BREAKING NEWS
Search

Ayodhya Rama Mandir -ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಪ್ರತಿಮೆ ಆಯ್ಕೆ| ಶ್ರಮದ ಹಿಂದಿನ ಸ್ಟೋರಿ ಇಲ್ಲಿದೆ.

144

Ayodhya:- ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಶ್ರೀರಾಮನ ಪ್ರತಿಮೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ. ಜನವರಿ 22 ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರವನ್ನು ಉದ್ಘಾಟಿಸಲಿದ್ದಾರೆ.

ಅಯೋಧ್ಯೆಯಲ್ಲಿ ಜ. 22ರಂದು ಉದ್ಘಾಟನೆಗೊಳ್ಳಲಿರುವ ಶ್ರೀರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆಗೊಳ್ಳಲಿರುವ ಶ್ರೀರಾಮನ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ಶಿಲ್ಪವೇ ಅಂತಿಮಗೊಂಡಿದೆ. ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಎಂಬ ಶಿಲ್ಪಿ, ಕರ್ನಾಟಕದವರೇ ಆದ ಮೂಲತಹಾ ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿಯ ಗಣೇಶ್ ಭಟ್ ಎಂಬ ಶಿಲ್ಪಿ ಹಾಗೂ ಮೈಸೂರಿನ ಅರುಣ್ ಯೋಗಿರಾಜ್ ಅವರು ಶ್ರೀರಾಮನ ವಿಗ್ರಹಗಳನ್ನು ಕೆತ್ತಿದ್ದರು. ಅವುಗಳಲ್ಲಿ ಯೋಗಿರಾಜ್ ಅವರ ಶಿಲ್ಪವೇ ಫೈನಲ್ ಆಗಿದೆ. ಅದೇ ಮೂರ್ತಿಯನ್ನೇ ಪ್ರತಿಷ್ಠಾಪನೆಗೊಳಿಸಲು ಸಿದ್ಧತೆ ನಡೆಸಲಾಗಿದೆ.

ಮೂರ್ತಿಯ ಕೆತ್ತನೆ ಹಿಂದಿದೆ ಶ್ರಮದ ಕಥೆ!

ದೇಶದ ಹಲವು ಭಾಗದ ಖ್ಯಾತ ಕೆತ್ತನೆ ಕಲಾವಿಧರನ್ನು ಸಮಿತಿ ಸಂಪರ್ಕಿಸಿತ್ತು. ಅವರ ಹಿಂದಿನ ಸಾಧನೆ, ಕೆತ್ತನೆಯಲ್ಲಿನ ಸಾಮರ್ಥ್ಯ ವನ್ನು ನೋಡಲಾಗಿತ್ತು. ಹೀಗೆ ಒಟ್ಟು ಮೂರು ಕಲಾವಿಧರನ್ನು ಆಯ್ಕ ಮಾಡಿದ ಸಮಿತಿ ಮೂರು ಜನರಿಗೂ ಮಗುವಿನ ಮುಖಭಾವ ಇರುವ ಶ್ರೀರಾಮನ ವಿಗ್ರಹ ಕೆತ್ತನೆ ಮಾಡಲು ರಾಮಂದಿರದ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸೂಚಿಸಿತ್ತು. ಅದರಂತೆ, ಮೂವರೂ ಶಿಲ್ಪಿಗಳು ವಿವಿಧ ಮೂಲಗಳಿಂದ ಕೃಷ್ಟ ಶಿಲೆಗಳನ್ನು ತರಿಸಿಕೊಂಡು ಆರು ತಿಂಗಳ ಹಿಂದೆಯೇ ಕೆಲಸ ಆರಂಭಿಸಿದ್ದರು.

ಕೆಲಸದ ಸಮಯದಲ್ಲಿ ಕಂಕಣ ಕಟ್ಟಿದ್ದ ಇವರುಗಳು ಕಠಿಣ ಶ್ರಮ ಪಡಬೇಕಿತ್ತು.ಸಸ್ಯಹಾರ ರಾಮಜಪದ ಜೊತೆ ಕಾರ್ಯ ಪ್ರಾರಂಭಿಸಿದ ಇವರುಗಳಿಗೆ ಹಲವು ಕಷ್ಟಗಳು ಸಹ ಎದುರಾಗಿದ್ದವು. ಆದ್ರೆ ಎರಡು ತಿಂಗಳ ಹಿಂದೆ ಮೂವರು ಸಹ ಮೂರ್ತಿ ಕೆತ್ತನೆ ಮಾಡಿ ಮುಗಿಸಿದ್ದರು.

