BREAKING NEWS
Search

ಸ್ಮಾರ್ಟ್ ಫೋನ್ ಬ್ಯಾಟರಿ ಏಕೆ ಉಬ್ಬುತ್ತದೆ ಗೊತ್ತೇ?

74

ಬಹುತೇಕ ಜನರ ಬಳಿ ಸ್ಮಾರ್ಟ ಫೋನ್ ಗಳು ಇದ್ದೇ ಇದೆ.ಇದರ ಬಳಕೆ ಹೆಚ್ಚು ಕೂಡ.ಆದ್ರೆ ನೀವು ಬಳಸುವ ಸ್ಮಾರ್ಟ ಫೋನ್ ಹಲವು ವರ್ಷದ ನಂತರ ಅದರ ಬ್ಯಾಟರಿ ಉಬ್ಬುವ ಜೊತೆ ಚಾರ್ಜಿಗ್ ಸಮಯ ಕೂಡ ಮೊಟಕಾಗುತ್ತದೆ. (Smartphone Batteries)
ನಿರ್ಲಕ್ಷ ವಹಿಸಿದರೇ ನಿಮ್ಮ ಸ್ಮಾರ್ಟಫೋನ್ ( smartphone) ಬ್ಲಾಸ್ಟ್ ಆಗಿ ಹಾನಿ ಸಹ ಆಗುತ್ತದೆ. ಹಾಗಿದ್ರೆ ಬ್ಯಾಟರಿ ಉಬ್ಬದಂತೆ ಅದರ ಅವಧಿ ಸಹ ದೀರ್ಘವಾಗಿ ಬರಲು ಏನು ಮಾಡಬೇಕು ಇಲ್ಲಿದೆ ಮಾಹಿತಿ.

ಸ್ಮಾರ್ಟ್ ಫೋನ್ ಬ್ಯಾಟರಿಯು ಊದಿಕೊಳ್ಳಲು ಪ್ರಮುಖ ಕಾರಣ ಇದನ್ನು ಅತಿಯಾಗಿ ಅಥವಾ ತಪ್ಪಾಗಿ ಉಪಯೋಗಿಸುವುದು. ಹೌದು ದೀರ್ಘಕಾಲದವರೆಗೆ ವಿಡಿಯೋವನ್ನು ವೀಕ್ಷಿಸುವುದರಿಂದ ಬ್ಯಾಟರಿ ಬರಿದಾಗುತ್ತದೆ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸರಿಯಾದ ರೀತಿಯಲ್ಲಿ ಬಳಸಲು ಮೊದಲು ಪ್ರಯತ್ನಿಸಬೇಕು.

ಅನಗತ್ಯ ಆ್ಯಪ್‌ಗಳನ್ನು ತೆಗೆದು ಹಾಕಿ

ಕೆಲವರ ಸ್ಮಾರ್ಟ್ ಫೋನ್ ನಲ್ಲಿ ಲೆಕ್ಕವಿಲ್ಲದಷ್ಟು ಆ್ಯಪ್ ಗಳಿರುತ್ತದೆ. ಅದು ಅಗತ್ಯ ಕೂಡ ಇರುವುದಿಲ್ಲ. ಇವು ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಅಷ್ಟೇ ಅಲ್ಲ, ಬ್ಯಾಟರಿಯನ್ನು ಬೇಗನೆ ಖಾಲಿ ಮಾಡುತ್ತದೆ. ಈಗಿರುವ ಹೆಚ್ಚಿನ ಆ್ಯಪ್ ಗಳು ಜಿಪಿಎಸ್, ಕ್ಯಾಮೆರಾ ಅಥವಾ ವಿಡಿಯೋ ಕರೆಗಳ ಆ್ಯಕ್ಸಸ್ ಕೇಳುತ್ತದೆ. ಇದು ಬ್ಯಾಟರಿ ಮೇಲೆ ಹೊಡೆತ ಬಿಳುತ್ತದೆ. ಹೀಗಾಗಿ ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು ಒಳ್ಳೆಯದು.

ಬ್ಯಾಕ್ ಗ್ರೌಂಡ್ ಆ್ಯಪ್ ಕ್ಲೋಸ್ ಮಾಡಿ.

ಬ್ಯಾಟರಿ ಬೇಗೆನ ಖಾಲಿ ಆಗಲು ಅಥವಾ ಇದಕ್ಕೆ ಒತ್ತಡ ಬೀಳಲು ಮತ್ತೊಂದು ಪ್ರಮುಖ ಕಾರಣ ಬ್ಯಾಕ್ ಗ್ರೌಂಡ್ ಆ್ಯಪ್. ಒಂದು ಆ್ಯಪ್ ಅನ್ನು ತೆರೆದು ಉಪಯೋಗಿಸಿದ ನಂತರ ಕೆಲವರು ಅದನ್ನು ಮಿನಿಮೈಸ್ ಮಾಡಿ ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡಿದಾಗ ಬ್ಯಾಕ್ ಗ್ರೌಂಡ್ ನಲ್ಲಿ ಆ ಆ್ಯಪ್ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಇದು ಬ್ಯಾಟರಿ ಮೇಲೆ ಒತ್ತಡ ಹೇರುತ್ತಿದೆ. ಹೀಗಾಗಿ ಯಾವಾಗಲೂ ಒಂದು ಅಪ್ಲಿಕೇಷನ್ ಅನ್ನು ಉಪಯೋಗಿಸಿದ ನಂತರ ಸಂಪೂರ್ಣವಾಗಿ ಕ್ಲೋಸ್ ಮಾಡಿ.

