BREAKING NEWS
Search

ಈವರ್ಷದ ಬಜೆಟ್ ನಲ್ಲಿ ಏನಿದೆ ? ಯಾವುದು ಅಗ್ಗ ,ಯಾವುದು ಏರಿಕೆ ವಿವರ ನೋಡಿ.

2713

ನವದೆಹಲಿ:- ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳು ಇಲ್ಲಿವೆ.

ಯಾವುದು ಇಳಿಕೆ ?
ಕೃಷಿ ಉತ್ಪನ್ನಗಳು, ರಾಸಾಯನಿಕ ಉತ್ಪನ್ನ ,ಬಟ್ಟೆ,ಚರ್ಮೊಧ್ಯಮದ ,ಬಟನ್ಸ್, ಲೈನಿಂಗ್ ಉತ್ಪನ್ನ, ವೈದ್ಯಕೀಯ ವಸ್ತುಗಳು,ಚಿನ್ನಾಭರಣ ತೆರಿಗೆ,ವಜ್ರಾಭರಣ ತೆರಿಗೆ ,ಆರ್ಟಿಫೀಷನ್ ಆಭರಣ ತೆರಿಗೆ,ಮೊಬೈಲ್,ಚಾರ್ಜರ್ ಗಳ ಬೆಲೆ ಇಳಿಕೆ ಮಾಡಲಾಗಿದೆ.
ಕಾರ್ಪ್ಯೂರೇಟ್ ಟ್ಯಾಕ್ಸ್ ಅನ್ನು ಶೇ.7 ಇಳಿಕೆ ಮಾಡಲಾಗಿದೆ.ಸಹಕಾರಿ ಸಂಘಗಳ ತೆರಿಗೆ ದರ ಶೇ.15 ಕ್ಕೆ ಇಳಿಕೆ. ಏಕರೂಪ ತೆರಿಗೆ ವ್ಯವಸ್ತೆ ಜಾರಿ.
ಹೊಸ ಕಂಪನಿಗಳಿಗೆ ತೆರಿಗೆ ಇಳಿಕೆ. ಪಾದರಕ್ಷೆ ಮೇಲೆ ಬೆಲೆ ಇಳಿಕೆ.ಸ್ಮಾರ್ಟ ಯ್ಯಾಪ್ ಗಳ ತೆರಿಗೆ ಇಳಿಕೆ.

ಯಾವುದು ಏರಿಕೆ?
1) ಕ್ರಿಪ್ಟೂ ಕರೆನ್ಸಿ ಮೇಲೆ ತೆರಿಗೆ ಘೋಷಣೆ,ಶೇ.30 ರಷ್ಟು ತೆರಿಗೆ ಘೋಷಣೆ.
2)ದೀರ್ಘಾವಧಿ ಹೂಡಿಕೆ ಮೇಲೆ ಶೇ.15 ತೆರಿಗೆ.
3)ಡಿಜಿಟಲ್ ಆಸ್ತಿ ಬದಲಾವಣೆ ಮೇಲೆ ಶೇ.30 ತೆರಿಗೆ.
4)ಕೊಡೆಗಳ ಮೇಲೆ ಶೇ .20 ತೆರಿಗೆ.
5)ಅನ್ ಬ್ಲೈಂಡೆಡ್ ಕಚ್ಚಾ ತೈಲದ ಮೇಲೆ ₹2 ತೆರಿಗೆ ಹೆಚ್ಚಳ.
6)ದೀರ್ಘಾವಧಿ ಬಂಡವಾಳದ ಮೇಲೆ ಶೇ.15 ತೆರಿಗೆ .

ಕೇಂದ್ರ ,ರಾಜ್ಯ ನೌಕರರಿಗೆ ತೆರಿಗೆ ಕಡಿತ.

ಕೇಂದ್ರ, ರಾಜ್ಯ ಸರ್ಕಾರಿ ನೌಕರರ ತೆರಿಗೆ ಕಡಿತ (TDS) ಮಿತಿಯನ್ನು ಹೆಚ್ಚಳ ಮಾಡಲಾಗಿದೆ.ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು ಶೇ.10 ರಿಂದ ಶೇ.14ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ನೌಕರರಿಗೆ ತೆರಿಗೆ ರಿಲೀಫ್‌ ಸಿಕ್ಕಿದೆ.