ಆಯ್ಕೆಯಾದ ಮೂರ್ತಿಯ ಕಲ್ಲು ಎಲ್ಲಿಯದು? ವಿಶೇಷ ಏನು?

ಆಯ್ಕೆಯಾದ ಮೂರ್ತಿ ಕೆತ್ತನೆಗೆ ಕಾರ್ಕಳದಿಂದ ಕಪ್ಪುಶಿಲೆಯೊಂದನ್ನು (ಕೃಷ್ಣ ಶಿಲೆ) ಈ ಹಿಂದೆ ಅಯೋಧ್ಯೆಗೆ ರವಾನಿಸಲಾಗಿತ್ತು. ಆದರೆ, ಶಿಲೆ ಪರಿಣಿತರು ಅಂತಿಮವಾಗಿ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯ ಬಜ್ಜೇಗೌಡನಪುರ ಎಂಬಲ್ಲಿ ಹತ್ತು ಅಡಿ ಆಳದಲ್ಲಿ ದೊರೆತ 6000 ಕ್ಕೂ ಹೆಚ್ಚು ಹಳೆಯದಾದ ದೊರೆತ ಕಪ್ಪುಶಿಲೆಯನ್ನೇ ಕೆತ್ತನೆಗೆ ಆಯ್ಕೆ ಮಾಡಿದ್ದರು. ಹಾಗಾಗಿ, ಅರುಣ್ ಅವರು ಆರು ತಿಂಗಳವರೆಗೆ ಕಠಿಣ ನಿಯಮದಲ್ಲಿದ್ದು , ಅಯೋಧ್ಯೆಯಲ್ಲಿ ಕೆತ್ತನೆ ಕೆಲಸ ಮುಗಿಸಿಕೊಟ್ಟು ಮೈಸೂರಿಗೆ ತೆರಳಿದ್ದಾರೆ.

ಟ್ರಸ್ಟ್ ನವರು ಹೇರಿದ್ದರು ನಿಯಮ!

ಅಯೋಧ್ಯೆಯು ಶ್ರೀರಾಮನ ಜನ್ಮಸ್ಥಳವಾಗಿರುವುದರಿಂದ ಅಲ್ಲಿ ಪ್ರತಿಷ್ಠಾಪನೆಯಾಗುವ ರಾಮನ ವಿಗ್ರಹವು ಬಾಲರಾಮನದ ಆಕೃತಿಯಲ್ಲೇ ಇರಬೇಕು ಎಂಬುದು ರಾಮಜನ್ಮಭೂಮಿ ಟ್ರಸ್ಟ್ ನವರ ಇಚ್ಛೆಯಾಗಿತ್ತು. ಹೀಗಾಗಿ ಹೀಗೆಯೇ ಇರಬೇಕು ಎಂದು ಕಲಾವಿದರಿಗೆ ತಾಕೀತು ಮಾಡಲಾಗುತ್ತು.

ಅವರ ಪರಿಕಲ್ಪನೆಯಂತೆಯೇ, 51 ಇಂಚು ಉದ್ದ, 3 ಅಡಿ ಅಗಲವಿರುವ ಕಲ್ಲಿನ ವಿಗ್ರಹ ಕೆತ್ತಲಾಗಿದೆ. ಮಗುವಿನ ಕಣ್ಣುಗಳ ಮುಗ್ಧತೆ, ತುಂಟತನದ ನೋಟ, ತುಟಿಗಳಲ್ಲಿ ಮುಗುಳ್ನಗೆ ಹಾಗೂ ಮುಖದಲ್ಲೊಂದು ಗಾಂಭೀರ್ಯತೆ ಇದೆಲ್ಲಾ ಭಾವಗಳೂ ಶಿಲ್ಪದಲ್ಲಿ ಎದ್ದು ಕಾಣುವಂತೆ ಕೆತ್ತಲಾಗಿದ್ದು ಕೃಷ್ಣ ಶಿಲೆಯಲ್ಲಿ ರಾಮ ಮೂಡಿದ್ದಾನೆ.

ಕಲ್ಪನೆಯಿಂದಲೇ ಅರಳಿಯ ಶ್ರೀರಾಮ.

