ಉಕ್ರೇನ್ ನಲ್ಲಿ ಸಿಲುಕಿರುವ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿನಿ-ಆತಂಕ ತೋಡಿಕೊಂಡಿದ್ದೇನು? ವಿವರ ನೋಡಿ.

2384

ಕನ್ನಡವಾಣಿ ಡೆಸ್ಕ್:- ಉಕ್ರೇನ್ ರಷ್ಯಾ ಮಧ್ಯೆ ಯುದ್ದ ಪ್ರಾರಂಭವಾಗಿದ್ದು ಉಕ್ರೇನ್ ನ ವಿವಿಧ ಭಾಗದಲ್ಲಿ ಕರ್ನಾಟಕದ 136 ಜನರು ಸಿಲುಕಿರುವ ಮೊದಲ ಹಂತದ ಮಾಹಿತಿ ದೊರೆತಿದೆ.ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಪಡೆದುಕೊಂಡಿದೆ.
ಇನ್ನು ಉಕ್ರೇನ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಹಾಗೂ ಆದಿಜಾಂಭವ ಪ್ರೌಢಶಾಲೆಯ ಅಧ್ಯಕ್ಷರಾಗಿರು ಎಸ್. ಪಕೀರಪ್ಪನವರ ಮಗಳಾದ
ಸ್ನೇಹ ಸಣ್ಣಪಕೀರಪ್ಪ ಹೊಸಮುನಿ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಸಿಲುಕಿದ್ದಾಳೆ.
ಧಾರವಾಡದಲ್ಲಿ ಪಿ.ಯು.ಸಿ ಮುಗಿಸಿ ನಂತರ ಮೆಡಿಕಲ್ ಓದಲು ಈ ಯುವತಿಯು 2018 ರಲ್ಲಿ ಉಕ್ರೇನ್ ಗೆ ತೆರಳಿದ್ದಳು.ನಾಲ್ಕನೇ ವರ್ಷದ ಎಂ.ಬಿ.ಬಿ.ಎಸ್ ಓದುತ್ತಿರುವ ಇವರು
ಉಕ್ರೇನ್ ನ ಖಾರ್ಕಿವ್ ನ ರಾಷ್ಟ್ರೀಯ ವೈದ್ಯಕೀಯ ವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತಿದ್ದಾರೆ.

ಭಾರತಕ್ಕೆ ಬರಲು ವಿಮಾನದ ಸಮಸ್ಯೆ ಸುರಕ್ಷಿತ ಸ್ಥಳದಲ್ಲಿ ವಾಸ್ತವ್ಯ-ಖಾರ್ಕಿವ್ ಸುತ್ತುವರೆದ ರಷ್ಯ ಸೈನಿಕರು.

ಸ್ನೇಹ ರವರು ಖಾರ್ಕಿವ್ ನಲ್ಲಿ ತಮ್ಮ ಸಹಪಾಠಿಗಳೊಂದಿಗೆ ಚಿಕ್ಕ ಮನೆ ಮಾಡಿಕೊಂಡು ವೈದ್ಯಕೀಯ ಶಾಸ್ತ್ರವನ್ನು ಅಧ್ಯಯನ ಮಾಡುತಿದ್ದಾರೆ. ಅವರೇ ಹೇಳುವಂತೆ ನಿನ್ನೆ ವರೆಗೂ ತರಗತಿ ನಡೆದಿತ್ತು.
ಇಂದು ಖಾರ್ಕಿವ್ ಬಳಿಯ ಸುತ್ತಾಮುತ್ತ ರಷ್ಯ ಸೈನಿಕರು ಸುತ್ತವರೆದಿದ್ದು ಆತಂಕದ ವಾತಾವರಣ ನಿರ್ಮಾಣ ಆಗಿದೆ.ಇಂದು ರಷ್ಯಾ ಸೈನಿಕರಿಂದ ನಿರಂತರ ಷಲ್ ದಾಳಿಯಿಂದ ಭೂಮಿ ಕಂಪಿಸಿದ್ದು ಭಯದಲ್ಲಿ ಇರುವಂತೆ ಆಗಿದೆ. ಹೀಗಾಗಿ ಆನ್ ಲೈನ್ ಕ್ಲಾಸ್ ನಡೆಸಿದ್ದಾರೆ.

ಕುಟುಂಬದೊಂದಿಗೆ ಸ್ನೇಹ.

ಭಾರತ ಸರ್ಕಾರ ಮೂರು ವಿಮಾನವನ್ನು ಭಾರತೀಯರನ್ನು ಕರೆತರಲು ವ್ಯವಸ್ಥೆ ಮಾಡಿತ್ತು.
ಈ ವಿಮಾನದಲ್ಲಿ ಬರಲು ಟಿಕೇಟ್ ಸಿಗದ ಕಾರಣ ಮುಂದಿನ ತಿಂಗಳ ಎಂಟನೇ ತಾರೀಕಿಗೆ ಟಿಕೇಟ್ ಬುಕ್ ಮಾಡಲಾಗಿದೆ. ಆದರೇ ತಕ್ಷಣದಲ್ಲಿ ಯುದ್ದ ಪ್ರಾರಂಭವಾಗಿದ್ದರಿಂದ ವಿಮಾನ ರದ್ದಾಗಿದೆ.
ಯುದ್ದ ಮುಂದುವರೆದರೆ ಮುಂದಿನ ತಿಂಗಳು ಮುಂಗಡ ಬುಕ್ ಮಾಡಿರುವ ವಿಮಾನ ಸಹ ಬಂದ್ ಆಗುವ ಭಯವನ್ನು ವಿದ್ಯಾರ್ಥಿನಿ ತೋಡಿಕೊಂಡಿದ್ದಾರೆ.

ಖಾರ್ಕಿವ್ ನ ರಾಷ್ಟ್ರೀಯ ವೈದ್ಯಕೀಯ ವಿದ್ಯಾನಿಲಯದಲ್ಲಿ ಕರ್ನಾಟಕದ 250 ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ಸ್ನೇಹ ರವರು ಮುಂಡಗೋಡಿನಲ್ಲಿ ಇರುವ ಅವರ ತಂದೆ ಎಸ್ .ಪಕೀರಪ್ಪನವರಿಗೆ ಮಾಹಿತಿ ನೀಡಿದ್ದು ಸದ್ಯ ಸುರಕ್ಷಿತವಾಗಿದ್ದೇವೆ ಎಂದಿದ್ದಾರೆ.
ಇನ್ನು ಪಕೀರಪ್ಪನವರು ಸಹ ಮುಖ್ಯಮಂತ್ರಿಯವರಿಗೆ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವಂತೆ ಕೋರಿಕೊಂಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!