ಕಾರವಾರ ಡಯಾಸಿಸ್‌ನ ಬಿಷಪ್ ಆಗಿ ರೆ.ಮೆಸೆಂಜರ್ ಡುಮಿಂಗ್ ಡಯಾಸ್

115

ಕಾರವಾರ: ರೋಮ್‌ನ ಪೋಪ್ ಫ್ರಾನ್ಸಿಸ್
ಅವರು ಕಾರವಾರ ಡಯಾಸಿಸ್‌ ಬಿಷಪ್ ಆಗಿ ರೆ.ಮೆಸೆಂಜರ್ ಡುಮಿಂಗ್ ಡಯಾಸ್‌ರನ್ನು ನೇಮಕ ಮಾಡಿದ್ದಾರೆ. ರೋಮ್‌ನಲ್ಲಿ ಶನಿವಾರ ಇವರನ್ನು ನೇಮಕ ಮಾಡಿದರು.

ಐದು ವರ್ಷಗಳ ನಂತರ ಕಾರವಾರದ ಬಿಷಪ್‌ರನ್ನು ನೇಮಕ ಮಾಡಲಾಗಿದೆ.ಈ ಹಿಂದೆ ಬೆಳಗಾವಿಯ ಬಿಷಪ್ ಡೆರಿಕ್ ಫರ್ನಾಂಡಿಸ್‌ ರವರೇ ಕಾರವಾರದ ಪ್ರಭಾರಿ ಬಿಷಪ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ರೆ.ಮೆಸೆಂಜರ್ ಡುಮಿಂಗ್ ಡಯಾಸ್ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸೆಪ್ಟೆಂಬರ್ 3-1969 ರಲ್ಲಿ ಜನಿಸಿದ್ದು, ಎಂಬೋಜ್ ಹಾಗೂ ಮರ್ಸಿಲೈನ್ ಡಯಾಸ್ ಪುತ್ರರಾಗಿದ್ದಾರೆ. ಬೆಂಗಳೂರಿನ ಸೆಂಟ್ ಪೀಟರ್ಸ್ ಪಾಂಟಿಫಿಕಲ್ ಸೆಮಿನರಿಯಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ರೋಮ್‌ ನ ಉರ್ಬಾನಿಯಾನಾ ಯುನಿವರ್ಸಿಟಿಯೊಂದಿಗೆ ಸಂಲಗ್ನತೆ ಹೊಂದಿರುವ ಮಂಗಳೂರಿನ ಸೆಂಟ್ ಜೋಸೆಫ್ ಸೆಮಿನರಿಯಲ್ಲಿ ಧರ್ಮಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.ಇವರು BED, MA, MED ,MBA ಪದವೀಧರು ಸಹ ಹೌದು. ಈ ಹಿಂದೆ ಶಿವಮೊಗ್ಗದ ಡಯಾಸಿಸ್ ನ ಪಾದ್ರಿಯಾಗಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!