5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆ –

ದೇಶದಲ್ಲಿ ಶೀಘದಲ್ಲೇ 5ಜಿ ಸಂಪರ್ಕ ಸಾಧ್ಯವಾಗುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಘೋಷಿಸಿದ್ದಾರೆ. 5ಜಿ ಸಂಪರ್ಕ ಸೇವೆಗಳಿಗಾಗಿ ಇದೇ ವರ್ಷ ತರಂಗಾಂತರಗಳ ಹರಾಜು ಪ್ರಕ್ರಿಯೆ ನಡೆಸುವುದಾಗಿ ಉಲ್ಲೇಖಿಸಿದರು.

ಈ ಮೂಲಕ ದೇಶದಲ್ಲಿ 2023ಕ್ಕೆ ಖಾಸಗಿ ದೂರಸಂಪರ್ಕ ಸೇವಾಧಾರ ಕಂಪನಿಗಳ ಮೂಲಕ ಗ್ರಾಹಕರಿಗೆ 5ಜಿ ಸಂಪರ್ಕ ಸೇವೆ ಪೂರೈಕೆ ಸಾಧ್ಯವಾಗಲಿದೆ. ತಯಾರಿಕೆ ಆಧಾರಿತ ಉತ್ತೇಜನ (ಪಿಐಎಲ್‌) ಯೋಜನೆಯ ಭಾಗವಾಗಿ ವಿನ್ಯಾಸ ಆಧಾರಿತ ತಯಾರಿಕೆಯಿಂದ 5ಜಿಗಾಗಿ ಸಮರ್ಥ ವ್ಯವಸ್ಥೆ ರೂಪಿಸುವುದು ಸಾಧ್ಯವಾಗಲಿದೆ ಎಂದರು.

2022 ಮತ್ತು 2023ರಲ್ಲಿ ಭಾರತ್‌ನೆಟ್‌ ಯೋಜನೆಯ ಅಡಿಯಲ್ಲಿ ಎಲ್ಲ ಗ್ರಾಮಗಳಿಗೆ ಆಪ್ಟಿಕಲ್‌ ಫೈಬರ್‌ ಹಾಕಲು ಕೇಂದ್ರ ಸರ್ಕಾರವು ಗುತ್ತಿಗೆ ನೀಡುತ್ತಿದೆ. ಇದು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದ್ದು, 2025ಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇರುವುದಾಗಿ ಪ್ರಕಟಿಸಿದರು.

ಆದಾಯ ತೆರಿಗೆ ಮಿತಿಯಲ್ಲಿ ಯಥಾಸ್ಥಿತಿ

ಆದಾಯ ತೆರಿಗೆ ಮಿತಿಯಲ್ಲಿ 2022-23ನೇ ಸಾಲಿನ ಬಜೆಟ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ಐಟಿ ರಿಟರ್ನ್ಸ್ ಸಲ್ಲಿಕೆ ವೇಳೆ ಆಗಿರುವ ಲೋಪವನ್ನು ಸರಿಪಡಿಸಿ, ನವೀಕೃತ ರಿಟರ್ನ್ಸ್ ಸಲ್ಲಿಸಲು ಮೌಲ್ಯಮಾಪನ ವರ್ಷದಿಂದ 2 ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ.

ಇತರ ಬದಲಾವಣೆಗಳು ಹೀಗಿದೆ:-

1)ವರ್ಚುವಲ್, ಡಿಜಿಟಲ್ ಸ್ವತ್ತುಗಳಿಗೆ ತೆರಿಗೆ

2) ವರ್ಚುವಲ್, ಡಿಜಿಟಲ್ ಸ್ವತ್ತುಗಳ ವರ್ಗಾವಣೆಗೆ ಶೇ 30ರಷ್ಟು ತೆರಿಗೆ

3)ಸ್ವಾಧೀನದ ವೆಚ್ಚವನ್ನು ಹೊರತುಪಡಿಸಿ ಇತರ ಯಾವುದೇ ಕಡಿತಕ್ಕೆ ಅನುಮತಿ ಇಲ್ಲ

4)ವರ್ಚುವಲ್ ಸ್ವತ್ತುಗಳ ಉಡುಗೊರೆ ಸ್ವೀಕರಿಸುವವರಿಗೆ ತೆರಿಗೆ.

