BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮಳೆ?ಹಾನಿ ಎಷ್ಟು? ವಿವರ ನೋಡಿ.

557

ಕಾರವಾರ,:-ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಭರ್ಜರಿ ಮಳೆಸುರಿದಿದೆ. ಮಳೆಯ ಹೊಡೆತಕ್ಕೆ
ಭಟ್ಕಳ ನಗರ ಭಾಗದಲ್ಲಿರುವ ಸಂಶುದ್ಧೀನ್ ಸರ್ಕಲ್ ಸಂಪೂರ್ಣ ಜಲಾವೃತವಾಗಿ ಜನರ ಮೊಣಕಾಲಿನವರೆಗೆ ರಸ್ತೆಯಲ್ಲೇ ನೀರು ತುಂಬಿದೆ.
ಸಂಶುದ್ಧೀನ್ ಸರ್ಕಲ್‌ನಲ್ಲಿ ನೀರು ತುಂಬಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಭಾರೀ ಮಳೆಯಿಂದ ರಸ್ತೆಯಲ್ಲಿ ನಡೆದಾಡಲೂ ಜನ ಪರದಾಡುವಂತಾಗಿತ್ತು. ಇನ್ನು ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ಭಾಗದಲ್ಲೂ ಮಳೆ ಬಿದ್ದಿದೆ.

ಯಾವ ತಾಲೂಕಿನಲ್ಲಿ ಎಷ್ಟು ಮಳೆ ವಿವರ ಈ ಕೆಳಗಿನಂತಿದೆ:-

ಜಿಲ್ಲೆಯಲ್ಲಿ ಕಳೆದ ಎರಡು ದಿನದ ಮಳೆಯಿಂದ ಹಾನಿಯಾಗಿದ್ದೇಷ್ಟು ವಿವರ ನೋಡಿ:-

ಮುಂಡಗೋಡ ತಾಲೂಕಿನಲ್ಲಿ 09 ಮನೆ ಭಾಗಶ: ಹಾನಿಯಾಗಿದೆ.ಕುಮಟಾ ತಾಲೂಕಿನಲ್ಲಿ 04 ಮನೆ ಭಾಗಶ: ಹಾನಿಯಾಗಿದ್ದು ಯಲ್ಲಾಪುರದಲ್ಲಿ ಮರಬಿದ್ದು ಒಂದು ಜಾನುವಾರು ಜೀವ ಹಾನಿಯಾಗಿರುತ್ತದೆ.

ಕುಮಟಾದಲ್ಲಿ ಮಳೆಯಿಂದಾಗಿ 84 ಕಂಬಗಳು, 8 ಟ್ರಾನ್ಸ್ಫರ್ಮರ್ ಗಳು ಹಾನಿಯಾಗಿದ್ದು ಅಂದಾಜು ರೂ. 15.00 ಲಕ್ಷ ಹಾನಿಯಾಗಿರುತ್ತದೆ. 6 ಜಾನುವಾರುಗಳು ಸಿಡಿಲಿನಿಂದ ಮೃತಪಟ್ಟಿರುತ್ತವೆ. 5 ಜಾನುರುಗಳಿಗೆ ಜಿಲ್ಲಾಡಳಿತದಿಂದ ₹1.20 ಲಕ್ಷ ಪರಿಹಾರ ವಿತರಿಸಿಲಾಗಿದೆ.
02 ಮನಗಳು ಪೂರ್ಣ, 35 ಮನೆಗಳು ಭಾಗಶ: ಹಾನಿಯಾಗಿರುತ್ತವೆ. – 2 ಪೂರ್ಣ ಮನೆಗಳಿಗೆ ರೂ. 1.90 ಲಕ್ಷ, 12 ಭಾಗಶ: ಮನೆಗಳಿಗೆ ರೂ. 0.58 ಲಕ್ಷ ಪರಿಹಾರ ವಿತರಿಸಲಾಗಿದ್ದು ಒಟ್ಟು 354 ಕಂಬಗಳು, 45 ಟ್ರಾನ್ಸಫರ್ಮರ್ ಗಳು ಹಾನಿಯಾಗಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!