Mandod Patna Panchayat member corruption audio

ಅಡಿಗೆ ಸಹಾಯಕಿ ಹುದ್ದೆಗೆ ಲಂಚ| ಮುಂಡಗೋಡು ಪಟ್ಟಣ ಪಂಚಾಯ್ತಿ ಸದಸ್ಯೆ ಆಡಿಯೋದಲ್ಲಿ ಏನಿದೆ ಗೊತ್ತಾ?

107

ಮುಂಡಗೋಡು:- ಮುಂಡಗೋಡು (mundgodu) ನಗರದ ಮಾರಿಕಾಂಬಾ ನಗರದ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯ ಹುದ್ದೆ ನೀಡಲು ಪಟ್ಟಣ ಪಂಚಾಯ್ತಿ ಸದಸ್ಯೆ ಬಿ.ಬಿ ಜಾನ್ ಮಲ್ಲನ್ನನವರ್ ಎಂಬುವವರು ಅರ್ಜಿ ಹಾಕಿದ ಬಡ ಮಹಿಳೆಗೆ ಆಯ್ಕೆ ಮಾಡಲು 50 ಸಾವಿರ ಲಂಚ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಪಟ್ಟಣ ಪಂಚಾಯತ್ ಸದಸ್ಯೆ ಬಿ.ಬಿ ಜಾನ್ ಹಾಗೂ ಉದ್ಯೋಗ ಬೇಡಿದ ಮಹಿಳೆಯ ಆಡಿಯೋ ಇದೀಗ ವೈರಲ್ ಆಗಿದೆ.

ಇನ್ನು ಈ ಹಣವನ್ನು ಜಿಲ್ಲಾಧಿಕಾರಿ ಹಾಗೂ ಚೀಫ್ ಆಫಿಸರ್ ಗೆ ಸಹ ಕೊಡಬೇಕು ಎಂದು ಮಾತನಾಡಿದ್ದಾರೆ. ಅಡಿಕೆ ಸಹಾಯಕಿ ನೇಮಕಕ್ಕೆ ಜಿಲ್ಲಾಧಿಕಾರಿ ,ಚೀಫ್ ಆಫಿಸರ್ ಹಣ ಪಡೆಯುವ ಆರೋಪ ಇದೀಗ ಕೇಳಿಬಂದಿದೆ.

ಈ ಬಗ್ಗೆ ತನಿಖೆಯಾದಲ್ಲಿ ಸತ್ಯಾಸತ್ಯೆತೆ ಹೊರಬರಲಿದ್ದು ,ಜಿಲ್ಲಾಧಿಕಾರಿ,ಚೀಫ್ ಆಫಿಸರ್ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆಯಾ ಅಥವಾ ಅವರು ಸಹ ಹುದ್ದೆಗಾಗಿ ಲಂಚದ ಪಟ್ಟಿಯಲ್ಲಿದ್ದಾರೆಯೇ ಎಂಬುದು ತಿಳಿಯಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!