ಕಾವೇರಿ–ಪೆನ್ನಾರ್‌, ಪೆನ್ನಾರ್‌–ಕೃಷ್ಣಾ, ಗೋದಾವರಿ–ಕೃಷ್ಣ ಸೇರಿದಂತೆ ನದಿ ಜೋಡಣೆಯ ಐದು ಯೋಜನೆಗಳಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಸಮ್ಮತಿ ಸೂಚಿಸಿದೆ.

ಐದು ನದಿ ಜೋಡಣೆ ಯೋಜನೆ.

ಐದು ನದಿ ಜೋಡಣೆ ಯೋಜನೆಗಳ ಡಿಪಿಆರ್‌ಗೆ ಸಮ್ಮತಿ ನೀಡಲಾಗಿದೆ.

ಧಮನ್‌ ಗಂಗಾ – ಪಿಂಜಾಲ್‌

ಪರ್‌ ತಾಪಿ–ನರ್ಮದಾ

ಗೋದಾವರಿ – ಕೃಷ್ಣಾ

ಕೃಷ್ಣಾ – ಪೆನ್ನಾರ್‌

ಕಾವೇರಿ – ಪೆನ್ನಾರ್‌

ಈ ನದಿಗಳನ್ನು ಜೋಡಿಸಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಹೆಳಿದ್ದಾರೆ.

ಬಜೆಟ್ ನ ಪ್ರಮುಖ ಹೈಲೆಟ್ಸ ಗಳು.

ಟೆಲಿ ಮೆಂಟಲ್‌ ಹೆಲ್ತ್ ಕಾರ್ಯಕ್ರಮ ಜಾರಿ.
ಕೋವಿಡ್‌ನಿಂದ ಉಂಟಾದ ಮಾನಸಿಕ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ‘ನ್ಯಾಷನಲ್‌ ಟೆಲಿ ಮೆಂಟಲ್‌ ಹೆಲ್ತ್’ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.

ಮಿಲಿಟರಿ ಉಪಕರಣ ಉದ್ಯಮ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಉದ್ಯಮ, ಸ್ಟಾರ್ಟ್‌ಅಪ್‌ಗಳು ಮತ್ತು ಅಕಾಡೆಮಿಗಳಿಗೆ ತೆರೆಯಲಾಗುವುದು.

ಆರ್‌ಬಿಐನಿಂದ ಡಿಜಿಟಲ್ ರೂಪಾಯಿ: ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿ ಆರ್‌ಬಿಐ ಮೂಲಕ ಡಿಜಿಟಲ್ ರೂಪಾಯಿಯನ್ನು ನೀಡಲಾಗುವುದು.

ಒನ್ ಕ್ಲಾಸ್ ಒನ್ ಟಿವಿ: ಕೋವಿಡ್ ಸಾಂಕ್ರಾಮಿಕದಿಂದಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಿರಲು ‘ಒನ್ ಕ್ಲಾಸ್ ಒನ್ ಟಿವಿ’ ಆರಂಭಿಸಲಾಗುವುದು.

ಕೋರ್ ಬ್ಯಾಂಕಿಂಗ್ ಸೇವೆ: ದೇಶದಾದ್ಯಂತ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ಸೇವೆ ಆರಂಭಿಸಲಾಗುವುದು.

ಇ ಪಾರ್ಸ್‌ಪೋರ್ಟ್: ಚಿಪ್ ಸಹಿತ ಇ ಪಾಸ್‌ಪೋರ್ಟ್‌ಗಳನ್ನು 2022–23ನೇ ಹಣಕಾಸು ವರ್ಷದಿಂದ ಜಾರಿಗೆ ತರಲಾಗುವುದು.

ವಂದೇ ಭಾರತ್‌ ರೈಲು: ಮುಂದಿನ 3 ವರ್ಷಗಳಲ್ಲಿ ದೇಶದಾದ್ಯಂತ 400 ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ನಡೆಸಲಿವೆ.

ಬಜೆಟ್ ಪ್ರತಿ ಹೀಗಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!