
Karwar | ಕಾರವಾರದ ಇಂಜಿನಿಯರ್ ಮೊಬೈಲ್ ನಲ್ಲಿ ಕಾರವಾರ ಯುವತಿಯ ಅಶ್ಲೀಲ ಚಿತ್ರ! ಪತ್ನಿಯಿಂದಲೇ ದೂರು
ಕಾರವಾರ :- ಮದುವೆಯ ನಂತರದ ಅಕ್ರಮ ಸಂಬಂಧಗಳು ಸಂಸಾರವನ್ನೇ ಹಾಳುಮಾಡುತ್ತದೆ ಎನ್ಬುವುದಕ್ಕೆ ಕಾರವಾರ(karwar)ದಲ್ಲಿ ನಡೆದ ಈ ಘಟನೆಯೇ ಸಾಕ್ಷಿ ಎನ್ನುವಂತಾಗಿದೆ.
ಕಾರವಾರದ ಕಾಜುಭಾಗದ ಗುರುಮಠ ಕ್ರಾಸ್ ಬಳಿ ವಿಶಾಲ ನಾಗೇಶ ನಾಯ್ಕ ಅವರು ವಾಸವಾಗಿದ್ದಾರೆ.ಇಂಜಿನಿಯರ್ ಆಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ 2025ರ ನವೆಂಬರ್ 26ರಂದು ಅವರು ಬಾಡ ನಂದನಗದ್ದಾದ ಶಿವಾಜಿ ಹೈಸ್ಕೂಲ್ ಬಳಿಯ ಐಟಿ ಇಂಜಿನಿಯರ್ ಪಮಿ (ಹೆಸರು ಬದಲಿಸಲಾಗಿದೆ) ನಾಯ್ಕ ಅವರನ್ನು ಮದುವೆ ಆಗಿದ್ದಾರೆ. ಎರಡು ತಿಂಗಳ ಕಾಲ ಸುಖ ಸಂಸಾರ ನಡೆಸಿದ ಅವರು ನಂತರ ಪತ್ನಿಯನ್ನು ನಿರ್ಲಕ್ಷಿಸಿದ್ದಾರೆ. ಪತಿ ಮೇಲೆ ಅನುಮಾನಗೊಂಡ ಮಹಿಳೆ ವಿಶಾಲ ನಾಯ್ಕ ಅವರ ಮೊಬೈಲ್ ನೋಡಿದಾಗ ಅಲ್ಲಿ ಭಾಗಿ-3 ನಾಯ್ಕ (ಹೆಸರು ಬದಲಿಸಲಾಗಿದೆ)ಅವರ ಅಶ್ಲೀಲ ಫೋಟೋಗಳು ಕಾಣಿಸಿವೆ. ಭಾಗಿ -3 ನಾಯ್ಕ(ಹೆಸರು ಬದಲಿಸಲಾಗಿದೆ) ಬೆ*** ಫೋಟೋಗಳನ್ನ ನೀಡಿದ ವಿಶಾಲನಾಯ್ಕ ಪತ್ನಿ ಶಾಕ್ ಗೆ ಒಳಗಾಗಿದ್ದಾರೆ. ಇದನ್ನೂ ಓದಿ:-Karwar | ದಿಶಾ ಸಭೆಯಲ್ಲಿ ವಂದೇ ಮಾತರಂ ಗೀತೆ ಹಾಡುವ ವೇಳೆ ಗೊಂದಲ; ಪೂರ್ಣ ಗೀತೆ ಹಾಡಲು ತಡವರಿಸಿದ ಸಂಸದ ಕಾಗೇರಿ
ಜೊತೆಗೆ ಅನ್ಯ ಮಹಿಳೆಯ ಜೊತೆ ವಿಶಾಲ ನಾಯ್ಕ ಅವರು ನಡೆಸಿದ ಅಶ್ಲೀಲ ಸಂಭಾಷಣೆಗಳನ್ನು ಸಹ ಪತ್ನಿ ಪಮಿ ನಾಯ್ಕ ಅವರು ನೋಡಿದ್ದಾರೆ.
