BREAKING NEWS
Search

ಮೇಷ ರಾಶಿಯ ವರ್ಷ ಭವಿಷ್ಯ-2023|Aries

99

ಮೇಷ : ಮೇಷ ರಾಶಿಯಲ್ಲಿ ಮುಖ್ಯವಾಗಿ ನಾಲ್ಕು ಗ್ರಹಗಳು ಈ ಬಾರಿ ಯುಗಾದಿ ನಂತರ ಮೇಷ ರಾಶಿಯ ಮೇಲೆ ಪ್ರಭಾವವನ್ನು ಬೀರುತ್ತವೆ. ಅವು ರಾಹು, ಗುರು, ಕೇತು, ಶನಿ ಗ್ರಹಗಳಾಗಿವೆ. ಇವುಗಳ ಸ್ಥಾನ ಪಲ್ಲಟದಿಂದಾಗಿ ಮೇಷ ರಾಶಿಯವರ ಜೀವನದಲ್ಲಿ ಈ ವರ್ಷದ ಯುಗಾದಿ ನಂತರ ಹಲವಾರು ಬದಲಾವಣೆಗಳಾಗಲಿವೆ.

ಕುಜ ಗ್ರಹವು ನಿಮಗೆ ಹುಟ್ಟಿದ ಸಮಯದಲ್ಲಿ ಶನಿ ಗ್ರಹವು ಕಾಲ ಸ್ಥಿತಿಯಲ್ಲಿರುತ್ತದೆ ಮತ್ತು ಉತ್ತಮ ದಶಮಾಂಶ ಇರುತ್ತದೆ- ಭುಕ್ತಿ ಇದ್ದಲ್ಲಿ ಉತ್ತಮವಾದುದಾಗಿದೆ.

ಜನವರಿಯಲ್ಲಿ ಹನ್ನೊಂದನೇ ಮನೆಯ ಶನಿ ಸಂಚಾರದ ವೇಳೆ ಲಾಭ ಕಾಣುತ್ತೀರಿ. ಆಸ್ತಿ ಲಾಭ, ವಾಹನ ಲಾಭ, ಸಾಮಾಜಿಕವಾಗಿ ಪ್ರಭಾವಿಗಳ ಜತೆಗೆ ಸಂಪರ್ಕ ಹಾಗೂ ಆ ಮೂಲಕವಾಗಿ ಸಾಮಾಜಿಕವಾಗಿ, ವೈಯಕ್ತಿಕವಾಗಿ ಲಾಭ, ವರ್ತಕರು- ಉದ್ಯಮಿಗಳಿಗೆ ವ್ಯವಹಾರದಲ್ಲಿ ಅನುಕೂಲ ಇತ್ಯಾದಿ ಉತ್ತಮ ಫಲಗಳಿವೆ.

ಮೇಷ ರಾಶಿಯಲ್ಲಿ ಗುರು ಮತ್ತು ರಾಹು ಇರುವುದರಿಂದ ಗುರುಚಾಂಡಾಲ ಯೋಗವಿರುತ್ತದೆ. ಇದರ ಪ್ರಭಾವ ನವೆಂಬರ್ ವರೆಗೂ ಇರುತ್ತದೆ. ಹಾಗಾದರೆ ಈಗಾಗಲೇ ಮೇಷ ರಾಶಿಯಲ್ಲಿರುವ ಗುರು ಮೇಷ ರಾಶಿಗೆ ಶುಭ ಫಲ ನೀಡುತ್ತಾನಾ? ಅಥವಾ ಅಶುಭ ಫಲ ನೀಡುತ್ತಾನಾ?

ಗುರು ಮೇಷ ರಾಶಿಗೆ ಉತ್ತಮ ಫಲವನ್ನೇ ಕೊಡುತ್ತಾನೆ. ಆದರೆ ರಾಹುವಿನ ನಿಯಂತ್ರಣದಲ್ಲಿರುವ ಗುರು ಸಂಪೂರ್ಣವಾಗಿ ಶುಭ ಫಲ ಕೊಡಲು ಸಾಧ್ಯವಾಗದೇ ಇದ್ದರೂ ಕೂಡ ತಕ್ಕಮಟ್ಟಿಗಾದರೂ ಒಳ್ಳೆ ಫಲವನ್ನು ಕೊಟ್ಟೇ ಕೊಡುತ್ತಾನೆ.

ಮೇಷ ರಾಶಿಯವರಿಗೆ ಶನಿದೇವನ ಕೃಪೆ ಇರುವುದರಿಂದ ವರ್ಷವಿಡೀ ಲಾಭ ಸಿಗಲಿದೆ. ಶ್ರಮದ ಫಲ ಸಿಗಲಿದೆ. ಮೇಷ ರಾಶಿಯವರಿಗೆ ಈ ವರ್ಷದ ಯುಗಾದಿ ಬಳಿಕ ನಾಲ್ಕು ಗ್ರಹಗಳಿಂದ ಉತ್ತಮ ಫಲ ಸಿಗಲಿದೆ. ಆರ್ಥಿಕ ಹೀವನ, ಕೌಟುಂಬಿಕ ಜೀವನ ಹಾಗೂ ವೃತ್ತಿ ಜೀವನ ಇತರ ಎಲ್ಲಾ ವಿಚಾರದಲ್ಲಿ ಮೇಷ ರಾಶಿಯವರಿಗೆ ಶುಭವೇ ಆಗಲಿದೆ.

