Uttarakhand tracker Sirsi Padmini died

ಉತ್ತರಾಖಂಡ ಹಿಮಪಾತ-ಶಿರಸಿ ಪದ್ಮಿನಿ ಹೆಗಡೆ ಸಾವು

124

ಶಿರಸಿ: ಉತ್ತರಾಖಂಡದಲ್ಲಿ ( Uttarakhand) ಆದ ಹವಾಮಾನ ವೈಪರೀತ್ಯ ದಿಂದ ಹಿಮಪಾತವಾಗಿ ನಾಪತ್ತೆಯಾದ ಚಾರಣಿಗರಲ್ಲಿ ಶಿರಸಿ (sirsi) ತಾಲೂಕಿನ ಜಾಗನಹಳ್ಳಿಯ ಯುವತಿ ಪದ್ಮಿನಿ ಸಹ ಇದ್ದು ಅವರು ಮೃತಪಟ್ಟಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಟ್ರೆಕ್ಕಿಂಗ್ ಗೈಡ್‌ಗಳಾಗಿ (tracking )ಉತ್ತರ ಕಾಶಿಯ ( uttra kashi) ಮೂವರು ನಿವಾಸಿಗಳ ಜತೆ ಬೆಂಗಳೂರಿನಿಂದ 18, ಪುಣೆಯಿಂದ ಒಬ್ಬರು ಜೊತೆ ತೆರಳಿದ್ದರು. ಇವರೊಂದಿಗೆ ಜಾಗನಹಳ್ಳಿ ಮೂಲದ ಬೆಂಗಳೂರು ನಿವಾಸಿ, ಗೂಗಲ್ ಕಂಪನಿಯಲ್ಲಿ (Google company employee )ನೌಕರಿ ಮಾಡುತ್ತಿದ್ದ ಪದ್ಮಿನಿ ಹೆಗಡೆ (35) ಅವರು ಒಬ್ಬರಾಗಿದ್ದರು.

ಪದ್ಮಿನಿ ಹೆಗಡೆ ಅವರು ಕೆಲವು ವರ್ಷಗಳಿಂದ ಚಾರಣದಲ್ಲಿ ಆಸಕ್ತಿ ಹೊಂದಿ ದ್ದರು. ಮೇ 29ರಿಂದ ಜೂನ್ 7ರವರೆಗೆ ಭಟವಾಡಿ ಮಲ್ಲಾ – ಸಿಲ್ಲಾ ಕುಶಕಲ್ಯಾಣ ಸಹಸ್ರತಾಲ್ ಟ್ರೆಕ್ಕಿಂಗ್‌ಗೆ ಅನುಮತಿ ಪಡೆದ ತಂಡದೊಂದಿಗೆ ಪದ್ಮಿನಿ ಅವರು ತೆರಳಿದ್ದರು.

ಜೂ. 4ರಂದು ಮಧ್ಯಾಹ್ನದ ಸಮಯಕ್ಕೆ ಹವಾಮಾನ ಸರಿಯಾಗಿಲ್ಲ ಎನ್ನುವುದಾಗಿ ಪದ್ಮಿನಿ ಅವರು ತಮ್ಮ ತಾಯಿಗೆ ಮೆಸೆಜ್ ಹಾಕಿದ್ದರು. ಅವರು ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ನಮಗಿದೆ. ಅವರಿಗೆ ಯಾವುದೇ ಅವಘಡ ಆಗಿದೆ ಎನ್ನುವುದಾಗಿ ನಮಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ ಎನ್ನುವುದಾಗಿ ಪದ್ಮಶ್ರೀ ಅವರ ಕುಟುಂಬದವರು ನಿನ್ನೆ ತಿಳಿಸಿದ್ದರು.

ಪದ್ಮಿನಿ ಅವರ ತಂದೆ ಶ್ರೀಪತಿ ಹೆಗಡೆ ಅವರು ನಿಧನರಾಗಿದ್ದಾರೆ. ತಾಯಿ ಶೈಲಾ ಹೆಗಡೆ ಅವರು ಮುಂಬೈನಲ್ಲಿ ತಮ್ಮ ಮೊದಲ ಮಗಳ ಜತೆ ವಾಸ ಮಾಡುತ್ತಿದ್ದಾರೆ. ಇವರು ಕೂಡ ತಾಯಿ ಹಾಗೂ ಅಕ್ಕನ ಜತೆ ವಾಸವಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದರು ಎನ್ನುವುದಾಗಿ ತಿಳಿದು ಬಂದಿದ್ದು ಇಂದು ಮೃತರಾಗುರುವ ಮಾಹಿತಿಯನ್ನು ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಖಚಿತ ಪಡಿಸಿದ್ದು ಪಸ್ಮಿನಿಯವರ ಮೃತ ದೇಹ ಪತ್ತೆಯಾಗಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!