ಕಾರು ಅಡ್ಡಗಟ್ಟಿ ವ್ಯಾಪಾರಿಗಳಿಂದ ಆರುಲಕ್ಷ ಹಣ ದರೋಡೆ

1802

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಯಲ್ಲಾಪುರ -ಹುಬ್ಬಳ್ಳಿ ರಸ್ತೆ ಮಾರ್ಗದ ಮಾಸ್ತಿಕಟ್ಟೆ ಸಮೀಪ ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ವ್ಯಕ್ತಿಗಳು ಹುಬ್ಬಳ್ಳಿ ಮೂಲದ ವ್ಯಾಪಾರಿಗಳ ಕಾರನ್ನು ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಿ ಸುಮಾರು ₹6 ಲಕ್ಷ ದೋಚಿದ ಘಟನೆ ನಡೆದಿದೆ.

ಹುಬ್ಬಳ್ಳಿಯಿಂದ ಬಂದು ಕಾರವಾರ ಮತ್ತು ಅಂಕೋಲಾ ಸುತ್ತ ಮುತ್ತ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಪೂರೈಸಿ ಹಣ ಸಂಗ್ರಹಿಸಿ ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಹುಬ್ಬಳ್ಳಿ ನಿವಾಸಿಗಳಾದ ವಿನೋದ್ ಬಾಲಚಂದ್ರ ಮತ್ತು ಕೇವಲ್ ಚಂದ್ ಎನ್ನುವವರ ಮುಖ ಮತ್ತು ಕೈಕಾಲುಗಳ ಮೇಲೆ ಹಲ್ಲೆ ನಡೆಸಲಾಗಿದೆ,ಕಾರಿನ ಗ್ಲಾಸನ್ನು ಪುಡಿಮಾಡಿ ಹಣದ ಬ್ಯಾಗನ್ನು ಹೊತ್ತೊಯ್ಯಲಾಗಿದೆ.

ಈ ಕುರಿತಂತೆ ವಿನೋದ್ ಬಾಲಚಂದ್ರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು
ಆರಕ್ಷಕ ನಿರೀಕ್ಷಕ ಸಂತೋಷ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಣ ಎಗರಿಸಿರುವವರು ವ್ಯಾಪಾರಿಗಳ ಪರಿಚಯಸ್ಥರೇ ಅಥವಾ ಆಗುಂತಕರೇ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದ್ದು
ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!