ಭಟ್ಕಳದಲ್ಲಿ ನಿಷೇಧಾಜ್ಞೆ ಜಾರಿ:ಕಾರಣ ಏನು?.

880

ಕಾರವಾರ :- ಭಟ್ಕಳ ಪುರಸಭೆ ಕಚೇರಿ ಮೇಲಿನ ಉರ್ದು ನಾಮಫಲಕ ತೆರವುಗೊಳಿಸಿದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ
ಭಟ್ಕಳದಲ್ಲಿ ಇಂದಿನಿಂದ ನಾಳೆ ಮಧ್ಯರಾತ್ರಿವರಗೆ 144 ಸೆಕ್ಷನ್ ಜಾರಿ ಮಾಡಿ ತಾಲೂಕಿನ ತಹಶೀಲ್ದಾರ್ ಡಾ.ಸುಂಮಂತ್ ಬಿ.ಇ ಆದೇಶಹೊರಡಿಸಿದ್ದಾರೆ.

ಭಟ್ಕಳದಲ್ಲಿ 01/07/2022 ರಿಂದ 02/07/2022 ಮಧ್ಯರಾತ್ರಿವರೆಗೆ 144 ಸೆಕ್ಷನ್ ಜಾರಿಯಿದ್ದು ಪುರಸಭೆ ಸುತ್ತ 500 ಮೀಟರ್ ವರಗೆ 144 ಸೆಕ್ಷನ್ ಜಾರಿ ಇರಲಿದೆ.

ಈ ಹಿನ್ನಲೆಯಲ್ಲಿ ಭಟ್ಕಳ ಪುರಸಭೆ ಕಚೇರಿ ಬಳಿ ಬಿಗಿ ಪೊಲೀಸ್ ಬಂದವಸ್ತ್ ಕಲ್ಪಿಸಲಾಗಿದೆ.

ಘಟನೆ ಏನು ?


ಜೂನ್ 27 ರಂದು ಪುರಸಭೆ ಆಡಳಿತ ಪುರಸಭಾ ಕಾರ್ಯಾಲಯಕ್ಕೆ ಕನ್ನಡ, ಇಂಗ್ಲೀಷ್ ಹಾಗೂ ಉರ್ದು ಭಾಷೆಯಲ್ಲಿ ಇರುವ ನಾಮಫಲಕ ಅಳವಡಿಸಿದ್ದರು.

ಸರ್ಕಾರಿ ಕಚೇರಿಗೆ ಉರ್ದು ಭಾಷೆಯ ಫಲಕ ಹಾಕಿರುವ ಕುರಿತು ಕನ್ನಡ ಸಂಘಟನೆ ಹಾಗೂ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಕಚೇರಿಗೆ ಮುತ್ತಿಗೆಹಾಕಿ ಉರ್ದು ಫಲಕವನ್ನು ತೆಗೆಯುವಂತೆ ಆಗ್ರಹಿಸಿದ್ದು ಎರಡು ದಿನದ ಘಡವು ನೀಡಿದ್ದರು.

ಇನ್ನು ಉರ್ದು ಭಾಷೆಯ ಫಲಕ ತೆಗೆಯದಂತೆ ಜೂ. 29 ರಂದು ಮುಸ್ಲೀಂ ಸಮದಾಯದವರು ಪ್ರತಿಭಟನೆ ನಡೆಸಿ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಮನವಿ ನೀಡಿದ್ದರು.

ಭಾಷಾ ವಿವಾಧದ ಪರ-ವಿರೋಧಗಳು ಧರ್ಮದ ಸಂಘರ್ಷದತ್ತ ಸಾಗಿದ್ದು ಎರಡು ಸಮುದಾಯಗಳು ಸ್ವ ಪ್ರತಿಷ್ಟೆಯನ್ನಾಗಿ ಈ ವಿಷಯವನ್ನು ತೆಗೆದುಕೊಳ್ಳುವ ಮೂಲಕ ಪ್ರತಿಷ್ಟೆಯನ್ನಾಗಿಸಿತು.

ಶಾಂತಿ ಸಭೆ.
ಪುರಸಭೆ ಆಡಳಿತ ತೆಗೆದುಕೊಂಡ ತೀರ್ಮಾನದಿಂದ ಅಶಾಂತಿ ಸೃಷ್ಟಿಯಾಗುತ್ತಿರುವಯದನ್ನು ಮನಗಂಡ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಶಾಂತಿ ಸಭೆ ನಡೆಸಿ ಸರ್ಕಾರದ ಆದೇಶ ಪಾಲನೆ ಮಾಡಲು ಸೂಚಿಸಿದರು.

ಪುರಸಭೆ ಕಾರ್ಯಾಲಯಕ್ಕೆ ಅಳವಡಿಸಿದ ನಾಮ ಫಲಕ ವಿವಾದಕ್ಕೆ ಸಂಬಂಧಿಸಿದಂತೆ ಪರಸಭೆಯ ತುರ್ತು ಸಾಮಾನ್ಯ ಸಭೆಯನ್ನು ಕರೆದು ಚರ್ಚಿಸಿ ಸರ್ಕಾರದ ಸುತ್ತೋಲೆಯಂತೆ ಹಾಗೂ ನಿಯಮಾವಳಿಯಂತೆ ನಡೆದುಕೊಳ್ಳಲು ನಿರ್ಧರಿಸಿ ಉರ್ದು ಫಲಕವನ್ನು ಬಿಗಿ ಪೊಲೀಸ್ ಬಂದವಸ್ತ್ ಮೂಲಕ ನಾಮಫಲಕ ತೆಗೆದುಹಾಕಲಾಯಿತು.

ಇದರಿಂದ ಮುಸ್ಲೀಂ ಸಮುದಾಯದವರಿಗೆ ಹಿನ್ನಡೆಯಾಗಿ ಕನ್ನಡ ಸಂಘಟನೆಯವರ ಹೋರಾಟಕ್ಕೆ ಗೆಲವು ದೊರೆತಿದ್ದು ಇದೀಗ ಭಟ್ಕಳದಲ್ಲಿ ಭಾಷೆ ಸಂಘರ್ಷ ಭೂದಿ ಮುಚ್ಚಿದ ಕೆಂಡದಂತಿದೆ.

ಹೀಗಾಗಿ ಇದೀಗ ಶಾಂತಿ ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ 144 ಸೆಕ್ಷನ್ ಅನ್ನು ಪುರಸಭೆ ಕಚೇರಿಯ ಪ್ರದೇಶಕ್ಕೆ ವಿಧಿಸಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!