ವಿವಾಹಕ್ಕೂ ಮುನ್ನವೇ ವಿಶಾಲ ನಾಯ್ಕ ಅವರಿಗೆ ಪರಸ್ತ್ರೀ ಸಹವಾಸವಿದ್ದ ಬಗ್ಗೆ ಪಮಿ (ಹೆಸರು ಬದಲಿಸಿದೆ)ನಾಯ್ಕ ಅವರಿಗೆ ಮಾಹಿತಿ ಬಂದಿತಾದರೂ ಆ ಬಗ್ಗೆ ಅವರು ಕೆಲವರಲ್ಲಿ ವಿಚಾರಿಸಿದ್ದಾರೆ. ಆಗ, ವಿಶಾಲ ನಾಯ್ಕ ಅವರ ತಾಯಿ ವಿದ್ಯಾ ನಾಯ್ಕ ಹಾಗೂ ಅದೇ ಭಾಗದ ಮುರಳಿ ನಾಯ್ಕ ಅವರು ಅಂಥಹುದೇನೂ ಇಲ್ಲ ಎಂದು ಸುಳ್ಳು ಹೇಳಿ ಅವರಿಬ್ಬರ ಮದುವೆ ಮಾಡಿಸಿದ್ದಾರೆ. ಮದುವೆ ಅವಧಿಯಲ್ಲಿ ಮಹಿಳೆ ಮನೆಯಿಂದ 1 ಲಕ್ಷ ರೂ ವರದಕ್ಷಿಣೆ ಹಾಗೂ ಮದುವೆ ನಂತರ ಸಂಬಂಧಿಕರೊಬ್ಬರಿಗೆ ಉಡುಗರೆಗಾಗಿ 44 ಸಾವಿರ ರೂ ಮೌಲ್ಯದ ಕಿವಿಯೋಲೆಯನ್ನು ಪಮಿ ನಾಯ್ಕ ಅವರಿಂದ ವಿಶಾಲ ನಾಯ್ಕ ಕುಟುಂಬದವರು ಒತ್ತಾಯಪೂರ್ವಕವಾಗಿ ವಸೂಲಿ ಮಾಡಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಪಮಿ ನಾಯ್ಕ ಅವರು ವಿದ್ಯಾ ನಾಗೇಶ ನಾಯ್ಕ, ವಿಜೇತಾ ಮುರಳಿ ನಾಯ್ಕ ಅವರ ಬಳಿ ಹೇಳಿದ್ದಾರೆ. ಪತಿಯ ಮೊಬೈಲ್ ರಹಸ್ಯದ ಬಗ್ಗೆಯೂ ಮಾತನಾಡಿದ್ದಾರೆ. ಆಗ, ವಿದ್ಯಾ ನಾಯ್ಕ ಹಾಗೂ ವಿಜೇತಾ ನಾಯ್ಕ ಅವರು ಪಮಿ ನಾಯ್ಕ ಅವರನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ.
ಪ.ಮಿ ನಾಯ್ಕ ಅವರು ಪತಿಯಿಂದ ದೂರವಾಗಿ ತವರು ಮನೆಗೆ ಹೋಗಿದ್ದು, ಇದನ್ನು ಸಹಿಸದ ವಿಶಾಲ ನಾಯ್ಕ ಅವರು ಪತ್ನಿ ಹಾಗೂ ಅವರ ತಂದೆಗೆ ಕೊಲೆ ಬೆದರಿಕೆ ಹಾಕಿದ್ದಾರೆ. ತಮಗಾದ ಅನ್ಯಾಯದ ವಿರುದ್ಧ ಸಂತ್ರಸ್ತ ಮಹಿಳೆ ಮೂರುವರೆ ತಿಂಗಳ ಹಿಂದೆಯೇ ಪೊಲೀಸರ ಮೊರೆ ಹೋಗಿದ್ದು, ಕೇಸು ದಾಖಲಿಸಿದ ಪೊಲೀಸರು ಸತ್ಯಾಸತ್ಯತೆಯ ಕುರಿತು ಸಮಗ್ರ ತನಿಖೆ ನಡೆಸಿದ್ದಾರೆ.






