ತಮಿಳುನಾಡು:- ತಮಿಳು ನಾಡಿನ ಹೆಸರಾಂತ ರಾಜಕಾರಣಿ ಹಾಗೂ ನಟ ಸೀಮನ್ ಮೇಲೆ ನಟಿ ವಿಜಯಲಕ್ಷ್ಮಿ( film actor Vijayalakshmi) ಏಳು ಬಾರಿ ತನಗೆ ಗರ್ಭಪಾತ ಮಾಡಿಸಿರುವ ಆರೋಪಗಳನ್ನು ಮಾಡಿದ್ದರು. ಈ ಕಯರಿತು ಪೊಲೀಸ್ ಠಾಣೆಯಲ್ಲಿ (police station )ದೂರು ಕೂಡ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಸೀಮನ್ ಅವರಿಗೆ ತಮಿಳುನಾಡಿನ ಕೋರ್ಟ ನೋಟಿಸ್ ಜಾರಿ ಮಾಡಿದ್ದು ಇಂದು ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ತಮಿಳಿನಲ್ಲಿ ನಟರಾದ ವಿಜಯ್, ಸೂರ್ಯ ಮತ್ತು ದೇವಯಾನಿ ಅವರೊಂದಿಗೆ ಸೂಪರ್‌ಹಿಟ್ ಚಿತ್ರ ಫ್ರೆಂಡ್ಸ್‌ನಲ್ಲಿ ತೆರೆ ಹಂಚಿಕೊಂಡಿದ್ದ ನಟಿ ವಿಜಯಲಕ್ಷ್ಮಿ ಯನ್ನು ಸೀಮಾನ್ ಪ್ರೀತಿ ಮಾಡಿ ಮೋಸ ಮಾಡಿದ್ದಾರೆ ,ತನ್ನೊಂದಿಗೆ ಸಂಬಂಧ ಬೆಳೆಸಿ ಏಳುಬಾರಿ ಗರ್ಭಪಾತ ಮಾಡಿಸಿದ್ದಾರೆ ಅವರ ಜೊತೆ ಸಂಬಂಧ ಇತ್ತು ಎಂಬುದಕ್ಕೆ ನನ್ನ ಬಳಿ ಹಲವು ಸಾಕ್ಷಿಗಳಿವೆ ಎಂದಿದ್ದ ಅವರು ಈ ಕುರಿತು ಅವರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು. ತಮ್ಮನ್ನು ಸೀಮನ್ ಮದುವೆಯಾಗಿ ಏಳು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ಅವರು ದೂರಿನಲ್ಲಿ ಬರೆದಿದ್ದರು.
ತಿರುವಳ್ಳೂರಿನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಯನ್ನೂ ನೀಡಿರುವ ನಟಿ ವಿಜಯಲಕ್ಷ್ಮಿ, ತಾವು ನಾಮ್ ತಮಿಳರ್ ಕಟ್ಚಿ (ಎನ್.ಟಿಕೆ) ನಾಯಕರೂ ಆಗಿರುವ ಸೀಮನ್ ಜೊತೆ ಮದುವೆಯಾಗಿದ್ದೇನೆ. ಆನಂತರ ಅವರು ನನಗೆ ಮೋಸ ಮಾಡುತ್ತಲೇ ಹೋದರು. ನನ್ನ ಚಿನ್ನಾಭರಣ ದೋಚಿದರು. ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ. ಅವರಿಂದ ನನಗೆ ಲೈಂಗಿಕ ದೌರ್ಜನ್ಯ ಕೂಡ ಆಗಿದೆ ಎಂದು ಹೇಳಿಕೆ ದಾಖಲಿಸಿದ್ದಾರೆ
ಚೆನ್ನೈನ ಪೊಲೀಸ್ ಆಯುಕ್ತರ ಸಹಾಯ ಪಡೆದುಕೊಂಡು ದೂರು ದಾಖಲಿಸಿದ್ದ ವಿಜಯಲಕ್ಷ್ಮಿ ತಮಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ, ನಿನ್ನೆ ಕೂಡ ಫೇಸ್ ಬುಕ್ ಲೈವ್ ಗೆ ಬಂದು ಈ ವಿಚಾರವನ್ನೂ ಮಾತನಾಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸ್ ಅಧಿಕಾರಿಗಳು ಸೀಮನ್ ಅವರಿಗೆ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಇನ್ನು ಈ ಹಿಂದೆ ಕನ್ನಡದ ನಟ ಸೃಜನ್ ಲೋಕೇಶ್ ರವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ನಂತರ ಮದುವೆಯನ್ನು ತಿರಸ್ಕರಿಸಿದ್ದರು. ಇದಾದ ನಂತರ ಇತ್ತೀಚೆಗೆ ಅನಾರೋಗ್ಯ ಪೀಡಿತರಾಗಿದ್ದ ಅವರಿಗೆ ಆಸ್ಪತ್ರೆ ಚಿಕಿತ್ಸಾ ವೆಚ್ಚ ಸಹ ಭರಿಸಲು ಆಇರಲಿಲ್ಲ. ಇದಾದ ನಂತರ ತನ್ನ ತಾಯಿಯೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಭಿಮಾನಿಯೊಬ್ಬರ ಮನೆಯಲ್ಲಿ ತಂಗಿದ್ದರು.ಅಲ್ಲಿಯೂ ಕಿರಿಕ್ ಮಾಡಿಕೊಂಡಿದ್ದ ಈಕೆ ನಂತರ ಬೆಂಗಳೂರು, ತಮಿಳುನಾಡು ಹೀಗೆ ಬೇರೆ ಬೇರೆ ಸ್ಥಳದಲ್ಲಿ ವಾಸವಾಗಿದ್ದಾರೆ. ಆಗಾಗ ಫೇಸ್ ಬುಕ್ ಲೈವ್ ಬರುವ ಮೂಲಕ ಸುದ್ದಿಯಾಗುತಿದ್ದಾರೆ.