Vande Bharat train| ಗೋವಾ ಮಂಗಳೂರು ದರ ವಿವರ ನೋಡಿ

266

ಕಾರವಾರ /ಮಂಗಳೂರು:- ಮಂಗಳೂರಿನಿಂದ ಗೋವಾ ಮಡಗಾಂವ್ ವರೆಗೆ ಸಂಚರಿಸುವ ಒಂದೇ ಭಾರತ್ ರೈಲಿಗೆ ನರೇಂದ್ರ ಮೋದಿಯವರು( Prime Minister Narendra Modi) ಚಾಲನೆ ನೀಡಿದ್ದು ದಕ್ಷಿಣದಿಂದ ಉತ್ತರ ಕರಾವಳಿಯನ್ನು ಸಂಪರ್ಕಿಸುವ ಕರ್ನಾಟಕದ ನಾಲ್ಕನೇ ರೈಲು ಇದಾಗಿದೆ.
ಮುಂಬೈ ,ಗೋವಾ ,ಕರ್ನಾಟಕ ಕರಾವಳಿ,ಕೇರಳ ಭಾಗಕ್ಕೆ ಇದು ಅತೀ ಕಡಿಮೆ ಅವಧಿಯಲ್ಲಿ ಸಂಪರ್ಕ ಕಲ್ಪಿಸುತ್ತದೆ.

ಸಮಯ ಏನು? ( Vande Bharat train timings)

ವಾರದ ಆರು ದಿನ ಸಂಚರಿಸಲಿದ್ದು ಪ್ರತಿ ದಿನ ಬೆಳಗ್ಗೆ 8.30 ಕ್ಕೆ ಮಂಗಳೂರಿನಿಂದ ಹೊರಟು ಮಧ್ಯಾಹ್ನ 1.15ಕ್ಕೆ ಗೋವಾದ ಮಡಗಾಂವ್ ತಲುಪಲಿದೆ.
ನಂತರ ಸಂಜೆ 6.10 ಕ್ಕೆ ಮಡಗಾಂವ್ ನಿಂದ ಹೊರಟರೆ ರಾತ್ರಿ 10.45 ರ ವೇಳೆಗೆ ಮಂಗಳೂರು ಸೆಂಟ್ರಲ್ ತಲುಪಲಿದ್ದು 530 ಆಸನಗಳನ್ನು ಹೊಂದಿದೆ.

ಒಳಭಾಗದ ನೋಟ

ಇದನ್ನೂ ಓದಿ:- ಒಂದೇ ಭಾರತ್ ಟ್ರೈನ್ ವಿಶೇಷ ತಿಳಿಯಲು ಅಕ್ಷರದ ಮೇಲೆ ಕ್ಲಿಕ್ ಮಾಡಿ.

ತಲುಪುವ ಸಮಯ ಎಷ್ಟು?
ಒಟ್ಟು 319 ಕಿಲೋಮೀಟರ್ ಸಂಚಾರ 4.35 ನಿಮಿಷ ದಲ್ಲಿ ತನ್ನ ಗುರಿ ತಲುಪುತ್ತದೆ. ಈಗಿರುವ ಎಕ್ಸಪ್ರಸ್ ರೈಲಿಗಿಂತ (Express train )1 ಘಂಟೆ ಗೂ ಹೆಚ್ಚು ಸಮಯ ವೇಗದಲ್ಲಿ ಗುರಿ ಮುಟ್ಟುತ್ತದೆ‌.

ಎಷ್ಟು ದರ?
ಸಿ.ಸಿ ಕ್ಲಾಸ್ ಗೆ 985 ,ಇ.ಸಿ ಕ್ಲಾಸ್ ಗೆ 1955ರೂಗಳಿವೆ.
ಎಕ್ಸ್ ಪ್ರಸ್ ಟ್ರೈನ್ ಗೆ ಹೋಲಿಸಿದರೇ ದರ ದುಪ್ಪಟ್ಟ ಇದೆ.

ಲಾಭ ಏನು ?
ಮುಂಬೈ /ಕೇರಳ /ಗೋವಾ ದಿಂದ ಮಂಗಳೂರು ,ಕಾರವಾರ,ಉಡುಪಿ,ಕೇರಳ ತೆರಳುವವರಿಗೆ ಸಮಯ ಉಳಿತಾಯ ಆಗಲಿದೆ.
ಇನ್ನು ಗೋವಾ ,ಕರ್ನಾಟಕ ,ಕೇರಳ ಭಾಗದ ಪ್ರವಾಸೋಧ್ಯಮಕ್ಕೆ ಅನುಕೂಲ ಆಗಲಿದೆ. ಉತ್ತಮ ಸೌಲಭ್ಯದ ಜೊತೆ ಶುಚಿತ್ವ ,ಭದ್ರತೆ, ಪರಿಸರ ಸೌಂದರ್ಯ ಸವಿಯುವವರಿಗೆ ಆರಾಮದಾಯಕ ಪ್ರಯಾಣ ಇದಾಗಿದೆ. ಕಾರವಾರದ ಭಾಗದಿಂದ ಉಡುಪಿ, ಮಂಗಳೂರು ಭಾಗದಲ್ಲಿ ವೈದ್ಯಕೀಯ ಸೇವೆಗಾಗಿ ತುರ್ತಾಗಿ ಹೋಗುವವರಿಗೆ ಅನುಕೂಲ.

ನಷ್ಟ ಏನು?
ಕಾರವಾರ ,ಉಡುಪಿಯಲ್ಲಿ ಮಾತ್ರ ನಿಲ್ದಾಣ ಇದ್ದು ಕಾರವಾರದ ಪ್ರವಾಸೋದ್ಯಮಕ್ಕೆ ಸಹಾಯ ಆಗದು. ಏಕೆಂದರೆ. ಕಾರವಾರದಲ್ಲಿ ಇಳಿದು ಜಿಲ್ಲೆಯ ಬೇರೆ ಸ್ಥಳಗಳಿಗೆ ತೆರಳಲು ಲೋಕಲ್ ಟ್ರೈನ್ ನಲ್ಲಿ ತೆರಳಿದಷ್ಟು ಸಮಯ ಬೇಕಾಗುತ್ತದೆ. ಕುಮಟಾ, ಮುರುಡೇಶ್ವರ ಭಾಗದ ಪ್ರವಾಸೋದ್ಯಮಕ್ಕೆ ಸಹಕಾರಿ ಯಲ್ಲ. ಇನ್ನು ದುಪ್ಪಟ್ಟು ದರ ಇರುವುದರಿಂದ ಬಡ ಮಧ್ಯಮ ವರ್ಗದವರಿಗೆ ತುಟ್ಟಿಯಾಗಿದೆ.ಉಡುಪಿ,ಮಂಗಳೂರು,ಗೋವಾ ರಾಜ್ಯಕ್ಕೆ ಉಪಯೋಗ ಹೆಚ್ಚು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!