕರರನ್ನು ವಜಾಗೊಳಿಸಲು ಸರ್ಕಾರವು ಭಾರತದ ಸಂವಿಧಾನದ 311 (2) (ಸಿ) ಅನ್ನು ಅನ್ವಯಿಸಿದೆ, ಸರ್ಕಾರದ ಸಂಬಂಳ ಪಡೆಯುವ ನೌಕರರು ಪಾಕಿಸ್ತಾನ ಬೆಂಬಲಿಸುವ ಭಯೋತ್ಪಾದಕ ಸಂಘಟನೆಗಳ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾ ನಾಲ್ಕು ಮಂದಿ ಅಧಿಕಾರಿಗಳ ಮಾಹಿತಿ ಪಡೆದು, ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ತೋರುವ ಹಿನ್ನಲೆ ತತಕ್ಷಣದಿಂದ ಜಾರಿ ಬರುವಂತೆ ಸೇವೆಯಿಂದ ಅಧಿಕಾರಿಗಳನ್ನು ವಜಾ ಮಾಡಿದೆ ಎಂದು L.G ಕಚೇರಿ ತಿಳಿಸಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!