BREAKING NEWS
Search

ಉತ್ತರ ಕನ್ನಡ ಜಿಲ್ಲೆ ಸಮಗ್ರ ಸುದ್ದಿ ಇಂದಿನ ವಿಶೇಷ ಏನು? ವಿವರ ನೋಡಿ.

1240

ಮುನ್ನೂರಕ್ಕೂ ಹೆಚ್ಚು ವರ್ಷ ನೆರಳು ನೀಡಿದ ಆಲದ ಮರಕ್ಕೆ ಕತ್ತರಿ!

ಸಿದ್ದಾಪುರ:- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ನಗರದಲ್ಲಿ ರಸ್ತೆ ಅಭಿವೃದ್ಧಿಗಾಗಿ ಮರಗಳ ಕಡಿತಲೆ ಮಾಡಲಾಗುತ್ತಿದೆ. ಸಿದ್ದಾಪುರ ನಗರದಲ್ಲೇ ಅತೀ ಪುರಾತನ ಆಲದ ಮರವೀಗ ಕೊಡಲಿ ಪೆಟ್ಟಿಗೆ ಬಲಿಯಾಗಿದೆ.

ಹೌದು ಹೆದ್ದಾರಿ ಅಗಲಿಕರಣಕ್ಕಾಗಿ ಕಳೆದ ಎರಡು ದಿನದಿಂದ ನಗರದ ಹೆದ್ದಾರಿಯ ಪಕ್ಕದಲ್ಲಿರುವ ಮರ ಕಡಿತ ಮಾಡಲಾಗುತ್ತಿದೆ. ಅಭಿವೃದ್ದಿಯ ಹೆಸರಿನಲ್ಲಿ ಪುರಾತನ ಆಲದ ಮರ ಕಡಿದಿರುವುದಕ್ಕೆ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊನ್ನಾವರ- ರಸ್ತೆ ಅಪಘಾತ ಮೀನುಗಾರ ಸಾವು.

ಹೊನ್ನಾವರ :- ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮ ಪಂಚಾಯತ ರಾಷ್ಟ್ರೀಯ ಹೆದ್ದಾರಿಯ ಅಗ್ರಹಾರ ಮೀನು ಪೇಟೆ ತಿರುವಿನಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಂತೋಷ ಕೃಷ್ಣ ಖಾರ್ವಿ ಮೃತ ಪಟ್ಟ ಘಟನೆ ನಡೆದಿದೆ.

ಮೀನುಗಾರಿಕೆ ಮುಗಿಸಿ ಮನೆಗೆ ತರಳುತಿದ್ದ ವೇಳೆ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಡಿವೇಡರ್ ದಾಟಿ ಪಕ್ಕದ ರಸ್ತೆಯಲ್ಲಿ ಬಿದ್ದು ಈತನ ಮೇಲೆ ಟ್ಯಾಂಕರ್ ಚಲಿಸಿದ ಪರಿಣಾಮ ಸ್ಥಳದಲ್ಲೆ ಸಂತೋಷ ಖಾರ್ವಿ ಮೃತಪಟ್ಟಿದ್ದಾರೆ.

ಅಪಘಾತಕ್ಕೆ ಐ.ಆರ್.ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಭದ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರವಾರ- ₹21, 400 ಮೌಲ್ಯದ ಅಕ್ರಮ ಗೋವಾ ಮದ್ಯ ವಶ.

ಕಾರವಾರ ತಾಲ್ಲೂಕಿನ ಹೋಟೆಗಾಳಿ ಗ್ರಾಮದ ಭೀಮಕೋಲ್ ವ್ಯಾಪ್ತಿಯ ಅರಣ್ಯದಲ್ಲಿ ಅಕ್ರಮವಾಗಿ ಹುದುಗಿಸಿಟ್ಟಿದ್ದ ಗೋವಾ ಮದ್ಯವನ್ನು ಚಿತ್ತಾಕುಲ ಠಾಣಾ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಕಿರಣ್ ಪಡುವಳಕರ್ ಎನ್ನುವವರು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಭೀಮಕೋಲ್ ಅರಣ್ಯ ಪ್ರದೇಶದಲ್ಲಿ ಗೋವಾ ಮದ್ಯವನ್ನು ಸಂಗ್ರಹಿಸಿಟ್ಟಿದ್ದಾಗಿ ಮಾಹಿತಿ ಲಭ್ಯವಾದ ಹಿನ್ನಲೆ ಕದ್ರಾ ಸಿಪಿಐ ಗೋವಿಂದರಾಜ.ಟಿ.ದಾಸರಿ ನೇತೃತ್ವದಲ್ಲಿ ದಾಳಿ ನಡೆಸಿದ್ದರು.

