Uttra Kannada| ಹಲವು ಗ್ರಾಮಗಳಲ್ಲಿ ಹುಲಿ ,ಚಿರತೆ ಕಾಟ! ಸೆರೆ ಸಿಕ್ತು ಹುಲಿ

117

ಜೋಯಿಡಾ :- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪ್ರಧಾನಿ (pradani) ಗ್ರಾಮದಲ್ಲಿ ಕಳೆದ ಎರಡು ದಿನದಿಂದ ತಿರುಗಾಡುತಿದ್ದ ಹುಲಿ ಮರಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಪ್ರಧಾನಿ ಗ್ರಾಮದಲ್ಲಿ ಆಹಾರ ಅರಸಿ ಗ್ರಾಮಕ್ಕೆ ನುಗ್ಗಿದ್ದ ಹುಲಿಯು ಜನರಲ್ಲಿ ಆತಂಕ ಮೂಡಿಸಿತ್ತು. ಅರಣ್ಯ ಇಲಾಖೆಯವರು ಬೋನನ್ನಿಟ್ಟು ಮಧ್ಯರಾತ್ರಿ ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಿದ್ದಾರೆ.

ಇನ್ನು ಜಿಲ್ಲೆಯ ಕುಮಟಾ(kumta) ತಾಲೂಕಿನ ಬಾಡ ಗ್ರಾಮದಲ್ಲಿ ವ್ಯಕ್ತಿಯೋರ್ವನ ಮೇಲೆ ಚಿರತೆ ದಾಳಿ ಮಾಡಿದೆ‌ ‌.

ಚಿರತೆ ದಾಳಿಗೆ ಒಳಗಾದವರು ಮಹಾಬಲೇಶ್ವರ ನಾಯ್ಕ ಎಂಬುದಾಗಿದ್ದು ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಇನ್ನು ಚಿರತೆ ಬಾಡಾದ ಗ್ರಾಮದ ಮನೆಯೊಂದರಲ್ಲಿ ಹೊಕ್ಕಿದ್ದು ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವ ಪ್ರಯತ್ನದಲ್ಲಿದೆ.

ಇನ್ನು ಗ್ರಾಮದಲ್ಲಿ ಚಿರತೆ ಬಂದಿರುವುದರಿಂದ
ಮನೆಯಿಂದ ಹೊರಗೆ ಬಾರದಂತೆ ಗ್ರಾಮ ಪಂಚಾಯತ್ ನಿಂದ ಜನತೆಗೆ ಎಚ್ಚರಿಗೆ ನೀಡಲಾಗಿದೆ.

ಇದನ್ನೂ ಓದಿ’-ಕಾಗೇರಿಗೆ ಅನಂತ ಮೌನದ ಪೆಟ್ಟು! ಮತ್ತೆ ಪ್ರಸಕ್ತ ರಾಜಕಾರಣಕ್ಕೆ ಬರಲಿದ್ದಾರಾ ಹಿಂದು ಹುಲಿ?




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!