ಚನ್ನಬಸವೇಶ್ವರನಿಗೆ ಹರಕೆ ತೀರಿಸಲು ಚಕ್ಕಡಿಗಾಡಿಯಲ್ಲಿ ಬಂದ ಭಕ್ತ-ಚಕ್ಕಡಿ ಪಲ್ಟಿಯಾಗಿ ಸಾವು

116

ಕಾರವಾರ :- ಚಕ್ಕಡಿ ಗಾಡಿ ಪಲ್ಟಿಯಾಗಿ ಚಕ್ರ ಹಾದು ಓರ್ವ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಜನತಾ ಕಾಲೋನಿಯಲ್ಲಿ ನಡೆದಿದೆ.

ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ನಿವಾಸಿ ಈರಣ್ಣ ಧೂಪದಾಳ(21) ಮೃತ ದುರ್ದೈವಿಯಾಗಿದ್ದು ,ಉಳವಿ ಚನ್ನಬಸವೇಶ್ವರ ಜಾತ್ರೆಗಾಗಿ ಹರಕೆ ತೀರಿಸಲು ಚಕ್ಕಡಿಯಲ್ಲಿ ದಾಂಡೇಲಿ ಭಾಗದಿಂದ ಜೊಯಿಡಾದ ಉಳವಿಗೆ ಬರುತಿದ್ದ ಚಕ್ಕಡಿಗಾಡಿಗೆ ಹೆದ್ದಾರಿಯಲ್ಲಿ ಬರುತಿದ್ದ ವಾಹನವೊಂದು ಹಾರ್ನ ಮಾಡಿದ್ದರಿಂದ ಹೆದರಿದ ಎತ್ತುಗಳು ಕಾಲುವೆಗೆ ಚಕ್ಕಡಿ ಸಮೇತ ಹಾರಿದ್ದರಿಂದ ಚಕ್ಕಡಿ ಪಲ್ಟಿಯಾಗಿ ಚಕ್ಕಡಿಯ ಚಕ್ರ ದೇಹದ ಮೇಲೆ ಹರಿದು ಘಟನೆ ನಡೆದಿದೆ.ಘಟನೆ ಸಂಬಂಧ ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!