ಭಾನುವಾರದ ದಿನ ಭವಿಷ್ಯ.

964

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ವಾರ: ಭಾನುವಾರ,
ತಿಥಿ: ತ್ರಯೋದಶಿ, ನಕ್ಷತ್ರ: ಕೃತಿಕಾ,
ರಾಹುಕಾಲ: 4.41 ರಿಂದ 6.06
ಗುಳಿಕಕಾಲ: 3.15 ರಿಂದ 4.41
ಯಮಗಂಡಕಾಲ: 12.24 ರಿಂದ 1.49

ಮೇಷ: ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ, ಸ್ನೇಹಿತರಿಂದ ಕಿರಿಕಿರಿ, ದೂರ ಪ್ರಯಾಣ ಮಾಡುವ ಸಾಧ್ಯತೆ, ವಿಪರೀತ ಹಣಕಾಸು ಸಮಸ್ಯೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ, ನಿರ್ಧಾರಗಳಲ್ಲಿ ಗೊಂದಲದ ವಾತಾವರಣ.

ವೃಷಭ: ವಿದ್ಯೆಯಲ್ಲಿ ಮುಂದುವರೆಯುವ ಆಲೋಚನೆ, ಬಂಧು ಮಿತ್ರರೊಡನೆ ಮನಸ್ತಾಪ, ಸಾಲ ಪಡೆದವರೊಂದಿಗೆ ಕಲಹ, ಮಹಿಳೆಯರಲ್ಲಿ ಶತ್ರುತ್ವ ವೃದ್ಧಿ, ಉದ್ಯೋಗ ಸ್ಥಳದಲ್ಲಿ ಎಚ್ಚರಿಕೆ.

ಮಿಥುನ: ವಾಸಸ್ಥಳ ಬದಲಾಯಿಸುವ ಆಲೋಚನೆ, ಕೆಲಸದಲ್ಲಿ ಅಧಿಕವಾದ ಒತ್ತಡ, ಉದ್ಯೋಗ ಬದಲಾವಣೆ, ಸ್ಥಿರಾಸ್ತಿ ವ್ಯವಹಾರದಲ್ಲಿ ಗೊಂದಲ, ವ್ಯಾಪಾರ ಉದ್ಯಮದಲ್ಲಿ ನಷ್ಟ ಸಾಧ್ಯತೆ, ಹೊಸ ವ್ಯವಹಾರ ಆರಂಭಕ್ಕೆ ಚಿಂತನೆ.

ಕಟಕ: ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸಕ್ಕೆ ಕಂಟಕವಾಗುವ ಸಾಧ್ಯತೆ, ಹಣಕಾಸು ವಿಚಾರದಲ್ಲಿ ಮೋಸ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರದಲ್ಲಿ ನಷ್ಟದ ಆತಂಕ.

ಸಿಂಹ: ಒತ್ತಡದ ಜೀವನ, ದುಷ್ಟರ ಸಹವಾಸದಿಂದ ದೂರವಿರಿ, ಯಾರನ್ನು ನಂಬಿ ಕೆಲಸ ಮಾಡಬೇಡಿ, ಮನಸ್ಸಿನಲ್ಲಿ ಆತಂಕ ಗೊಂದಲ, ಮಿತ್ರರಿಂದ ಆಕಸ್ಮಿಕ ನಷ್ಟ ಸಾಧ್ಯತೆ.

ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಮೋಸ, ಕೆಲಸಗಾರರ ಮೇಲೆ ಅನುಮಾನ, ಶೀತ ಭಾದೆ, ಅಜೀರ್ಣ ಸಮಸ್ಯೆ, ವ್ಯಾಪಾರ ಉದ್ಯೋಗದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.

ತುಲಾ: ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ಮಿತ್ರರು ಶತ್ರುವಾಗಿ ಪರಿವರ್ತನೆಯಾಗುವರು, ಆತುರ ನಿರ್ಧಾರಗಳಿಂದ ಸಂಕಷ್ಟ ಸಾಧ್ಯತೆ.

ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಕ್ಕಳೊಂದಿಗೆ ಮನಸ್ಥಾಪ, ಪ್ರಯಾಣದಲ್ಲಿ ಆಕಸ್ಮಿಕ ಸಂಕಷ್ಟ, ಮಾಡುವ ಕೆಲಸದಲ್ಲಿ ಅಪಜಯ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ.

ಧನಸ್ಸು: ಮಕ್ಕಳಲ್ಲಿ ಚುರುಕುತನ, ಬೇಜವಾಬ್ದಾರಿತನದ ನಡುವಳಿಕೆಯಿಂದ ನಷ್ಟ, ಭವಿಷ್ಯದ ಮೇಲೆ ದುಷ್ಟ ಪರಿಣಾಮ, ದೀರ್ಘಕಾಲದ ರೋಗ ಭಾದೆ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ನಾನಾರೀತಿಯ ಆಲೋಚನೆ.

ಮಕರ: ಶರೀರದಲ್ಲಿ ನೋವುಗಳ ಭಾದೆ, ಹೊಟ್ಟೆ ನೋವು ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ನಾನಾ ಮೂಲಗಳಿಂದ ಧನಾಗಮನ, ತಾಂತ್ರಿಕ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ಕುಂಭ: ಕುಟುಂಬದಲ್ಲಿ ವೈಮನಸ್ಸು, ಮಕ್ಕಳೇ ಶತ್ರುವಾಗಿ ಪರಿವರ್ತನೆಯಾಗುವರು, ಅನಗತ್ಯ ಮಾತಿನಿಂದ ಸಂಕಷ್ಟ, ಮಕ್ಕಳಿಗಾಗಿ ಮಾಡಿದ್ದ ಸಾಲದ ಭಾದೆ, ಹಣ ಇಲ್ಲದೆ ಪರದಾಡುವಿರಿ.

ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಅವಘಡ, ಬಂಧುಗಳೊಂದಿಗೆ ಕಿರಿಕಿರಿ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ನಿದ್ರೆಯಲ್ಲಿ ಕೆಟ್ಟ ಕನಸು, ಉದ್ಯೋಗ ಸ್ಥಳದಲ್ಲಿ ಉತ್ತಮ ಗೌರವ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!