ಕಾರವಾರ,ಶಿವಮೊಗ್ಗಕ್ಕೆ ಪ್ರಧಾನಿ ಮೋದಿ?

105

ಬೆಂಗಳೂರು:- 2023 ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ನವಂಬರ್ ಹಾಗೂ ಡಿಸೆಂಬರ್ ಅವಧಿಯಲ್ಲಿ ಎರಡುಬಾರಿ ಬೇಟಿ ನೀಡಲಿದ್ದಾರೆ.( Prime Minister Narendra Modi)

ನವಂಬರ್ 11 ರಂದು ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರವರ ಬೃಹತ್ ಪ್ರತಿಮೆಯನ್ನು ಅನಾವರಣ ಗೊಳಿಸಲಿದ್ದಾರೆ. ನಂತರ ಡಿಸೆಂಬರ್ ಅವಧಿಯಲ್ಲಿ ಶಿವಮೊಗ್ಗ ಹಾಗೂ ಕಾರವಾರಕ್ಕೆ (karwar ) (Shivamogga) ಕಾರ್ಯಕ್ರಮ ನಿಗಧಿಪಡಿಸಿ ಬರಲಿದ್ದಾರೆ ಎಂದು ರಾಜ್ಯ ಬಿಜೆಪಿ (bjp)ಮೂಲಗಳು ತಿಳಿಸಿವೆ.

ಕರಾವಳಿ ಎಂದಾಗ ಕೇವಲ ಮಂಗಳೂರು ಮಾತ್ರ ಹೆಚ್ಚಿನ ಮಣ್ಣನೆಗೆ ಪಾತ್ರವಾಗುತಿದ್ದು ಹಿಂದೆ ಚುನಾವಣೆ ಯಲ್ಲಿ ಹೆಚ್ಚು ಸ್ಥಾನವನ್ನು ಉತ್ತರ ಕನ್ನಡ ಜಿಲ್ಲೆ ತಂದುಕೊಟ್ಟಿತ್ತು ಹೀಗಾಗಿ ಮೋದಿಯವರು ಈ ಭಾರಿ ಜಿಲ್ಲೆಗೆ ಬಂದರೆ ಒಂದಿಷ್ಟು ಬದಲಾವಣೆಯ ನಿರೀಕ್ಷೆಯನ್ನು ಜಿಲ್ಲೆಯ ನಾಯಕರು ಇಟ್ಟುಕೊಂಡಿದ್ದಾರೆ.

ಹೀಗಾಗಿ ಕರಾವಳಿ ಮತ್ತು ಮಲೆನಾಡಿನ ಶಿವಮೊಗ್ಗಕ್ಕೆ ಮೋದಿಯವರು ಬರಲು ಸಮಯ ನಿಗದಿ ಕುರಿತು ಚರ್ಚೆ ನಡೆದಿದ್ದು ದಿನಾಂಕ ನಿಗದಿಯಾಗಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!