Gokarna| ಹತ್ತು ಲಕ್ಷಕ್ಕೂ ಅಧಿನ ಬೆಲೆಯ ಚರಸ್ ವಶ

260

ಕಾರವಾರ :- ಪುರಾಣ ಪ್ರಸಿದ್ಧ ಹಾಗೂ ವಿದೇಶಿಗರ ಅಚ್ಚುಮೆಚ್ಚಿನ ಸ್ಥಳವಾದ ಕುಮಟಾ ತಾಲೂಕಿನ ಗೋಕರ್ಣದಲ್ಲಿ ವಿದೇಶಿ ಪ್ರಜೆಗಳಿಗೆ ಮಾರಾಟ ಮಾಡಲು ತಂದಿದ 10 ಲಕ್ಷ ರೂ.ಅಂದಾಜು ಬೆಲೆಯ ಒಂದೂವರೆ ಕೆಜಿ. ಗೂ ಅಧಿಕ (1648ಗ್ರಾಂ) ಚರಸ್ ನನ್ನು ಗೋಕರ್ಣ ಪೊಲೀಸರು ವಶಪಡಿಸಿಕೊಂಡು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ‌

ಬೇಲೆಹಿತ್ತಲಿನ ತುಳಸು ಹಮ್ಮು ಗೌಡ,ಮೂಲೇಕೇರಿಯ ಶ್ರೀಧರ ಗೌಡ ಮತ್ತು ಮೂಲತಃ ನೇಪಾಳದ ಹಾಲಿ ಕುಡ್ಲೆ ಬೀಚ್ ನಿವಾಸಿ ಸಂತ ಬಹದ್ದೂರ ತಮಂಗ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಓಂ ಬೀಚ್ ರಸ್ತೆಯಲ್ಲಿ ವಿದೇಶಿಗರಿಗೆ ಚರಸ್ ಮಾರಾಟಕ್ಕೆ ಯತ್ನಿಸುತಿದ್ದಾಗ ಪೊಲೀಸರು ದಾಳಿ ನಡೆಸಿ ಚರಸ್ ಮಾದಕ ದ್ರವ್ಯದ ಪಾಕೆಟ್‌ಗಳು,ಒಂದು ದ್ವಿಚಕ್ರ ವಾಹನ ಮತ್ತು 2 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಆರೋಪಿ ತುಳಸು ಮೇಲೆ ಈಗಾಗಲೆ ಮೂರು ಗಾಂಜಾ ಮಾರಾಟ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.(gokarna police )

ದಾಳಿಯಲ್ಲಿ ಪೊಲೀಸ್ ಇನಸ್ಪೆಕ್ಟರ್ ಮಂಜುನಾಥ ಎಂ.ಪಿಎಸ್‌ಐಗಳಾದ ಹರೀಶ, ಶಕ್ತಿವೇಲು,ಎಎಸ್‌ಐ ಅರವಿಂದ ಶೆಟ್ಟಿ,ಸಿಬ್ಬಂದಿ ವಸಂತ ನಾಯ್ಕರಾಜೇಶ ನಾಯ್ಕ ಸಚಿನ್ ನಾಯ್ಕನಾಗರಾಜ ನಾಯ್ಕಜಿ.ಬಿ.ರಾಣೆ,ಕಿರಣಕುಮಾರ,ಗಣೇಶ ದಾಸರ್ ಪಾಲ್ಗೊಂಡಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!