Sirsi | ಶಿರಸಿಯ ಈ ಊರಿನ ಬಾವಿಯಲ್ಲಿ ಕಡ್ಡಿ ಗೀರಿದ್ರೂ ಬೆಂಕಿ ಹತ್ತುತ್ತೆ! ಕಾರಣ ಪತ್ತೆಗೆ ತಜ್ಞರ ಹರಸಾಹಸ?

Oil-contaminated well water catches fire in Omkara Colony, Dodnalli village, Sirsi taluk, Uttara Kannada district. Oil-contaminated well water catches fire in Omkara Colony, Dodnalli village, Sirsi taluk, Uttara Kannada district.
Oil-contaminated well water catches fire in Omkara Colony, Dodnalli village, Sirsi taluk, Uttara Kannada district.

Sirsi | ಶಿರಸಿಯ ಈ ಊರಿನ ಬಾವಿಯಲ್ಲಿjj ಕಡ್ಡಿ ಗೀರಿದ್ರೂ ಬೆಂಕಿ ಹತ್ತುತ್ತೆ! ಕಾರಣ ಪತ್ತೆಗೆ ತಜ್ಞರ ಹರಸಾಹಸ?ವಿಡಿಯೋ ನೋಡಿ

ಕಾರವಾರ  :- ಉತ್ತರ ಕನ್ನಡ ಜಿಲ್ಲೆಯ  ಶಿರಸಿ(sirsi) ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಓಂಕಾರ ಕಾಲೋನಿಯ ಬಾವಿಗಳಿಗೆ ಕಲುಷಿತ ಆಯಿಲ್ ಸೇರ್ಪಡೆ ಗೊಂಡಿದ್ದು ಇದೀಗ ಆರಕ್ಕೂ ಹೆಚ್ಚು ಬಾವಿಗಳು ಕಲುಷಿತ ಗೊಂಡಿದೆ. ಬಾವಿ ನೀರಿನ್ನು ತೆಗೆದು ಕಡ್ಡಿ ಗೀರಿದರೇ ಬೆಂಕಿ ಹೊತ್ತಿಕೊಳ್ಳುತಿದ್ದು ,ಕಳೆದ ಒಂದು ವಾರದ ಈಚೆಗೆ ಬಾವಿಯಲ್ಲಿ  ನೀರಿನ ಮೇಲಮೈ ಮೇಲೆ ದಪ್ಪ ದ್ರವ ರೂಪದ ಆಯಿಲ್ ಶೇಕಡಣೆ ಕಂಡು ಸ್ಥಳೀಯರು ಗ್ರಾಮಪಂಚಾಯ್ತಿ ಕಚೇರಿಗೆ ದೂರು ನೀಡಿದ್ದಾರೆ.ಬಾವಿಯಲ್ಲಿ ಆಯಿಲ್ ಶೇಕಡಣೆಯಿಂದ ಗಬ್ಬು ವಾಸನೆ ಹೊಡೆಯುತಿದ್ದರೇ ,ಸೀಮೆಎಣ್ಣೆ ,ಆಯಿಲ್ ಮಿಶ್ರಿತ ವಾಸನೆ ಬರುತ್ತಿದೆ.ಸ್ಥಳಕ್ಕೆ  ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ಪ್ರೀತಿ ಶೆಟ್ಟಿ ಹಾಗೂ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಭೇಟಿ ಪರಿಶೀಲನೆ  ನಡೆಸಿ ನೀರಿನ ಪರೀಕ್ಷೆ  ನಡೆಸಿದಾಗ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದೆ.ಆದರೇ ಯಾವ ಕಲ್ಮಷ ಆಯಿಲ್ ಸೇರಿದೆ ಎಂಬ ಬಗ್ಗೆ ಶೋಧನೆಗೆ ನೀರಿನ ಮಾದರಿ ಯನ್ನ ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಆಯಿಲ್ ಮಿಶ್ರಣವಾಗಲು ಏನು ಕಾರಣ ಎಂದು ಅಣತಿ ದೂರದಲ್ಲೇ ಇರುವ ವಿದ್ಯುತ್ ಪವರ್ ಗ್ರಿಡ್ ಬಳಿ ಸಹ ತಪಾಸಣೆ ಮಾಡಿದ್ರೂ ಮೂಲ ಸಮಸ್ಯೆ ಪತ್ತೆಯಾಗಿಲ್ಲ. ಹೀಗಾಗಿ ಸ್ಥಳ ಶೋಧಕ್ಕೆ ತಜ್ಞರಿಗೂ ಬುಲಾವ್ ನೀಡಲಾಗಿದೆ. ಇನ್ನು ಇಡೀ ಕಾಲೀನಿಯಲ್ಲಿ ಈ ರೀತಿ ನೀರು ಕಲುಷಿತವಾಗಿದ್ದರಿಂದ ಓಂಕಾರ ಕಾಲೋನಿಯ ಜನರಿಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಗ್ರಾ.ಪಂ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement