ಹೊನ್ನಾವರ-ಅಂಗಡಿಯಲ್ಲಿ ಸಿಲೆಂಡರ್ ಸ್ಪೋಟ ತಪ್ಪಿದ ಅನಾಹುತ

971

ಹೊನ್ನಾವರ :- ಹೊನ್ನಾವರ ಪಟ್ಟಣದ ಅಂಗಡಿಯೊಂದರಲ್ಲಿ ಆಟೋ ಸ್ಟಾರ್ಟ್ ಸ್ಟವ್ ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡಿರುವ ಘಟನೆ ಪಟ್ಟಣದ ಶರಾವತಿ ವೃತ್ತದ ಶ್ರೀಗಣೇಶ್ ಮೆಟಲ್ಸ್ ಅಂಗಡಿಯಲ್ಲಿ ಸಂಭವಿಸಿದೆ.

ಆಟೊ ಸ್ಟಾರ್ಟ್ ಸ್ವವ್ ಪರಿಕರ ಜೋಡಣೆ ವೇಳೆ ಈ ಘಟನೆ ನಡೆದಿದ್ದು, ಗ್ಯಾಸ್ ಸೋರಿಕೆಯಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಸಿಲೆಂಡರಗೆ ಬೆಂಕಿ ದೊಡ್ಡ ಪ್ರಮಾಣದಲ್ಲಿ ಹೊತ್ತಿ ಉರಿದಿದ್ದು, ಬೆಂಕಿಯ ತೀವ್ರತೆಗೆ ಸಿಲೆಂಡರ್ ಸ್ಫೋಟಗೊಂಡು ಛಿದ್ರ ಛಿದ್ರವಾಗಿದೆ.ಸ್ಥಳದಲ್ಲಿ ವಾಹನಕ್ಕೆ ಕಾಯುತ್ತಿದ್ದ ಪ್ರಯಾಣಿಕರು ಕಂಗಾಲಾಗಿ ಜೀವ ಭಯದಿಂದ ಓಡಲು ಆರಂಭಿಸಿದ್ದು ಸಧ್ಯಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಘಟನಾ ಸ್ಥಳದಲ್ಲಿದ್ದ ಜನರು ತಿಳಿಸಿದ್ದಾರೆ.

ವಿಷತ ತಿಳಿಯುತ್ತಿದ್ದಂತೆ ಹೊನ್ನಾವರ ಸಿಪಿಐ ಶ್ರೀಧರ್ ಎಸ್.ಆರ್., ಪಿಎಸ್ಐ ಶಶಿಕುಮಾರ್, ಮಹಾಂತೇಶ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!