ಹಳೇ ದಾಂಡೇಲಿ ಯಲ್ಲಿ ನಿರ್ಮಾಣವಾಗಲಿದೆ ಹೊಸ ಸೇತುವೆ-ಮಳೆಗಾಲದಲ್ಲಿ ಮುಳುಗುವ ಸೇತುವೆಗೆ ಮುಕ್ತಿ.

527

ದಾಂಡೇಲಿ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಳೇದಾಂಡೇಲಿಯ ಬೈಲಪಾರ ಸೇತುವೆ ತೀರ ಹಳೆಯದಾಗಿದ್ದು, ತುಂಬಾ ಕಿರಿದಾಗಿತ್ತು. ಇದರಿಂದಾಗಿ ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಈ ಸೇತುವೆಯು ಸಂಪೂರ್ಣವಾಗಿ ಮುಳುಗಡೆಯಾಗುವದರಿಂದ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ಹಾನಿಯಾಗುತ್ತಿತ್ತು. ಈ ಸೇತುವೆಯ ಪುನರ್ ನಿರ್ಮಾಣ ಮಾಡಲು ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದರು.

ದಾಂಡೇಲಿ ಸೇತುವೆ.

ಇದೀಗ ಸೇತುವೆಯ ಪುನರ್ ನಿರ್ಮಾಣಕ್ಕಾಗಿ ಸರ್ಕಾರದಿಂದ ರೂ.11.90 ಕೋಟಿ ಅನುದಾನಕ್ಕೆ ತಾತ್ವಿಕ ಮಂಜೂರು ದೊರಕಿದ್ದು, ವಿಸ್ತ್ರುತ ಯೋಜನಾ ವರದಿಯನ್ನು ತಯಾರಿಸಲು ಸೂಚಿಸಲಾಗಿದೆ.

ಕೋವಿಡ್ ಪ್ರಚಾರಕ್ಕೆ ಬಂದ ಯುವಕ ನೀರುಪಾಲು- ಮೃತದೇಹ ಪತ್ತೆ.

ದಾಂಡೇಲಿಯ ಮೌಳಂಗಿ ಇಕೋ ಪಾರ್ಕ್ ಬಳಿ ಕಾಳಿ ನದಿಯಲ್ಲಿ ಈಜಲು ಹೋಗಿ ಕೊಚ್ಚಿಕೊಂಡು ಹೋದ ಯುವಕನ ಮೃತದೇಹವು ಚಿಕ್ಕ ಸಂಗಮದಲ್ಲಿ ಪತ್ತೆಯಾಗಿದೆ.

ಹುಬ್ಬಳ್ಳಿಯ ‘104’ ಸಹಾಯವಾಣಿಯಲ್ಲಿ ಕೆಲಸ ಮಾಡುವ ಆರು ಜನ, ದಾಂಡೇಲಿಗೆ ಕೋವಿಡ್ ಮುನ್ನೆಚ್ಚರಿಕೆಯ ಪ್ರಚಾರಕ್ಕಾಗಿ ನಗರಕ್ಕೆ ಬಂದಿದ್ದರು. ಇವರಲ್ಲಿ ಹುಬ್ಬಳ್ಳಿ ಶೀಲಾ ಕಾಲೊನಿ ನಿವಾಸಿ ಆನಂದ ಸಿಂಗ್ ಲಕ್ಷ್ಮಣ ಸಿಂಗ್ (32) ಎಂಬುವವರು ಕಾಳಿ ನದಿಯಲ್ಲಿ ಈಜಾಟದಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದನು.

ದಾಂಡೇಲಿ ಮಾನಸಾ ಅಡ್ವೆಂಚರ್ ತಂಡ ಹಾಗೂ ಜೊಯಿಡಾ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡು ದಿನದ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಪತ್ತೆ ಮಾಡಿದ್ದಾರೆ.
ಘಟನೆ ಸಂಬಂಧ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ.ವೈ.ಎಸ್.ಪಿ ಕೆ.ಎಲ್.ಗಣೇಶ, ಸಿ.ಪಿ.ಐ ಪ್ರಭು ಗಂಗನಹಳ್ಳಿ, ಗ್ರಾಮೀಣ ಠಾಣೆ ಪಿ.ಎಸ್‌.ಐ ಐ.ಆರ್.ಗಡ್ಡೇಕರ, ಯಲ್ಲಾಲಿಂಗ ಕೊಣ್ಣೂರು ಹಾಗೂ ಇತರ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿಗಳಿಗಾಗಿ ಸಂಪರ್ಕಿಸಿ /ವಾಟ್ಸ್ ಅಪ್ ಮಾಡಿ- 9741058799




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!