ಈ ವೇಳೆ ಅರಣ್ಯದಲ್ಲಿ ಅಕ್ರಮವಾಗಿ ಹುದುಗಿಸಿಡಲಾಗಿದ್ದಸುಮಾರು ₹21, 400 ಮೌಲ್ಯದ ಗೋವಾ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯಿದೆಯಂತೆ ಕಲಂ 32, 34 ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ.

ಹಳದಿಪುರ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸಲು ಮನವಿ

ಹೊನ್ನಾವರ- ಹೊನ್ನಾವರ ತಾಲೂಕಿನ ಹಳದೀಪುರ ಬಳಿ ರಾಷ್ಟ್ರೀಯ ಹೆದ್ದಾರಿಯು ಅವೈಜ್ಞಾನಿಕ ಕಾಮಗಾರಿ ಹಾಗೂ ಬೀದಿ ದೀಪಗಳಿಲ್ಲದೇ ಇತ್ತೀಚಿಗೆ ಅಪಘಾತ ಹೆಚ್ಚಾಗುತ್ತಿದ್ದು ಕೂಡಲೇ ಸಮರ್ಪಕವಾಗಿ ಕಾಮಗಾರಿ ನಡೆಸಿ ಅವ್ಯವಸ್ಥೆ ಸರಿಪಡಿಸುವಂತೆ ಹಳದಿಪುರ ಗ್ರಾಮಸ್ಥರು ಪಂಚಾಯತ್ ಗೆ ಮನವಿ ಸಲ್ಲಿಸಿದರು.

ಬಡಗಣಿ ಸೇತುವೆಯಿಂದ ಸಾಲಿಕೆರಿಯವರೆಗೆ ಬೀದಿ ದೀಪಗಳು ಇಲ್ಲದೆ ಇರುವುದರಿಂದ ರಾತ್ರಿಯ ಸಮಯದಲ್ಲಿ ಪಾದಚಾರಿಗಳು ವಾಹನ ಸವಾರರಿಗೆ ಗೋಚರಿಸದೆ ಅಪಘಾತಗಳು ಹೆಚ್ಚಾಗುತ್ತಿದೆ. ಚತುಷ್ಪಥ ರಸ್ತೆ ಕಾಮಗಾರಿ ನಡೆಸುತ್ತಿರುವ ಐ.ಆರ್ ಬಿ. ಕಂಪನಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಮಾಡಿದ ಕರಾರಿನ ಪ್ರಕಾರ ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಹಳದಿಪುರದ ಬಡಗಣಿಯಿಂದ ಸಾಲಿಕೇರಿಯವರೆಗೆ ದೀಪದ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದ್ದು ಒಂದು ವಾರದ ಗಡುವು ನೀಡಲಾಗಿದ್ದು ,ಒಂದುವೇಳೆ ಕಾಮಗಾರಿ ಸಂಪೂರ್ಣ ಮುಕ್ತಾಯವಾಗದೆ ಇದ್ದಲ್ಲಿ ಐ.ಆರ್.ಬಿ.ಕಂಪನಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಗೋಕರ್ಣ -ಪ್ರವಾಸಿಗರ ರಕ್ಷಣೆ.

ಕುಮಟಾ:- ಗೋಕರ್ಣದ ಕುಡ್ಲೆ ಬೀಚಿನಲ್ಲಿ ಮುಳುಗುತ್ತಿದ್ದ ಮೂವರನ್ನು ಲೈಪ್ ಗಾರ್ಡ್ ಮತ್ತು ಪ್ರವಾಸಿ ಮಿತ್ರ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಇಂದು ನಡೆದಿದೆ.