ಮೇಷ ರಾಶಿಯಲ್ಲಿ ಏಪ್ರಿಲ್ 22ನೇ ತಾರೀಖು ಗುರು ಪ್ರವೇಶ ಸಮಾರಂಭ. ಈ ವರ್ಷ ಪೂರ್ತಿ ಗುರು ಮೇಷದಲ್ಲೇ ಸ್ಥಿತನಾಗಿರುತ್ತಾನೆ. ಇನ್ನೂ ರಾಹು ನೋಡಲು ಮೇಷದಲ್ಲೇ ಸ್ಥಿತನಾಗಿದ್ದಾನೆ.

ಅಕ್ಟೋಬರ್ 29ಕ್ಕೆ ಮೀನ ರಾಶಿಗೆ ರಾಹು ತಾತ್ಕಾಲಿಕವಾಗಿ ಪ್ರವೇಶ ಮಾಡುತ್ತಾನೆ. ನವೆಂಬರ್ 29ನೇ ತಾರೀಖು ಸಂಪೂರ್ಣವಾಗಿ ಮೇಷ ರಾಶಿಯಿಂದ ರಾಹು ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಹೀಗಾಗಿ ನವೆಂಬರ್ 29ರ ತನಕ ರಾಹುವಿನ ಪ್ರಭಾವ ಮೇಷ ರಾಶಿಯ ಮೇಲಿರುತ್ತದೆ.

ಅದೇ ರೀತಿ ಕೇತು ಕೂಡ ನವೆಂಬರ್ 29ರಂದು ಕನ್ಯಾರಾಶಿಗೆ ಹೋಗುತ್ತಾನೆ. ಅಕ್ಟೋಬರ್ 29ಕ್ಕೆ ತಾತ್ಕಾಲಿಕವಾಗಿ ಕೇತು ಕನ್ಯಾರಾಶಿಗೆ ಪ್ರವೇಶ ಮಾಡುತ್ತಾನೆ. ನವೆಂಬರ್ 29ಕ್ಕೆ ಸಂಪೂರ್ಣವಾಗಿ ಕೇತು ಕನ್ಯಾರಾಶಿಗೆ ಪ್ರವೇಶ ಮಾಡುತ್ತಾನೆ. ಅಲ್ಲಿಯವರೆಗೂ ತುಲರಾಶಿಯ ಫಲವನ್ನು ಕೇತು ಮೇಷ ರಾಶಿಯವರಿಗೆ ಕೊಡುತ್ತಾನೆ.

ಹನ್ನೆರಡು ಹಾಗೂ ಜನ್ಮ ರಾಶಿಯಲ್ಲಿ ಗುರು ಸಂಚಾರ ಇರುವಾಗ ಆರೋಗ್ಯ ಕಡೆಗೆ ಹಾಗೂ ನಿಮ್ಮ ವೆಚ್ಚದ ಬಗ್ಗೆ ಲಕ್ಷ್ಯ ನೀಡಿ. ಮದುಮೇಹ, ಬಿಪಿ ಸಮಸ್ಯೆ ಇರುವವರು ಆಹಾರ- ಪಥ್ಯದ ಕಡೆಗೆ ನಿಗಾ ನೀಡಿ.

ನೀವಾಗಿಯೇ ಬಲಿಷ್ಠರ ಜತೆಗೆ ವೈರತ್ವ ಮಾಡಿಕೊಳ್ಳಬೇಡಿ. ಇನ್ನು ವರ್ಷದ ಹತ್ತು ತಿಂಗಳು ನಿಮ್ಮ ಜನ್ಮ ರಾಶಿಯಲ್ಲೇ ರಾಹು ಹಾಗೂ ಏಳನೇ ಮನೆಯಲ್ಲಿ ಕೇತು ಸಂಚರಿಸುವಾಗ ದುರ್ಜನರ ಸಹವಾಸ, ಅಹಂಭಾವ ಇರುತ್ತದೆ. ಇದರಿಂದ ನಿಮ್ಮ ಆತ್ಮೀಯರೇ ದೂರ ಆಗುವ, ಸಂಸಾರದಲ್ಲಿ -ಪಾಲುದಾರಿಕೆ ವ್ಯವಹಾರದಲ್ಲಿ ಜಗಳ ಆಗಲಿದೆ. ಮಾತಿನಲ್ಲಿ ಎಚ್ಚರ ಇರಲಿ. ವರ್ಷದ ಕೊನೆ ಎರಡು ತಿಂಗಳು ಆದಾಯ- ವ್ಯಯ ಅಲ್ಲಿಂದ ಅಲ್ಲಿಗೆ ಎಂಬಂತೆ ಇರುತ್ತದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!