ಮೂರ್ತಿ ಹೀಗೆಯೇ ಇರಬೇಕು ಎಂದು ಸಮಿತಿಯವರ ತಾಕೀತಿನ ನಡುವೆ ರಾಮನ ಬಾಲ ಚಿತ್ರಗಳ ಸಮಸ್ಯೆ ಕಲಾವಿದರದ್ದಾಗಿತ್ತು. ಹೀಗಾಗಿ ಮಕ್ಕಳ ಭಾವನೆ ,ಹಾವಾಭಾವ ಅಧ್ಯಯನ ನಡೆಸಿದ ಕಲಾವಿದರು,ತಮಗೆ ಮನಸ್ಸಿನಲ್ಲಿ ಮೂಡಿದ ಚಿತ್ರವನ್ನು ಮೂರ್ತಿರೂಪ ನೀಡಿದ್ದಾರೆ

ಈಗಾಗಲೇ ಪ್ರತಿಷ್ಠಾಪನೆಗೆ ಮೂರು ಮೂರ್ತಿಗಳು ಸಿದ್ಧಗೊಂಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ (Shri Ram Janmabhoomi Teerth Kshetra) ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಒಟ್ಟು ಮೂರು ಮೂರ್ತಿಗಳನ್ನು ಕೆತ್ತಿಸಿದೆ. ಮೂರ್ತಿ ಭಿನ್ನ ,ಸಮಯದ ಅಭಾವ, ಶಿಲ್ಪಿಗಳಗೆ ಸಮಸ್ಯೆಯಾದರೆ ಅದು ಉದ್ಘಾಟನೆ ಕಾರ್ಯಕ್ರಮಕ್ಕೆ ತೊಂದರೆಯಾಗಬಾರದು ಮತ್ತು ಅತ್ಯುತ್ತಮ ಮೂರ್ತಿಗಾಗಿ ಮೂವರು ಶಿಲ್ಪಿಗಳಿಂದ ಬಾಲರಾಮನ (Balarama) ಕೆತ್ತಿಸಲಾಗಿತ್ತು. ಆಯ್ಕೆ ನಂತರ ಉಳಿದ ಎರಡು ಮೂರ್ತಿಯನ್ನು ಮಂದಿರದಲ್ಲೇ ಇಡುವುದಾಗಿ ಮೂಲಗಳು ಹೇಳಿವೆ.

ಕರ್ನಾಟಕಕ್ಕೆ ರಾಮ ಸಂಬಂಧ.

ರಾಮನ ಭಂಟ ಹನುಮಂತನು ಹುಟ್ಟಿರುವ ನಮ್ಮ ಕನ್ನಡನಾಡಿನಲ್ಲಿ, ಶ್ರೀರಾಮನಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಅದೇ ರೀತಿ ಶ್ರೀರಾಮನ ವಿಗ್ರಹವೂ ಕರ್ನಾಟಕದ ಶಿಲ್ಪಿಯಿಂದಲೇ ಕೆತ್ತನೆಯಾಗಿರುವುದು ಭಾವನಾತ್ಮಕ ಭಕ್ತಿ ತರಿಸಿದೆ.

ಅಂತರಾಷ್ಟ್ರೀಯ ಗಮನ ಸೆಳೆದ ಕೇದಾರನಾಥದ ಆದಿ ಶಂಕರಚಾರ್ಯ, ದೆಹಲಿಯ ಇಂಡಿಯಾ ಗೇಟ್ ಬಳಿಯ ಸುಭಾಷ್ ಚಂದ್ರ ಬೋಸ್, ಇದೀಗ ವಿಶ್ವ ಹಿಂದೂಗಳ ಹೃದಯದಲ್ಲಿ ನೆಲೆಸಲಿರುವ ಅಯೋಧ್ಯೆಯ ಬಾಲ ರಾಮನ ಮೂರ್ತಿಯ ವಿಗ್ರಹ ರೂಪಿಸಿದ ಕೀರ್ತಿ ರಾಜ್ಯಕ್ಕೆ ಶ್ರೇಷ್ಠ ಶಿಲ್ಪಿ ಅರುಣ್ ಯೋಗಿರಾಜ್ ಹಾಗೂ ಈ ಕಾರ್ಯದಲ್ಲಿ ಹೆಗಲುಕೊಟ್ಟ ಅವರ ತಂಡದವರಿಗೆ ಸಲ್ಲುತ್ತದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!