BREAKING NEWS
Search

ಉತ್ತರ ಕನ್ನಡ:102 ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿಗೆ 41,162 ಅರ್ಜಿಗಳು!?

2420

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಂದಾಯ ಇಲಾಖೆಯ ಖಾಲಿ ಇರುವ 102 ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿಗೆ 41,162 ಅರ್ಜಿಗಳು ಸ್ವೀಕೃತವಾಗಿವೆ. ಅರ್ಜಿ ಸಲ್ಲಿಸಿದವರಲ್ಲಿ 87 ಮಂದಿ 100ಕ್ಕೆ 100 ಅಂಕಗಳ ಫಲಿತಾಂಶ ತೆಗೆದುಕೊಂಡವರಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮುತ್ತೈ ಮುಗಿಲನ್ ರವರು ಜಿಲ್ಲೆಯಲ್ಲಿ 102 ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಇದರೊಂದಿಗೆ 2017-18, 2018-190 2+14=16 ಬ್ಯಾಕ್‌ಲಾಗ್ ಹುದ್ದೆಗಳಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 18ರಿಂದ 41 ವರ್ಷ ವಯಸ್ಸು, ಸಾಮಾನ್ಯ ವರ್ಗಕ್ಕೆ 18ರಿಂದ 35, ಉಳಿದ ಹಿಂದುಳಿದ ವರ್ಗಗಳಿಗೆ 18ರಿಂದ 38 ವರ್ಷ ವಯಸ್ಸಿನವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಅಲ್ಲದೇ ಈ ನೇಮಕಾತಿಗೆ ಅಭ್ಯರ್ಥಿಯ ದ್ವಿತೀಯ ಪಿಯು ಅಂಕವಷ್ಟೇ ಆಧಾರವಾಗಿದ್ದು, ಪಿಯು ಜೊತೆಗೆ ಪದವಿ, ಇನ್ಯಾವುದೇ ಕೋರ್ಸ್ ಮಾಡಿದ್ದರೂ ಅದು ಪರಿಗಣನೆಯಾಗುವುದಿಲ್ಲ ಎಂದು ತಿಳಿಸಲಾಗಿತ್ತು.ಅದರಂತೆ ಮೇ 10ರಂದು ಅರ್ಜಿ ಸಲ್ಲಿಸಲು ಇದ್ದ ಕೊನೆಯ ದಿನಾಂಕ ಮುಕ್ತಾಯವಾಗಿದೆ ಎಂದು ತಿಳಿಸಿದರು.

ಆನೈನ್ ಮುಖಾಂತರ ಅರ್ಜಿಗಳನ್ನು ಕರೆಯಲಾಗಿತ್ತು.ಕೊನೆಯ ದಿನಾಂಕದವರೆಗೆ 41,
162 ಅರ್ಜಿಗಳು ಬಂದಿದ್ದು, ಈ ಪೈಕಿ ಸಾಮಾನ್ಯ ವರ್ಗದಲ್ಲಿ 2600, 2ಎನಲ್ಲಿ 11,152, ಪರಿಶಿಷ್ಟ ಜಾತಿಗೆ 9,419 ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ 1: 5ರಂತೆ, ಅಂದರೆ 102 ಹುದ್ದೆಗಳಿಗೆ 510 ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಕರೆಯುತ್ತೇವೆ.ಮೆರಿಟ್ ಆಧಾರದಲ್ಲಿ ತಂತ್ರಾಂಶದಿಂದಲೇ ಈ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳ್ಳಲಿದ್ದು, ಅದರಂತೆ ಕರೆದು ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ.ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರದ ಅಂತಿಮ ಒಪ್ಪಿಗೆಗೆ ಕಳುಹಿಸಲಾಗುತ್ತದೆ. ಅಲ್ಲಿಂದ ನೇಮಕಾತಿ ಆದೇಶ ಬಂದ ಬಳಿಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನೇಮಕಾತಿ ಪ್ರಕ್ರಿಯೆ ಎಲ್ಲವೂ ಆನ್‌ಲೈನ್ ಮೂಲಕ ಆಗುವ ಕಾರಣ
ಪಾರದರ್ಶಕವಾಗಿ ಆಗಲಿದೆ. ಈ ಬಗ್ಗೆ ಯಾವುದೇ
ಗೊಂದಲಗಳು ಬೇಡ ಎಂದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!