ಸೆಟ್ಟಿಂಗ್ಸ್ ನಲ್ಲಿ ಬದಲಾವಣೆಮಾಡಿ.

ನಿಮ್ಮ ಸ್ಮಾರ್ಟ್‌ಫೋನ್‌ನ ಕೆಲವು ಸೆಟ್ಟಿಂಗ್‌ಗಳು ನಿಮ್ಮ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಡಿಸ್ ಪ್ಲೇ ಬ್ರೈಟ್ ನೆಸ್ ಅನ್ನು ಕಡಿಮೆ ಮಾಡುವ ಮೂಲಕ, ಬ್ಲೂಟೂತ್, ವೈ-ಫೈ ಆಫ್ ಮಾಡುವ ಮೂಲಕ ನೀವು ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು. ಅಗತ್ಯವಿದ್ದಾಗ ಮಾತ್ರ ನೀವು ಅವುಗಳನ್ನು ಬಳಸಬೇಕು.

ಇವುಗಳ ಬಗ್ಗೆಯೂ ಗಮನ ಹರಿಸಿ

ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರೈಟ್ ನೆಸ್ ಕಡಿಮೆ ಮಾಡಿ (ಬ್ಯಾಕ್‌ಲೈಟ್) ಅಥವಾ ಅಟೋ ಬ್ರೈಟ್ ನೆಸ್ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿ. ಅತಿ ಹೆಚ್ಚು ಬ್ರೈಟ್ ನೆಸ್ ಇಡುವುದರಿಂದ ಬ್ಯಾಟರಿ ಬಿಸಿ ಆಗುತ್ತದೆ.
ಡಿಸ್ ಪ್ಲೇ ಟೈಮ್ ಸೆಟ್ ಮಾಡುವುದು ಕೂಡ ಮುಖ್ಯ. ಹೀಗೆ ಮಾಡಿದರೆ ಮೊಬೈಲ್ ಅಟೋಮೆಟಿಕ್ ಲಾಕ್ ಸ್ಕ್ರೀನ್ ಆಗುತ್ತದೆ. ಇದರಿಂದ ನೀವು ಆಕಸ್ಮಿಕವಾಗಿ ಫೋನ್ ಲಾಕ್ ಮಾಡಲು ಮರೆತರೆ ಅಟೋಮೆಟಿಕ್ ಆಗಿ ಲಾಕ್ ಆಗುತ್ತದೆ.
ಕೆಲವು ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಬಳಸುವ ಹಿನ್ನೆಲೆಯಲ್ಲಿ ಡೇಟಾವನ್ನು ಸಿಂಕ್ ಮಾಡುತ್ತಲೇ ಇರುತ್ತವೆ. ಇಂತಹ ಆ್ಯಪ್ ಗಳನ್ನು ಮೊದಲು ಕ್ಲೋಸ್ ಮಾಡಿ.

ನಿಮಗೆ ಬ್ಲೂಟೂತ್, ವೈ-ಫೈ, ಜಿಪಿಎಸ್ ಅಗತ್ಯವಿಲ್ಲದಿದ್ದರೆ, ಅವುಗಳನ್ನು ಆಫ್ ಮಾಡಿ. ಇವೆಲ್ಲವೂ ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಇದು ನಿಮ್ಮ ಫೋನ್‌ನ ಬ್ಯಾಟರಿ ಅವಧಿಯನ್ನು ಕಡಿಮೆ ಮಾಡುತ್ತದೆ.

ಬ್ಯಾಟರಿ ಬಗ್ಗೆ ಎಚ್ಚರವಿರಲಿ.

ಒಂದುವೇಳೆ ನಿಮ್ಮ ಮೊಬೈಲ್ ಬ್ಯಾಟರಿ ಉಬ್ಬುತ್ತಿದೆ ,ಚಾರ್ಚ ಹೆಚ್ಚು ನಿಲ್ಲುತ್ತಿಲ್ಲ ಎಂದರೇ ಮೊದಲು ಬ್ಯಾಟರಿ ಬದಲಿಸಿ. ಒಂದುವೇಳೆ ನೀವು ಬದಲಿಸದಿದ್ದರೇ ಬ್ಯಾಟರಿ ಹೆಚ್ಚು ಉಬ್ಬಿ ಸ್ಪೋಟವಾಗುವ ಸಾಧ್ಯತೆಗಳಿವೆ. ಹೀಗಾಗಿ ಈ ಬಗ್ಗೆ ಎಚ್ಚರ ವಹಿಸಿ.
ಈಗ ಬರುತ್ತಿರುವ 5G ಮೊಬೈಲ್ ನಲ್ಲಿ ಈ ಸಮಸ್ಯೆ ನೀಗಿಸುವ ಪ್ರಯತ್ನ ಮಾಡಲಾಗಿದೆ.ಆದ್ರೆ ಬ್ಯಾಟರಿ ಉಬ್ಬುವ ಬದಲು ಲೇಯರ್ ಸಡಿಲಗೊಳ್ಳುತ್ತದೆ.ಇದರಿಂದ ಮೊಬೈಲ್ ಬಿದ್ದಾಗ ಸಹ ಸ್ಪೋಟಗೊಳ್ಳುವ ಅಪಾಯವಿದೆ.

webstory




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!