ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಎರಡು ಸಾವು-43 ಕ್ಕೆ ಏರಿಕೆ ಕಂಡ KFD ಗೆ ಸೊಳ್ಳೆ ತಿಗಣೆ ಓಡಿಸುವ ಔಷಧವೇ ಗತಿ!

132

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ (uttrakannada ) ಪ್ರತಿ ವರ್ಷ ಮಂಗನಕಾಯಿಲೆ ಹೆಚ್ಚಳವಾಗುತ್ತಲೇ ಇದೆ.ಈ ಬಾರಿ ಮಂಗನಕಾಯಿಲೆಗೆ ನೀಡುವ ಡೋಸ್ ಸಹ ಸಮರ್ಪಕವಾದ ಪರಿಣಾಮ ಬೀರದ ಹಿನ್ನಲೆಯಲ್ಲಿ ಬೂಸ್ಟೇಜ್ ಡೋಸ್ ನನ್ನು ಸಹ ಸ್ಥಗಿಯ ಮಾಡಲಾಗಿದೆ.

ಆದ್ರೆ ಈ ಬಾರಿ ಸಿದ್ದಾಪುರ (siddapura)ಭಾಗದ ಹಲವು ಪ್ರದೇಶಗಳಲ್ಲಿ ಮಂಗನ ಕಾಯಿಲೆ ಉಲ್ಭಣಗೊಂಡಿದೆ. ಸಿದ್ದಾಪುರ ತಾಲೂಕಿನೊಂದರಲ್ಲೇ ಈವರೆಗೆ 43 ಪ್ರಕರಣ ದಾಖಲಾದ್ರೆ ಇಬ್ಬರು ಮಂಗನಕಾಯಿಲೆ (monkey fever) ಯಿಂದ ಮೃತರಾಗಿದ್ದಾರೆ.

ಮಂಗನಕಾಯಿಲೆ ರಕ್ತ ಪರೀಕ್ಷೆ ( blood test )ಮಾಡಿಸಲು ದೂರದ ಶಿವಮೊಗ್ಗಕ್ಕೆ ಕಳುಹಿಸಬೇಕು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಗೆ ಕಳುಹಿಸಬೇಕಾದ ಅನಿವಾರ್ಯತೆ ಇದ್ದು ಮಂಗನಕಾಯಿಲೆ ಹೆಚ್ಚಾದ ಹಿನ್ನಲೆಯಲ್ಲಿ ಶಿರಸಿಯ ಪಂಡಿತ್ ಆಸ್ಪತ್ರೆಯಲ್ಲಿ ಮಂಗನಕಾಯಿಲೆ ವಾರ್ಡ ಹಾಗೂ ಮಂಗನಕಾಯಿಲೆ ರಕ್ತ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಈ ಹಿನ್ನಲೆಯಲ್ಲಿ ಸದ್ಯ ಶಿರಸಿ ನಗರದ (sirsi city)ಪಂಡಿತ್ ಆಸ್ಪತ್ರೆಯಲ್ಲಿ ಶೀಘ್ರ ಮಂಗನಕಾಯಿಲೆ ರಕ್ತ ಪರಿಕ್ಷಾ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಮಾಹಿತಿ ನೀಡಿದ್ದಾರೆ.

ಸದ್ಯ ಬೋಸ್ಟೇಜ್ ಡೋಸ್ ನನ್ನು KFD ಬಾಧಿತ ಪ್ರದೇಶದಲ್ಲಿ ನೀಡುತ್ತಿಲ್ಲ. ದುರಂತ ಎಂದರೇ ಮಂಗನ ಕಾಯಿಲೆಗೆ ಸದ್ಯ ಯಾವ ಔಷಧವೂ ಇರದ ಕಾರಣ ಸೊಳ್ಳೆ,ತಿಗಣೆ ಸಾಯಿಸುವ DMP ಆಯಲ್ ನನ್ನು ಆರೋಗ್ಯ ಇಲಾಖೆ (health department) ಬಾಧಿತ ಪ್ರದೇಶದಲ್ಲಿ ನೀಡುತ್ತಿದೆ. ಉಣಗು( Ticks) ಮೈಗೆ ಹತ್ತದಂತೆ ಇದನ್ನು ಲೇಪಿಸಿಕೊಳ್ಳುವಂತೆ ಸಲಹೆ ನೀಡುತ್ತಿದೆ. ಇನ್ನು ಈ ತೈಲವೂ ಸಹ ಆರೋಗ್ಯ ಇಲಾಖೆಯಲ್ಲಿ ಸಂಗ್ರಹ ಕಡಿಮೆಯಿದ್ದು ಜನರ ಬಳಿ ಸಮರ್ಪಕವಾಗಿ ಮುಟ್ಟದ ಸ್ಥಿತಿ ಇದೆ.

ಮಂಗನಕಾಯಿಲೆ ಬಂದವರೆಷ್ಟು? ಸರ್ಕಾರ ಮಾಡಿದ್ದೇನು?

ಸಿದ್ದಾಪುರದ ಜಿಡ್ಡಿಯ 65 ವರ್ಷದ ಮಹಿಳೆ ಪೆ.22 ರಂದು ಮೃತಪಟ್ಟಿದ್ದಾರೆ. ಇದೀಗ ಇಂದು ಶಿವಮೊಗ್ಗ ದಲ್ಲಿ ಚಿಕಿತ್ಸೆ ಪಡೆಯುತಿದ್ದ ಕೊರ್ಲಕೈ ನ 60 ವರ್ಷದ ಮಹಿಳೆ ಮೃತಳಾಗಿದ್ದು ಸಾವಿನ ಸಂಖ್ಯೆ ಒಂದೇ ತಿಳಂಗಳಲ್ಲಿ ಎರಡಕ್ಕೆ ಏರಿಕೆ ಕಂಡಿದೆ. ಈ ಹಿಂದೆ ಮಂಗನ ಕಾಯಿಲೆಗೆ 8 ಜನ ಸಿದ್ದಾಪುರದಲ್ಲಿ ಅಸುನೀಗಿದ್ದರು.

ಅಂದಿನ ಸರ್ಕಾರ ಮೃತರ ಕುಟುಂಬಕ್ಕೆ ಎರಡು ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು.ಆದರೇ ಶಿವಮೊಗ್ಗ (shivamogga)ಜಿಲ್ಲೆಗೆ ಮಾತ್ರ ಪರಿಹಾರ ದೊರೆತಿದ್ದು ಉತ್ತರ ಕನ್ನಡ ಜಿಲ್ಲೆಯ ಏಳು ಜನರಿಗೆ ಈವರೆಗೂ ಪರಿಹಾರ ಮಾತ್ರ ದೊರೆತಿಲ್ಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!