ಚಿಕಿತ್ಸೆ ಮರೆತ ಹಾಸ್ಟಲ್ ಸಿಬ್ಬಂದಿ- 20 ಹೆಚ್ಚು ವಿದ್ಯಾರ್ಥಿಗಳಿಗೆ ಅಂಟಿದ ಚರ್ಮ ರೋಗ

128

ಕಾರವಾರ :- ವಸತಿ ಹಾಸ್ಟೆಲ್ ನಲ್ಲಿ ಸ್ವಚ್ಛತೆ ಇರದ ಕಾರಣ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಚರ್ಮರೋಗ ಕಾಣಿಸಿಕೊಂಡು ಪೋಷಕರು ಆಡಳಿತವರ್ಗವನ್ನು ತರಾಟೆ ತೆಗೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಪಾಳ ಗ್ರಾಮದ ಸಮಾಜಕಲ್ಯಾಣ ಇಲಾಖೆಯ ಇಂದಿರಾಗಾಂಧಿ ಹಾಸ್ಟಲ್ ನಲ್ಲಿ ನಡೆದಿದೆ.

6 ರಿಂದ 10 ನೇ ತರಗತಿ ವರಗೆ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಸತಿಯೊಂದಿಗೆ ವ್ಯಾಸಾಂಗ ಮಾಡುತಿದ್ದು ,10 ನೇ ತರಗತಿಯ 6 ವಿದ್ಯಾರ್ಥಿಗಳಲ್ಲಿ, ಇತರೆ ತರಗತಿಯ 9 ವಿದ್ಯಾರ್ಥಿಗಳಲ್ಲಿ ವಿವಿಧ ಚರ್ಮರೋಗಗಳು ಕಾಣಿಸಿಕೊಂಡಿದೆ.

ಆದ್ರೆ ಸಂಬಂಧಿಸಿದ ಅಧಿಕಾರಿಗಳು ಈ ವಿದ್ಯಾರ್ಥಿಗಳನ್ನು ವೈದ್ಯರಿಗೆ ತೋರಿಸದೇ ಅಸಡ್ಡೆ ಮಾಡಿದ್ದು ಮತ್ತಷ್ಟು ವಿದ್ಯಾರ್ಥಿಗಳಿಗೆ ಚರ್ಮರೋಗ ಕಾಣಿಸಿಕೊಂಡಿದೆ.ಇಂದು ಪೋಷಕರು ಹಾಸ್ಟಲ್ ಗೆ ಆಗಮಿಸಿ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಲಿನ ನೀರು ಪೂರೈಕೆ.

ಹಾಸ್ಟೆಲ್ ನನ್ನು ಖಾಸಗಿ ಬಾಡಿಗೆ ಮನೆಯಲ್ಲಿ ನಡೆಸಲಾಗುತ್ತಿದೆ. ಇಲ್ಲಿಯ ಬಾವಿಯ ನೀರು ಸಂಪೂರ್ಣ ಕಲುಷಿತವಾಗಿದ್ದು ಬಾವಿಯನ್ನು ಶಿದ್ದೀಕರಿಸುವ ಕೆಲಸ ಈವರೆಗೂ ಆಗಿಲ್ಲ. ಈ ಬಾವಿಯ ನೀರನ್ನೇ ಮಕ್ಕಳಿಗೆ ಕುಡಿಯಲು ಹಾಗೂ ಸ್ನಾನಕ್ಕೆ ಬಳಕೆಯಾಗುತಿದ್ದು ಇದರಿಂದ ಮಕ್ಕಳಿಗೆ ಚರ್ಮರೋಗ, ಜ್ಚರ ಸೇರಿದಂತೆ ಇತರೆ ಕಾಯಿಲೆಗಳು ಬರುತಿದ್ದು ಹಾಸ್ಟೆಲ್ ನ ಸಿಬ್ಬಂದಿ ವಿರುದ್ಧ ಪೋಷಕರು ದೂರು ನೀಡಿದ್ದಾರೆ.

ಇದನ್ನೂ ಓದಿ:- ಉದ್ಯೋಗ ಮಾಹಿತಿ| ಎಲ್ ಐಸಿಯ 9394 ಹುದ್ದೆಗಳಿಗೆ ಅರ್ಜಿ ಆಹ್ವಾನ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!