ರಾಘವೇಂದ್ರ (24), ಅರುಣಕೃಷ್ಣ (25), ಗ್ರೀಸ್ಮಾ(23) ರಕ್ಷಣೆಗೊಳಗಾದವರಾಗಿದ್ದಾರೆ

ಮೂವರು ಬೆಂಗಳೂರಿನಿಂದ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಲೈಪ್ ಗಾರ್ಡ್ ಮತ್ತು ಪ್ರವಾಸಿ ಮಿತ್ರ ಸಿಬ್ಬಂದಿಗಳಾದ ರಾಜು ಅಂಬಿಗ, ನಾಗೇಂದ್ರ ಕುರ್ಲೆ, ಶೇಖರ ಹರಿಕಂತ್ರ, ಉಲ್ಲಾಸ ಅವರಿಂದ ರಕ್ಷಣೆ ಮಾಡಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕದ್ರಾದ ಕೆಪಿಸಿ ಕಚೇರಿ ಮುಂದೆ ಮಾಜಿ ಶಾಸಕ ಸತೀಶ್ ಸೈಲ್ ಧರಣಿ-ಗುತ್ತಿಗೆ ನೌಕರರಿಗೆ ಕನಿಷ್ಟ ವೇತನ ನೀಡಲು ಆಗ್ರಹ.

ಕಾರವಾರ :- ಕೆಪಿಸಿ ಕದ್ರಾ ಮತ್ತು ಕೊಡಸಳ್ಳಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕನಿಷ್ಟ ವೇತನ ನೀಡುವಂತೆ ಒತ್ತಾಯಿಸಿ ಮಾಜಿ ಶಾಸಕ ಸತೀಶ್ ಸೈಲ್ ಇಂದು ಕದ್ರಾ ಕೆ.ಪಿ.ಸಿ ಕಛೇರಿ ಮುಂದೆ ಗುತ್ತಿಗೆ ಕಾರ್ಮಿಕ ರೋಡನೆ ಧರಣಿ ನಡೆಸಿದರು.

ಕೆಪಿಸಿ ಗುತ್ತಿಗೆ ದಾರರರು ತಮ್ಮ ಅಧೀನದಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಸರ್ಕಾರ ನಿಗದಿ ಪಡಿಸಿದ ಕನಿಷ್ಟ ವೇತನ ನೀಡದೆ ಸತಾಯಿಸುತಿದ್ದಾರೆ. ಈ ಕುರಿತು ಸಮಸ್ಯೆ ಬಗೆ ಹರಿಸಲು ಹಲವಾರು ಬಾರಿ ಆಡಳಿತ ಮಂಡಳಿಯ ಗಮನ ಸೆಳೆದಿದ್ದೇನೆ.
ಆದರೂ ಗುತ್ತಿಗೆದಾರರು ಸ್ಪಂದಿಸದಿದ್ದ ಕಾರಣ ಇಂದು ಅನಿವಾರ್ಯವಾಗಿ ಧರಣಿ ನಡೆಸಬೇಕಾಯಿತು ಎಂದು ಸತೀಶ್ ಸೈಲ್ ತಿಳಿಸಿದರು.
ನಂತರ ಆಡಳಿತವರ್ಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು ಅಧಿಕಾರಿಗಳಿಂದ ಪ್ರತಿಭಟನಾಗಾರರು ಪತ್ರ ಬರೆಸಿಕೊಳ್ಳುವ ಮೂಲಕ ಪ್ರತಿಭಟನೆಯನ್ನು ಹಿಂದೆ ತೆಗೆದುಕೊಳ್ಳಲಾಯಿತು.

ಶಿರಸಿ-ಅಸಭ್ಯ ನಡುವಳಿಕೆ ಆರು ವಿದ್ಯಾರ್ಥಿಗಳು ಅಮಾನತ್ತಿನ ಶಿಕ್ಷೆ.

ಶಿರಸಿಯ ಎಂ.ಇ.ಎಸ್ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಮತ್ತು ದೇವರ ಪವಿತ್ರ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿ ಮದ್ಯ ಸೇವಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಆರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತ್ತು ಮಾಡಲಾಗಿದೆ.

ಕೆಲವು ವಿದ್ಯಾರ್ಥಿಗಳು ಕಾಲೇಜು ಸಮವಸ್ತ್ರದಲ್ಲೇ ಮದ್ಯ ಸೇವಿಸಿ ಮದ್ಯದ ಅಮಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರುವ ಜೊತೆಗೆ ಕಾಲೇಜು ಆವರಣದಲ್ಲೂ ಕೆಟ್ಟದಾಗಿ ನಡೆದುಕೊಂಡಿದ್ದು ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಟಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಕಾಲೇಜು ಆಡಳಿತ ಈ ನಿರ್ದಾರ ತೆಗೆದುಕೊಂಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!