ಪರೇಶ್ ಮೇಸ್ತಾ ಪ್ರಕರಣ-ಬೀದಿಗೆ ಬಂದ ಹಿಂದೂ ಕಾರ್ಯಕರ್ತರು! ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದೇನು?

207
https://kannadavani.news/lic-recruitment-2023-careers-recruitment-of-apprentice-development-officer-post/

ಕಾರವಾರ:- ಪರೇಶ್ ಮೇಸ್ತ ಪ್ರಕರಣ( paresh mestha case)ಕಳೆದ ಚುನಾವಣೆ ವೇಳೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ ಪ್ರಕರಣ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ನಡೆದಿದ್ದ ಪರೇಶ್ ಮೇಸ್ತ ಅನುಮಾನಸ್ಪದ ಸಾವಿನ ಪ್ರಕರಣ ಬಿಜೆಪಿಗೆ ಸಾಕಷ್ಟು ಲಾಭ ತಂದು ಕೊಟ್ಟಿತ್ತು. ಸದ್ಯ ಗಲಭೆ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ಹಿಂದೂ ಕಾರ್ಯಕರ್ತರೇ ಬಿಜೆಪಿ ಶಾಸಕರ ವಿರುದ್ಧವೇ ದಿಕ್ಕಾರ ಕೂಗುವ ಹಂತಕ್ಕೆ ಬಂದಿದ್ದಾರೆ‌.

ಇದನ್ನೂ ಓದಿ:- ಪರೇಶ್ ಮೇಸ್ತಾ ಹತ್ಯೆ ಮರು ತನಿಖೆ ಆಗದಿದ್ರೆ ಬಿಜೆಪಿ ಸಂಸದ,ಶಾಸಕರ ಮನೆ ಮುಂದೆ ಧರಣಿ.(ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಕಳೆದ ಐದು ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ನಡೆದಿದ್ದ ಪರೇಶ್ ಮೇಸ್ತ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಚುನಾವಣೆಗೆ ಇನ್ನೂ ಮೂರ್ನಾಲ್ಕು ತಿಂಗಳು ಇರುವ ವೇಳೆಯಲ್ಲಿ ಕೋಮು ಗಲಭೆ ವೇಳೆ ಅನುಮಾನಸ್ಪಧವಾಗಿ ಮೃತಪಟ್ಟಿದ್ದ ಪರೇಶ್ ಮೇಸ್ತ ಪ್ರಕರಣ ಇಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿದ್ದರು. ಇನ್ನು ಪ್ರತಿಭಟನೆ ವೇಳೆ ಗಲಭೆಗಳಾಗಿ ಹಲವು ಹಿಂದೂ ಕಾರ್ಯಕರ್ತರ ವಿರುದ್ದ ಪ್ರಕರಣ ಸಹ ಅಂದು ದಾಖಲಾಗಿತ್ತು. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಕರಾವಳಿಯಲ್ಲಿ ಕಮಲ ಅರಳಿದ್ದು ಕಾಂಗ್ರೆಸ್ ಮುದುರಿತ್ತು. ಸದ್ಯ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಅಧಿಕಾರ ಮುಗಿಸುವ ಕೊನೆಯ ಹಂತ ಇದ್ದರು ದಾಖಲಾದ ಪ್ರಕರಣಗಳು ಇತ್ಯರ್ಥ ಆಗಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅಲೆದಾಡಿದ ಹಿಂದೂ ಕಾರ್ಯಕರ್ತರು ಆಕ್ರೋಶ ಗೊಂಡಿದ್ದು ಹೊನ್ನಾವರ ಪಟ್ಟಣದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ನಮ್ಮನ್ನ ರಾಜಕೀಯವಾಗಿ ಬಳಸಿಕೊಂಡು ಬೀದಿಗೆ ದಬ್ಬಿದ್ದಾರೆ ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:- ಪರೇಶ್ ಮೇಸ್ತಾ ಪ್ರಕರಣ ಆರೋಪ ಪಟ್ಟಿಯಲ್ಲಿ ಆರೋಪಿಗಳು ದೋಷಮುಕ್ತ.(ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಇನ್ನು 2017ರಲ್ಲಿ ಸುಮಾರು 95 ಜನರ ಮೇಲೆ ಗಲಭೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಶಾಸಕ ದಿನಕರ ಶೆಟ್ಟಿ ಸಹ ಇದ್ದಿದ್ದರಿಂದ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯಕ್ಕೆ ಹೋಗಿತ್ತು. ಸರ್ಕಾರ ಪ್ರಕರಣ ಕೈ ಬಿಟ್ಟಿದ್ದೇವೆ ಎಂದರು, 95 ಜನ ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣ ಕೈ ಬಿಡದ ಹಿನ್ನಲೆಯಲ್ಲಿ ಇಂದಿಗೂ ಬೆಂಗಳೂರಿಗೆ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇದರಿಂದ ತಮಗೆ ಸಾಕಷ್ಟು ಹಾನಿಯಾಗಿದೆ ಎನ್ನುವುದು ಹಿಂದೂ ಕಾರ್ಯಕರ್ತರ ವಾದ. ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದು ಈ ವಿಷಯ ತಮ್ಮ ಗಮನಕ್ಕೂ ಬಂದಿದ್ದು ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ. ಎರಡನೇ ಹಂತದಲ್ಲಿ ಎಲ್ಲರ ಮೇಲೆ ದಾಖಲಾದ ಪ್ರಕರಣ ಕೈಬಿಡುತ್ತೇವೆ ,ಗೃಹಸಚಿವರು ಸಹ ಈ ಬಗ್ಗೆ ಪೂರಕವಾಗಿದ್ದಾರೆ ಎಂದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!